ರೇಪಿಸ್ಟ್ ಗಳಿಗೆ ಜಾಮೀನು ಬೇಡ: ಅತ್ಯಾಚಾರಿಗಳ ಗ್ರಾಮಸ್ಥರ ಒಮ್ಮತದ ತೀರ್ಮಾನ

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಮಧ್ಯಪ್ರದೇಶ ಮೂಲದ 22 ವರ್ಷದ ಬಿಪಿಒ ಉದ್ಯೋಗಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧ ಬಂಧಿತರಾದ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಕಡೂರು: ಕಳೆದ ಶನಿವಾರ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಮಧ್ಯಪ್ರದೇಶ ಮೂಲದ 22 ವರ್ಷದ ಬಿಪಿಒ ಉದ್ಯೋಗಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧ ಬಂಧಿತರಾದ ಸನೀಲ್ ಊರು ಸಖರಾಯಪಟ್ಟಣ ಹೋಬಳಿ ಎಸ್. ಬಿದರೆ ಮತ್ತು ಯೋಗೀಶ್ ಸ್ವಗ್ರಾಮ
ಸಿಂದಗೆರೆಯಲ್ಲಿ ಈ ಇಬ್ಬರದ್ದೇ ಚರ್ಚೆ.

ಸುನೀಲ್ ಮತ್ತು ಯೋಗೀಶ್ ಅತ್ಯಾಚಾರ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಊರಿನವರು ತುಂಬಾ ಆಕ್ರೋಶ ವ್ಯಕ್ತಪಡಿಸಿದ್ದು, ಯೋಗೀಶ್ ಊರಿಗೆ ಬಂದರೆ ರಕ್ಷಣೆಗೆ ಗ್ರಾಮದ ಯಾರೂ ಹೋಗಬಾರದು ಹಾಗೂ ಜಾಮೀನು ಸಹ ನೀಡಬಾರದು ಎಂಬ ನಿಲವು ವ್ಯಕ್ತಪಡಿಸಿದ್ದಾರೆ.
ಸುನೀಲ್ ಮತ್ತು ಯೋಗೀಶ್ ಇಬ್ಬರೂ ಪರಸ್ಪರ ಸಂಬಂಧಗಳೆಂಬುದು ಇಲ್ಲಿ ಕುತೂಹಲದ ಸಂಗತಿ. ಸುನೀಲ್ ಎಸ್ .ಬಿದರೆಯಲ್ಲಿ ವಾಸವಾಗಿರುವ ಓಂಕಾರೇಗೌಡ ಪಾರ್ವತಮ್ಮ ಎಂಬುವರ ಪುತ್ರ. ಮೂಲತಃ ಕೃಷಿ ಕುಟುಂಬ. ಊರಿನಲ್ಲಿ ಅಣ್ಣ ಪ್ರಶಾಂತ್ ಸೇರಿ ನಾಲ್ವರಿದ್ದು, ಸುನಿಲ್ ತನ್ನ ಚಿಕ್ಕಪ್ಪ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಶಿವಾನಂದ ಟ್ರಾವೆಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದ. ಆನಂತರ ಸ್ವಂತವಾಗಿ ಕಳೆದ ನಾಲ್ಕು ವರ್ಷದಿಂದ ಟಿ.ಟಿ. ವಾಹನ ಹೊಂದಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನುತ್ತಾರೆ ಬಿದರೆ ಗ್ರಾಮಸ್ಥರು.

ಆದರೆ ಇತ್ತೀಚೆಗೆ ಸುನಿಲ್ ಮದ್ಯಸೇವನೆ ಚಟಕ್ಕೆ ಬಿದ್ದು, ಸಹಚರರೊಂದಿಗೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವುದು ತುಂಬಾ ಆಶ್ಚರ್ಯ ಉಂಟು ಮಾಡಿದೆ. ತುಂಬು ಕುಟುಂಬದಲ್ಲಿದ್ದ ಈತನಿಗೆ ಯಾವುದೇ ತೊಂದರೆಯಿರಲಿಲ್ಲ. ಉದ್ಯೋಗದ ನೆಪದಲ್ಲಿ ಬೆಂಗಳೂರು ಸೇರಿ ಇಂಥ ಕೃತ್ಯದಲಿ ಭಾಗಿಯಾಗಿದ್ದಾನೆಂದರೆ, ನಂಬುವುದಕ್ಕೆ ಆಗುತ್ತಿಲ್ಲ ಎಂದು ಸುನಿಲ್ ತಾಯಿ ಪಾರ್ವತಮ್ಮ ಕಣ್ಣೀರಿಡುತ್ತಾರೆ.

2ನೇ ಆರೋಪಿ ಸಖರಾಯಪಟ್ಟಣ ಹೋಬಳಿ ಸಿಂದಗೆರೆಯ ಲೇಟ್ ಮಲ್ಲೇಶಪ್ಪ ಎಂಬುವರ ಪುತ್ರ ಯೋಗೀಶ್ (27)ಗೆ ಸುನಿಲ್ ಸಂಬಂಧದಲ್ಲಿ ಮಾವನ ಮಗನಾಗಬೇಕು. ಸಿಂದಗೆರೆಯಲ್ಲಿ ಯೋಗೀಶ್ ಹೆಸರಲ್ಲಿ 2 ಎಕರೆ ಜಮೀನಿದೆ. ಈತ ಕೃಷಿ ಸಂದರ್ಭದಲ್ಲಿ ತನ್ನ ಮಾವನ ಟ್ರಾಕ್ಟರ್ ಪಡೆದು ಜಮೀನು ಕೆಲಸ ಕೈಕೊಳ್ಳುತ್ತಿದ್ದ. ಹಾಗೂ ಊರಿನಲ್ಲಿ ಬಾಡಿಗೆ ಟ್ರಾಕ್ಟರ್ ಓಡಿಸುತ್ತಿದ್ದ ಎನ್ನುತ್ತಾರೆ ಗ್ರಾಮಸ್ಥರು. ದುಡಿಮೆಗಾಗಿ 5 ವರ್ಷದ ಹಿಂದೆ ಬೆಂಗಳೂರಿಗೆ ತೆರಳಿ ಸುನಿಲ್‍ನೊಂದಿಗೆ ಒಟ್ಟಿಗೆ ವಾಸಿಸುತ್ತಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಯೋಗೀಶ್ ತಂದೆ ಮಲ್ಲೇಶಪ್ಪ ನಿಧನರಾಗಿ 10 ವರ್ಷ ಕಳೆದಿದೆ. ಯೋಗೀಶ್‍ನ ಅಣ್ಣ ಚೇತನ್ ಕೂಡಾ ಉದ್ಯೋಗಕ್ಕಾಗಿ 6 ವರ್ಷದ ಹಿಂದೆಯೇ ಬೆಂಗಳೂರು ಸೇರಿದ್ದು, ಅವರು ಬೇರೆ ಇದ್ದಾರೆ. ಸುನಿಲ್ ಹಾಗೂ ಯೋಗೀಶ್ ಇಬ್ಬರೂ ಒಟ್ಟಿಗೆ ಕೆಲಸ ಮಾಡಿಕೊಂಡಿದ್ದರು. ಆನಂತರ ಸ್ವಂತ ಟ್ರಾವೆಲ್ಸ್ ಮಾಡಿಕೊಂಡು ಇಬ್ಬರೂ ಒಟ್ಟಿಗೆ ವಾಸವಿದ್ದರು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com