ಚಿಕ್ಕಮಗಳೂರು

ಕ್ಯಾನ್ಸರ್ ಜಾಗೃತಿ ಜಾಥಾ

Published On :

ನರಸಿಂಹರಾಜಪುರ: ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಜನರಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮೆಣಸೂರಿನ ಕಾಲೇಜು ಆವರಣದಿಂದ ಬಸ್ಸು ನಿಲ್ದಾಣದವರೆಗೆ ಮಂಗಳವಾರ ಜಾಥಾ ನಡೆಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ವಿಭಾಗ, ಬಿಎಸ್‌ಡಬ್ಲೂ ಹಾಗೂ ನರ್ಸಸ್ ಲೈನ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಜಾಥಾದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಕ್ಯಾನ್ಸರ್ ವಿರುದ್ಧ ಘೋಷಣೆ ಕೂಗತ್ತ ಬಸ್ಸು ನಿಲ್ದಾಣ ತಲುಪಿದರು.
ಬಸ್ಸು ನಿಲ್ದಾಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನಡ ಸಹಾಯಕ ಪ್ರಾಧ್ಯಾಪಕ ಅಣ್ಣಪ್ಪ ಮಳೀಮಠ್ ಅವರು ಪ್ರತಿಜ್ಞಾ ವಿಧಿ ಬೋಧಿಸಿ, ಕ್ಯಾನ್ಸರ್ ವಿರುದ್ಧ ಯುವ ಸಮುದಾಯದವರು ಎಚ್ಚರಿಕೆ ವಹಿಸಿಬೇಕು. ಯಾವುದೇ ದುಶ್ಚಟಗಳಿಗೆ ಮಾರುಹೋಗದೆ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಕೈಜೋಡಿಸುವಂತೆ ಕರೆ ನೀಡಿದರು.
ಡಾ. ಕೆ. ಉಮೇಶ್, ಪ್ರೊ. ಮುಜೀಬ್‌ಖಾನ್, ಮುಳ್ಳಪಳ್ಳಿ, ಮಾದವ್, ಸಂಧ್ಯಾ, ಅಬ್ದುಲ್ ವಹಾಬ್, ರಾಜೀವ್ ಹಾಗೂ ಗ್ರಂಥಪಾಲಕ ಕೃಷ್ಣನಾಯಕ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.