ದಕ್ಷಿಣ ಕನ್ನಡ

ಯೋಗ ಮಹೋತ್ಸವ ಕಾರ್ಯಕ್ರಮ

Published On :

ಕಾರವಾರ: ಜಿಲ್ಲಾ ಭಾರತ ಸ್ವಾಭಿಮಾನ ಟ್ರಸ್ಟ್ ಹಾಗೂ ಪತಂಜಲಿ ಯೋಗ ಸಮಿತಿ ವತಿಯಿಂದ ಕಳೆದ ಒಂದು ವಾರದಿಂದ ಆಯೋಜಿಸಿದ್ದ ಯೋಗ ಶಿಬಿರದ ಕಡೆಯ ದಿನ ಭಾನುವಾರ ನಗರದ ಮಿತ್ರ ಸಮಾಜ ಮೈದಾನದಲ್ಲಿ ಯೋಗ ಮಹೋತ್ಸವ ಕಾರ್ಯಕ್ರಮ ನಡೆಯಿತು.
ಹುತಾತ್ಮ ಬಲಿದಾನ ದಿನದ ಪ್ರಯುಕ್ತ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಸ್ವಾಮಿ ಪರಮಾತ್ಮಾನಂದ ಉದ್ಘಾಟಿಸಿ ಮಾತನಾಡಿ, ಯೋಗ, ಪ್ರಾಣಾಯಾಮದಿಂದ ಸುಖಕರ ಜೀವನ ಸಾಧ್ಯ ಎಂದರು. ನಂತರ ಐದು ಗಂಟೆಯಿಂದ ದೇವರಾಜ ಪ್ರಭು ಮಾರ್ಗದರ್ಶನದಲ್ಲಿ ಪ್ರಾಣಾಯಾಮ ಕಾರ್ಯಕ್ರಮ ನಡೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಕ್ಕೂ ಅಧಿಕ ಜನರು ಶಿಬಿರದಲ್ಲಿ ಭಾಗವಹಿಸಿದ್ದರು. ಪತಂಜಲಿ ಯೋಗ ಸಮಿತಿ ಮತ್ತು ಸ್ವಾಭಿಮಾನ ಟ್ರಸ್ಟ್‌ನ ಬಿ.ಜಿ. ಮೋಹನ್, ರಾಮಚಂದ್ರ ಹೆಗಡೆ, ಯಮುನಾ ಶೇಟ್, ಶ್ರೀನಾಥ ಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮಿತಿ ಮೀರಿದ ವೇಗಕ್ಕೆ ಕಡಿವಾಣ ಹಾಕಿ
ಶಿರಸಿ: ಜಿಲ್ಲೆಯಾದ್ಯಂತ ಹೈನುಗಾರಿಕೆ ಜೋರಾಗಿದೆ. ಹಾಲು ಮಾರುವ ಮೂಲಕ ಆದಾಯವನ್ನು ಗಳಿಸುತ್ತಿರುವುದೂ ಹೆಚ್ಚು. ಜಿಲ್ಲೆಯ ಬಹುತೇಕ ಕಡೆಗಳಿಂದ ಸಂಗ್ರಹಿಸಲಾದ ಹಾಲನ್ನು ಶಿರಸಿಯ ಹನುಮಂತಿಯಲ್ಲಿರುವ ಶೀಥಲೀಕರಣ ಘಟಕಕ್ಕೆ ಬೇರೆ ಬೇರೆ ವಾಹನಗಳ ಮೂಲಕ ತಂದು ಹಾಕಲಾಗುತ್ತದೆ. ಆದರೆ, ತಂದು ಹಾಕುವ ವಾಹನಗಳು ತಮ್ಮ ಮಿತಿ ಮೀರಿದ ವೇಗದಿಂದಾಗಿ ಸಾರ್ವಜನಿಕರ ಮನಸ್ಸಿನಲ್ಲಿ ಭಯ ಹುಟ್ಟು ಹಾಕಿದೆ.
ಜೀಪು, ಆಟೋ ರಿಕ್ಷಾಗಳಲ್ಲಿ ವಿವಿಧ ಡೇರಿಗಳಿಂದ ಹಾಲನ್ನು ಸಂಗ್ರಹಿಸಿ ತರುವವರಿಗೆ ಶಿಥಲೀಕರಣ ಘಟಕದಲ್ಲಿ ಇಂತಹ ಸಮಯಕ್ಕೆ ಹಾಲನ್ನು ತಂದು ಹಾಕಬೇಕೆಂಬ ನಿಯಮ ಹೇರಲಾಗಿದೆ. ಐದು ನಿಮಿಷ ಹೆಚ್ಚಳವಾದರೂ ಅದಕ್ಕೆ ದಂಡವ ವಿಧಿಸಲಾಗುತ್ತದೆ. ಇದರಿಂದಾಗಿ ಸಮಯಪಾಲನೆ ಮಾಡಲು ವಾಹನಗಳ ಚಾಲಕರು ಮಿತಿ ಮೀರಿದ ವೇಗದಲ್ಲಿ ವಾಹನ ಚಾಲನೆ ಮಾಡುತ್ತಿದ್ದಾರೆ. ಬೆಳಗಿನ ವೇಳೆ ಹಾಗೂ ಸಂಜೆಯ ನಂತರ ಈ ವಾಹನಗಳು ವೇಗದಿಂದ ಬಂದು ಪಾದಚಾರಿಗಳು ಹಾಗೂ ದ್ವಿಚಕ್ರ ಸವಾರರಲ್ಲಿ ಪ್ರಾಣಭಯ ಉಂಟು ಮಾಡುತ್ತಿವೆ. ಅನೇಕ ಕಡೆಗಳಲ್ಲಿ ಈ ವಾಹನಗಳ ಮಿತಿ ಮೀರಿದ ವೇಗದಿಂದಾಗಿ ಅಪಘಾತಗಳು ಸಂಭವಿಸಿದ್ದೂ ಇದೆ. ಆದ್ದರಿಂದ ಸಂಚಾರ ನಿಯಂತ್ರಕರು, ಪೊಲೀಸ್ ಇಲಾಖೆ ಈ ವಾಹನಗಳ ವೇಗಕ್ಕೆ ಕಡಿವಾಣ ಹಾಕಬೇಕು ಹಾಗೂ ಹೈನುಗಾರಿಕೆ ಕುರಿತಂತೆ ನಿಗದಿತ ಸಮಯದಲ್ಲಿ ಕನಿಷ್ಟ ಅರ್ಧ ಗಂಟೆಗಳ ವಿನಾಯಿತಿಯನ್ನಾದರೂ ನೀಡಬೇಕಾದ ಅಗತ್ಯವಿದೆ. ಈ ಕುರಿತು ತಕ್ಷಣವೇ ಸಂಬಂಧಪಟ್ಟವರು ಕ್ರಮ ಕೈಗೊಳ್ಳದಿದ್ದಲ್ಲಿ ಜೀವಹಾನಿ ಸಂಭವಿಸಬಹುದಾದ ಸಾಧ್ಯತೆಗಳು ಹೆಚ್ಚಿವೆ.
-ಸುಬ್ರಾಯ ಹೆಗಡೆ, ಶಿರಸಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.