ನಾಯಿಗಳ ದಾಳಿ; ಬಾಲಕನಿಗೆ ಗಾಯ
ನರಸಿಂಹರಾಜಪುರ: ಹಳೇ ಪೇಟೆಯ ಹೌಸಿಂಗ್ ಬೋರ್ಡ್ ಕಾಲೋನಿಯ 8 ವರ್ಷದ ಬಾಲಕನ ಮೇಲೆ ಭಾನುವಾರ ಬೆಳಿಗ್ಗೆ ಬೀದಿ ನಾಯಿಗಳು ದಾಳಿ ಮಾಡಿ ಗಾಯ ಗೊಳಿಸಿದ ಘಟನೆ ನಡೆದಿದೆ.
ಹೌಸಿಂಗ್ ಬೋರ್ಡ್ ಕಾಲೋನಿಯ ಅಶ್ವಕ್ ಆಲಿ ಎಂಬ ಬಾಲಕ ಮನೆಯ ಮುಂದೆ ಆಟವಾಡುತ್ತಿದ್ದಾಗ ನಾಯಿಗಳ ಹಿಂಡು ದಿಡೀರ್ ಬಾಲಕನ ಮೇಲೆ ಎರಗಿದೆ. ಬಾಲಕನ ಬಲಗೈ ಮಾಂಸ ಸಮೇತ ಕಿತ್ತು ಬಂದಿದೆ. ಅಕ್ಕ ಪಕ್ಕದ ಮನೆಯವರು ಬಾಲಕನ್ನು ರಕ್ಷಿಸಿದ್ದು, ತಕ್ಷಣ ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಗೆ ಬಾಲಕನನ್ನು ಸೇರಿಸಿ ಚಿಕಿತ್ಸೆ ನೀಡಲಾಯಿತು.
ಸಾರ್ವಜನಿಕರ ಆಕ್ರೋಶ: ಪಟ್ಟಣದಲ್ಲಿ ಬೀದಿ ನಾಯಿಗಳ ಹಿಂಡು ಸಂಚರಿಸುತ್ತಿದ್ದು, ಆಗಾಗ ಸಾರ್ವಜನಿಕರ ಮೇಲೆ ದಾಳಿ ನಡೆಯುತ್ತಿದೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡುತ್ತಿದ್ದರೂ ಪಪಂ ಕ್ರಕಮ ತೆಗೆದುಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಪಂ ಬೀದಿ ನಾಯಿಗಳನ್ನು ಹಿಡಿದು ಕೊಲ್ಲದಿದ್ದರೆ ನಾವೇ ಬೀದಿ ನಾಯಿಗಳನ್ನು ಕೊಲ್ಲುತ್ತೇವೆ ಎಂದು ಈ ಸಂದರ್ಭದಲ್ಲಿ ಸೇರಿದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದರು.
ಶೀಘ್ರದಲ್ಲೇ ಕಾರ್ಯಾಚರಣೆ: ಬೀದಿ ನಾಯಿಗಳ ಕಾಟದ ಬಗ್ಗೆ ಪಪಂ ಮುಖ್ಯಾಧಿಕಾರಿ ನಾಗೇಂದ್ರ ಕನ್ನಡಪ್ರಭದೊಂದಿಗೆ ಮಾತನಾಡಿ, ಪಟ್ಟಣದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿರುವುದು ನಿಜ. ಮಂಗಳವಾರದಿಂದಲೇ ಕಾರ್ಯಾಚರಣೆ ಪ್ರಾರಂಭಿಸಲಾಗುವುದು. ಸಾಕು ನಾಯಿಗಳನ್ನು ಮನೆಯಲ್ಲೇ ಕಟ್ಟಲು ಪ್ರಚಾರ ಮಾಡಲಾಗುವುದು. ಬೀದಿ ನಾಯಿಗಳನ್ನು ಹಿಡಿದು ದೂರ ಸಾಗಿಸಲಾಗುತ್ತದೆ. ಬೀದಿ ನಾಯಿಗಳನ್ನು ಕೊಂದರೆ ಅಪರಾಧವಾಗುತ್ತದೆ. ಪ್ರಾಣಿ ದಯಾ ಸಂಘದವರು ವಿರೋಧಿಸುತ್ತಾರೆ. ಮೀನು ಮಾರ್ಕೆಟ್ ಬಳಿಗೆ ಬೀದಿ ನಾಯಿಗಳು ಬರುತ್ತಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

