

ಬೆಂಗಳೂರು: ನಂದಿನಿ ಹಾಲಿನ ದರ ಇಂದಿನಿಂದ ಏರಿಕೆಯಾಗಿದೆ. ಪ್ರತಿ ಲೀಟರ್ ಹಾಲಿನ ದರವನ್ನು ಕೆಎಂಎಫ್ ರು.4 ಏರಿಕೆ ಮಾಡಿದ್ದು, ಹೊಸ ದರ ಮಂಗಳವಾರದಿಂದಲೇ ಜಾರಿಗೆ ಬರಲಿದೆ. ಮೊಸರಿನ ದರವೂ ಏರಿಕೆಯಾಗಿದೆ. ನಂದಿನಿ ಹಾಲು ಮತ್ತು ಮೊಸರಿನ ಹೊರತಾಗಿ ಮಿಕ್ಕ ಯಾವುದೇ ಉತ್ಪನ್ನಗಳ ಬೆಲೆಯಲ್ಲಿ ಬದಲಾವಣೆ ಇರುವುದಿಲ್ಲ.
ಮೊಸರಿನ ದರ ಪ್ರತಿ ಕೆಜಿಗೆರು.2 ಹೆಚ್ಚಳವಾಗಲಿದೆ. ಪ್ರಸ್ತುತ ಇರುವ ಪ್ಯಾಕಿಂಗ್ ಮೆಟಿರೀಯಲ್ ದಾಸ್ತಾನು ಮುಗಿಯುವವರೆಗೂ ಹಾಲಿನ ಪ್ಯಾಕ್ ಮೇಲೆ ಹಳೆಯ ದರ ಮುದ್ರಿತವಾಗಿರುತ್ತದೆ. ಆದರೆ ಪರಿಷ್ಕೃತ ದರ ದಲ್ಲೇ ಮಾರಾಟ ಮಾಡಲಾಗುತ್ತದೆ. ಹಳೆ ಯ ದಾಸ್ತಾನು ಮುಗಿದ ಬಳಿಕ ಹೊಸ ದರ ಮುದ್ರಿತ ಪ್ಯಾಕ್‍ಗಳಲ್ಲಿ ಹಾಲು ಮಾರಾಟ ಮಾಡಲಾಗುವುದು ಎಂದು ಕೆಎಂಎಫ್ ಮಾರುಕಟ್ಟೆ ನಿರ್ದೇಶಕರು ತಿಳಿಸಿದ್ದಾರೆ.
ಎಲ್ಲೆಲ್ಲಿ ಯಾವ ದರ?: ಬೆಂಗಳೂರು, ತುಮಕೂರು, ಮಂಡ್ಯ, ಕೋಲಾರ್, ಮದರ್ ಡೇರಿ, ಮೈಸೂರು, ಚಾಮರಾಜನಗರ, ಹಾಸನ, ಶಿವಮೊಗ್ಗ ಜಿಲ್ಲೆಯಲ್ಲಿ ಈ ಮೊದಲು ಹಾಲಿನ ದರರು.29 ಇದ್ದದ್ದು ಈಗರು.33 ಆಗಲಿದೆ.
ಹೋಮಿಜಿನೈಜಡ್ ಟೋನ್ಡ್ ಹಾಲುರು.30 ಇದ್ದದ್ದುರು.34, ಹೋಮೋಜಿನೈಜಡ್ ಕೌವ್ ಹಾಲು ರು.33 ಇದ್ದದ್ದುರು.37 ಹಾಗೂ ಶುಭಂ ಎಸ್‍ಟಿಡಿ ಹಾಲು ರು.35 ಇದ್ದದ್ದು ರು.39, ಮೋಜಿನೈಜಡ್ ಎಸ್‍ಟಿ ಹಾಲುರು.36 ಇದ್ದದ್ದುರು.40, ಸಮೃದ್ಧಿ ಹಾಲುರು.38 ಇದ್ದದ್ದುರು.42, ಸ್ಪೆಷಲ್ ಮಿಲ್ಕ್ರು.35 ಇದ್ದದ್ದುರು.39, ಡಬಲ್ ಟೋನ್ಡ್ ಹಾಲುರು.28 ಇದ್ದದ್ದುರು.32 ಆಗಲಿದೆ.