ಚಿಕ್ಕಮಗಳೂರು

'ಬಿಜೆಪಿ ಗೆಲವು ಖಚಿತ '

Published On :

ಕ.ಪ್ರ.ವಾರ್ತೆ, ಕಡೂರು ಮೇ.2 ಬೀರೂರಿನ ಹೆಬ್ಬೆಯಿಂದ ಕಡೂರು ತಾಲೂಕಿಗೆ ನೀರು ಹರಿಸುವ ಯೋಜನೆ ಜಾರಿ, ಭದ್ರಾ ಡ್ಯಾಂನಿಂದ ಕುಡಿಯುವ ನೀರು ತರಲು ಕಂಕಣಬದ್ದನಾಗಿ ಕಣಕ್ಕಿಳಿದು ಮಾಡುತ್ತಿರುವ ಸೇವೆ ಮತ್ತು ಬಿಜೆಪಿ ಸರ್ಕಾರದ ಸಾಧನೆಯಿಂದ ಎಲ್ಲಾ ಸಮುದಾಯ ತಮಗೆ ಬೆಂಬಲಿಸುತ್ತಿರುವುದರಿಂದ ಬಿಜೆಪಿಯು ಗೆಲವು ಸಾಧಿಸಲಿದೆ ಎಂದು ಬಿಜೆಪಿ ಅಭ್ಯರ್ಥಿ ಬೀರೂರು ದೇವರಾಜು ವಿಶ್ವಾಸ ವ್ಯಕ್ತಪಡಿಸಿದರು.
 ಅವರು ಬೀರೂರು, ಕಡೂರು ಪಟ್ಟಣಗಳಲ್ಲಿ ಬಿಜೆಪಿಯಿಂದ ನಡೆಸಿದ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಮೂರು ಚುನಾವಣೆ ಎದುರಿಸಿರುವ ನನಗೆ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವುದರಿಂದ ಕಡೂರು ಕ್ಷೇತ್ರದಾದ್ಯಂತ ಅತಿ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.
ಸಕ್ರಿಯ ರಾಜಕಾರಣ: ಹಲವು ವರ್ಷದಿಂದ ಈ ಕ್ಷೇತ್ರದಲ್ಲಿ ಸಕ್ರಿಯ ರಾಜಕಾರಣ ಮಾಡಿಕೊಂಡು ಧಾರ್ಮಿಕ ಮತ್ತು ಸಾಮಾಜಿಕವಾಗಿಯೂ ಸಲ್ಲಿಸುತ್ತಿರುವ ಸೇವೆಗೆ ಜನ ಬೀರೂರು ದೇವರಾಜು ಎಂದು ಗುರುತಿಸುವ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಮತದ ರೂಪದಲ್ಲಿ ಪ್ರತಿಫಲ ನೀಡುತ್ತಾರೆ ಎಂದರು.
  ಕಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಲವು ಕನಸು ಹೊತ್ತು ಕಣಕ್ಕಿಳಿದು ಮತಯಾಚಿಸುತ್ತಿದ್ದೇನೆ. ಬರಗಾಲದಿಂದ ಸಂಕಷ್ಟದಲ್ಲಿರುವ ತಾಲೂಕಿನ ರೈತರ ಜಮೀನು, ತೋಟಗಳಿಗೆ ಹೆಬ್ಬೆಯಿಂದ ಮದಗದಕೆರೆಗೆ ನೀರು ತುಂಬಿಸಿ ಜಮೀನುಗಳಿಗೆ ನೀರು ಹರಿಸುವ ಯೋಜನೆ ಜಾರಿಗೆ ತರಲು ಮತ್ತು ಭದ್ರಾನದಿಯಿಂದ ಕಡೂರು ಹಾಗು ಬೀರೂರು ಪಟ್ಟಣಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆ ಕಾಮಗಾರಿ ಪೂರ್ಣಗೊಳಿಸಲು, ಕ್ಷೇತ್ರದ ಬಡ ಜನರ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶ ಹೊಂದಿದ್ದೇನೆ ಎಂದರು.
   ಬಿಜೆಪಿ ತಾಲೂಕು ಉಪಾಧ್ಯಕ್ಷ ಎ. ಮಣಿ, ಮುಖಂಡ ಎಸ್. ರಮೇಶ್, ನಾಗೇಂದ್ರ ದೇವರಾಜ್, ರಾಜಣ್ಣ, ರಾಜೇಶ್, ರವಿ, ಗೋಪಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಎಂಜಿಎಂ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ
ಮೂಡಿಗೆರೆ: ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ತಾಲೂಕು ಆರೋಗ್ಯ ಇಲಾಖೆ ಮತ್ತು ಎಂಜಿಎಂ ಆಸ್ಪತ್ರೆ ಆಡಳಿತ ಮಂಡಳಿ ಆಶ್ರಯದಲ್ಲಿ ಮೂಡಿಗೆರೆ ಎಂಜಿಎಂ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಗುರುವಾರ ನಡೆಯಿತು.
 ಕಾರ್ಯಕ್ರಮದಲ್ಲಿ ಜಿಲ್ಲಾ ರಕ್ತನಿಧಿ ಕೇಂದ್ರದ ಡಾ. ಶಿವದತ್ ಮಾತನಾಡಿ, ರಕ್ತದಾನ ಶ್ರೇಷ್ಠ ದಾನಗಳಲ್ಲಿ ಒಂದಾಗಿದೆ. ಕೆಲವು ಅವಘಡಗಳಲ್ಲಿ ತೊಂದರೆಗೀಡಾಗುವ ಮನುಷ್ಯನ ದೇಹಕ್ಕೆ ಜೀವರಕ್ಷಕ ರಕ್ತದ ಕೊಡುಗೆ ಅಮೂಲ್ಯವಾಗಿದೆ.   ಆರೋಗ್ಯವಂತರ ದೇಹದಲ್ಲಿ ಸಾಕಷ್ಟು ಉತ್ಪಾದಿಸಲ್ಪಡುವ ರಕ್ತದಾನ ಮಾಡುವುದರಿಂದ ಅನೇಕ ಜೀವಗಳನ್ನು ಬದುಕಿಸಬಹುದಾಗಿದೆ. ಆದ್ದರಿಂದ ಭಯ, ಆತಂಕ, ಭೀತಿ ಇಲ್ಲದೇ ಸಾರ್ವಜನಿಕರು ರಕ್ತದಾನದ ಮೂಲಕ ಇತರರ ಪ್ರಾಣ ಉಳಿಸುವ ಪ್ರಯತ್ನ ನಡೆಸಬೇಕು ಎಂದು ಮನವಿ ಮಡಿದರು.
 ಶಿಬಿರದಲ್ಲಿ ಆರೋಗ್ಯ ಸಿಬ್ಬಂದಿ ಪಾಲ್ಗೊಂಡಿದ್ದರು. ರಕ್ತದಾನದ ವೇಳೆ ಎಂಜಿಎಂ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿ ಡಾ. ಹರೀಶ್ ಬಾಬು, ತಾಲೂಕು ವೈಧ್ಯಾಧಿಕಾರಿ ಡಾ. ಯೋಗೇಶ್, ಜಿಲ್ಲಾ ಆಸ್ಪತ್ರೆಯ ಹರೀಶ್, ತಾಲೂಕು ಆರೋಗ್ಯ ಸಹಾಯಕ ಅಧಿಕಾರಿ ಮೂರ್ತಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.