ಸಂಭ್ರಮದ ಈದ್ ಸೌಹಾರ್ದ ಕೂಟ
ಶಿರಾಳಕೊಪ್ಪ: ನಾವು ಈ ಭೂಮಿಯಲ್ಲಿ ಹುಟ್ಟಿರುವದೇ ಪುಣ್ಯದ ಸಂಗತಿ ಎಂದು ಜಮಾಅತೆ ಇಸ್ಲಾಮಿ ಹಿಂದ್ ಮಾಜಿ ಜಿಲ್ಲಾ ಸಂಚಾಲಕ ಚಮನ್ ಮಿಯಾ ತಿಳಿಸಿದರು.
ಪಟ್ಟಣದಲ್ಲಿ ರಂಜಾನ್ ಹಬ್ಬ ಆಚರಣೆಯಲ್ಲಿ ಸಿಬಿ ಮಾರ್ಕೇಟ್ ಮಹಡಿಯಲ್ಲಿ ಏರ್ಪಡಿಸಿದ್ದ ಈದ್ ಸೌಹಾರ್ಧಕೂಟದಲ್ಲಿ ಮಾತನಾಡಿ, ಸೌಹಾರ್ದತೆಯ ಕಾರ್ಯಕ್ರಮಗಳು ನಡೆಯಬೇಕು. ಯಾವುದೆ ಹಬ್ಬಕ್ಕೆ ಕಾರ್ಯಕ್ರಮ ಮೀಸಲಾಗಬಾರದು ಎಂದರು.
ಕದಂಬ ಕಾಲೇಜಿನ ಉಪನ್ಯಾಸಕ ಗುರುಪ್ರಸಾದ ಮಾತನಾಡಿ, ಎಲ್ಲಿ ಧರ್ಮ ಮತ್ತು ಜಾತಿ ವಿಜೃಂಭಿಸುತ್ತವೆಯೋ ಅಲ್ಲಿ ಸಾವುನೋವು ಸಂಭವಿಸುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಮಾಅತೆ ಇಸ್ಲಾಮಿಹಿಂದ್ ಅಧ್ಯಕ್ಷ ನಜೀರ್ ಅಹಮದ್ ಮಾತನಾಡಿ, ಖುರಾನ್ನಲ್ಲಿ ಮುಸ್ಲಿಮರಿಗೆ ಮಾರ್ಗದರ್ಶನವೆಂದು ಇಲ್ಲ. ಬದಲಾಗಿ ಮಾನವರಿಗೆ ಮಾರ್ಗದರ್ಶನ ವೆಂದು ಹೇಳಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಹಿಂದು-ಮುಸ್ಲಿಮರು ಒಟ್ಟಾಗಿ ಸಿಹಿ ಸೇವಿಸುವ ಮುಖಾಂತರ ಪರಸ್ಪರ ಆತ್ಮಿಯತೆ ಹಂಚಿಕೊಂಡರು.
ಫಜೀತಿಯಾದ ಪಪಂ ಸದಸ್ಯರ ಪಾಡು
ಮೂಡಿಗೆರೆ: ಪಪಂಗೆ ಆಯ್ಕೆಯಾದ 11 ಜನ ಸದಸ್ಯರು ತಲೆ ಮರೆಸಿಕೊಂಡು ಓಡಾಡಬೇಕಾದ ಸ್ಥಿತಿ ಬಂದೊದಗಿದೆ.
ಚುನಾಯಿತರಾಗಿ 150 ದಿನ ಕಳೆದರೂ 11 ಜನ ಸದಸ್ಯರು ಇನ್ನು ನಿಯೋಜಿತ ಸದಸ್ಯರಾಗೇ ಉಳಿದಿದ್ದಾರೆ. ಅಭಿವೃದ್ಧಿಕಾರ್ಯ ಮರೀಚಿಕೆಯಾಗಿದ್ದು, ಸಾರ್ವಜನಿಕರ ಅಳಲನ್ನು ಆಲಿಸುವಂತರಿಲ್ಲಾ, ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸುವಲ್ಲಿ ರಾಜ್ಯ ಸರ್ಕಾರದ ವಿಳಂಬ ನೀತಿಯೇ ಇದಕ್ಕೆ ಕಾರಣವಾಗಿದೆ. 150 ದಿನಗಳ ಅಜ್ಞಾತವಾಸದಿಂದ ಬೇಸತ್ತಿರುವ ಸದಸ್ಯರು ಈಗ ಪಕ್ಷ ಬೇದ ಮರೆತು ರಾಜ್ಯ ಸರ್ಕಾರವನ್ನು- ಖಂಡಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದೆ. ಆದರೆ ಈ ಬಾರಿ ಆಮಂತ್ರಣ ಪತ್ರದಲ್ಲಿ ಪಪಂ ಸದಸ್ಯರ ಹೆಸರನ್ನು ಕೈಬಿಡಲಾಗುತ್ತಿದೆ. ಕಾರಣ ಪ್ರೊಟೋಕಾಲ್ ಅಡ್ಡಿಯಾಗುತ್ತಿರುವುದು. ಸ್ವಾತಂತ್ರ್ಯ ದಿನಾಚರಣೆ ಆಮಂತ್ರಣ ಪತ್ರದಲ್ಲಿ ಪಪಂ ಸದಸ್ಯರ ಕೈ ಬಿಟ್ಟಲ್ಲಿ ಕಾರ್ಯಕ್ರಮಕ್ಕೆ ಗೈರು ಹಾಜರಾಗುವುದರ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಕೆಲವು ಸದಸ್ಯರು ಪತ್ರಕರ್ತರಿಗೆ ತಿಳಿಸಿದ್ದಾರೆ.
ಬೀದಿ ನಾಯಿಹಾವಳಿ: ಪಟ್ಟಣದಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಹಾಗೂ ಬಿಡಾಡೀ ದನಗಳ ಹಾವಳಿ ಅಧಿಕವಾಗಿದ್ದು. ಅವುಗಳನ್ನು ನಿಯಂತ್ರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಬೀದಿ ನಾಯಿಗಳು ಶಾಲಾ ಮಕ್ಕಳನ್ನು ಕಚ್ಚಲು ಅಟ್ಟಿಸಿಕೊಂಡು ಹೋಗುತ್ತಿವೆ. ಪಪಂಗೆ ದೂರು ನೀಡಿದರೆ ನಾಯಿಗಳನ್ನು ಹಿಡಿಯಲು ಮೀನಮೇಷ ಎಣಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

