ಜಿಲ್ಲಾ ಸುದ್ದಿ

ಕೆಪಿಎನ್‍ಗೆ 12ನೇ ವಾರ್ಷಿಕೋತ್ಸವ

ಕೆಪಿಎನ್‍ಗೆ 12ನೇ ವಾರ್ಷಿಕೋತ್ಸವ
ರಾಷ್ಟ್ರಮಟ್ಟದಲ್ಲಿ ಸಂಸ್ಥೆ ಬೆಳೆದಿರುವುದು ಪ್ರಶಂಸನೀಯ: ಎಚ್ ಡಿ ದೇವೇಗೌಡ
Published On :

ಬೆಂಗಳೂರು: ಕರ್ನಾಟಕ ಫೋಟೋ ನ್ಯೂಸ್ ಸಂಸ್ಥೆ ದಶಕದ ರಾಜ್ಯ ರಾಜಕಾರಣ, ಸಂಸ್ಕೃತಿ ಮತ್ತಿತರ ವಿದ್ಯಮಾನಗಳನ್ನು ಛಾಯಾಚಿತ್ರ ರೂಪದಲ್ಲಿ ಸೆರೆ ಹಿಡಿದು ಅವುಗಳಲ್ಲಿ ಆಯ್ದ ಫೋಟೋಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ಮೂಲಕ ಒಳ್ಳೆಯ ಕೆಲಸ ಮಾಡಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಶುಕ್ರವಾರ ಪ್ರಶಂಸಿಸಿದರು.

ಶುಕ್ರವಾರ ನಗರದಲ್ಲಿ ಕೆಪಿಎನ್ ಆಯೋಸಿದ್ದ 12ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಎ ಪಿಕ್ಚರ್ ಆಫ್ ಕರ್ನಾಟಕ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಸಂಸ್ಥೆ ರಾಷ್ಟ್ರೀಯ ಮಟ್ಟಕ್ಕೆ ಬೆಳೆದಿರುವುದು ಅತ್ಯಂತ ಸಂತಸದ ವಿಚಾರ, ಮುಂದಿನ ದಿನಗಳಲ್ಲಿಯೂ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಕರ್ನಾಟಕ ಫೋಟೋ ನ್ಯೂಸ್ ಸಂಸ್ಥೆ ಆರಂಭವಾದ ದಿನದಿಂದ ಸೆರೆ ಹಿಡಿದ ಸುದ್ದಿ ಚಿತ್ರಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿರುವ ಕೆಲಸ ಶ್ಲಾಘನೀಯವಾಗಿದ್ದು ಈ ಪುಸ್ತಕ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದರು.

ಛಾಯಾಗ್ರಾಹಕರು ದೃಶ್ಯಗಳಿಗೆ ಜೀವ ತುಂಬುವ ಕಲೆಗಾರರಂತೆ ಕೆಲಸ ಮಾಡುತ್ತಾರೆ. ಕಳೆದ 12 ವರ್ಷಗಳಲ್ಲಿ ಸಂಸ್ಕೃತಿ, ರಾಜಕಾರಣ, ಹಳ್ಳಿ ಹಾಗೂ ನಗರಗಳ ಸೌಂದರ್ಯವನ್ನಾಧರಿತ ಚಿತ್ರಗಳನ್ನು ಛಾಯಾಗ್ರಾಹಕರು ಸೆರೆ ಹಿಡಿಯುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದು, ಇದರಲ್ಲಿ ಕೆಪಿಎನ್ ಪ್ರಮುಖ ಪಾತ್ರವಹಿಸುವ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪತ್ರಿಕೆಗಳಿಗೆ ಛಾಯಾಚಿತ್ರಗಳನ್ನು ನೀಡಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಎನ್ ಸಂಪಾದಕ ಸಾಗ್ಗೆರೆ ರಾಮಸ್ವಾಮಿ, ರಾಜ್ಯದ ಎಲ್ಲ ಭಾಗಗಳ ಛಾಯಾಚಿತ್ರಗಳು ಒಂದೇ ಕಡೆ ಸಿಗುವಂತೆ ಮಾಡುವ ಉದ್ದೇಶದಿಂದ ಸಂಸ್ಥೆ ಆರಂಭಿಸಲಾಗಿದ್ದು, ಸಂಸ್ಥೆ ಆರಂಭಿಸಿದಾಗ ಹತ್ತು ಪತ್ರಿಕೆಗಳು ಮಾತ್ರ ಚಂದಾದಾರರಾಗಿದ್ದವು. ಆದರೆ ಈಗ 40 ಪತ್ರಿಗಳೂ ಸಂಸ್ಥೆಯಿಂದ ಛಾಯಾಚಿತ್ರಗಳನ್ನು ಪಡೆಯುತ್ತಿದ್ದು, ಸಂಸ್ಥೆ ಹೊರತಂದಿರುವ ಕೃತಿಯಲ್ಲಿ 18 ಕ್ಷೇತ್ರಗಳಿಗೆ ಸಂಬಂಧಿಸಿದ ಛಾಯಾ ಚಿತ್ರಗಳಿವೆ. ರಾಜ್ಯದಲ್ಲಿನ ದಶಕದ ರಾಜಕೀಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವಿಷಯಗಳ ಕುರಿತು ಬೆಳಕು ಚೆಲ್ಲುತ್ತದೆ ಎಂದು ಹೇಳಿದರು. ರಾಜ್ಯಸಭಾ ಸದಸ್ಯ ಪ್ರೊ.ರಾಜೀವ್ ಗೌಡ, ಆಹಾರ ತಜ್ಞ ಕೆ.ಸಿ.ರಘು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.