ತೀರ್ಥಂಕರರ ವಿಗ್ರಹ ಕಳವು
ಮೂಡಿಗೆರೆ: ಹೊಯ್ಸಳರ ಮೂಲ ಸ್ಥಳವಾದ ತಾಲೂಕಿನ ಅಂಗಡಿ (ಶಶಕಪುರ)ಗ್ರಾಮದ ಜೈನ ಬಸದಿಯಲ್ಲಿದ್ದ ತೀರ್ಥಂಕರರ ವಿಗ್ರಹಗಳು ಕಳುವಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಜೈನ ಬಸದಿ ಪುರಾತನವಾಗಿದ್ದು, ಜಿರ್ಣೋದ್ಧಾರ ನಡೆಯುತ್ತಿದೆ. 22,23,24 ನೇ ತೀರ್ಥಂಕರರ 900 ವರ್ಷಗಳ ಹಿಂದಿನ ವಿಗ್ರಹಗಳಾದ ಮಲ್ಲಿನಾಥ ಸ್ವಾಮಿ, ಪಾರ್ಶ್ವನಾಥ ಸ್ವಾಮಿ ಮತ್ತು ಮುನ್ಶಿನಾಥ ಸ್ವಾಮಿಗಳ ವಿಗ್ರಹಗಳು ಹಾಗೂ ಮತ್ತೊಂದು ಬಸದಿಯಲ್ಲಿದ್ದ ನೇಮಿನಾಥ ಸ್ವಾಮಿಯ ವಿಗ್ರಹಗಳನ್ನು ಕಳವು ಮಾಡಲಾಗಿದೆ.
ಬಸದಿಯ ಅರ್ಚಕ ಧರಣೇಂದ್ರ ಇಂದ್ರ ಅವರು ಜನವರಿ 29 ರ ಬೆಳಗ್ಗೆ ತೀರ್ಥಂಕರರಿಗೆ ಪೂಜೆ ಸಲ್ಲಿಸಿ ಬಾಗಿಲು ಮುಚ್ಚಿದ್ದು, ಫೆ.1 ನೇ ತಾರಿಕಿನ ದಿನವಾದ ಶನಿವಾರ ಬೆಳಗ್ಗೆ ಪೂಜೆ ಮಾಡಲು ಬಂದಾಗ ವಿಗ್ರಹಗಳು ಕಾಣೆಯಾಗಿದ್ದು, ಅರ್ಚಕರು ಗ್ರಾಮಸ್ಥರ ಗಮನಕ್ಕೆ ತಂದಿದ್ದಾರೆ.
ದೇವಾಲಯ ಟ್ರಸ್ಟ್ ಸಂಚಾಲಕ ಎ.ಎಸ್. ನಾಗರಾಜ್ ಗೋಣಿಬೀಡು ಪೊಲೀಸರಿಗೆ ವಿಗ್ರಹ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದು, ಪೊಲೀಸ್ ಉಪ ಅಧಿಕ್ಷಕ ರಮೇಶ್ ಕುಮಾರ್, ವೃತ್ತ ನಿರೀಕ್ಷಕ ಎಸ್.ಎಸ್. ಹಿರೇಮಠ್, ಅಪರಾಧ ವಿಭಾಗದ ಠಾಣಾಧಿಖಾರಿ ಸಂಕಪ್ಪಯ್ಯ ಬಸದಿಗಳಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿ ಕಲೆಹಾಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

