17ಮಂದಿಯಿಂದ 30 ನಾಮಪತ್ರ
ಮಂಗಳೂರು: ದ.ಕ.ಲೋಕಸಭೆ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಅವಧಿ ಬುಧವಾರಕ್ಕೆ ಮುಕ್ತಾಯಗೊಂಡಿದೆ. ಈವರೆಗೆ ಒಟ್ಟು 17 ಮಂದಿ 30 ನಾಮಪತ್ರ ಸಲ್ಲಿಸಿದ್ದಾರೆ. ಕೊನೆದಿನ 7 ಮಂದಿ 14 ನಾಮಪತ್ರ ಸಲ್ಲಿಸಿದ್ದರು. ನಳಿನ್ ಕುಮಾರ್ ಕಟೀಲ್(ಬಿಜೆಪಿ), ಜನಾರ್ದನ ಪೂಜಾರಿ(ಕಾಂಗ್ರೆಸ್), ಆನಂದ ಗಟ್ಟಿ, ಸುಪ್ರೀತ್ ಕುಮಾರ್ ಪೂಜಾರಿ, ದೀಪಕ್ ರಾಜೇಶ್ ಕೊಹಿಲೋ, ಸುಬ್ರಹ್ಮಣ್ಯ, ಸೋಮಶೇಖರ್, ಇರುವೈಲು ಚಂದ್ರಹಾಸ, ವಾಸುದೇವ್ ಎಂ.ಆರ್ (ಆಮ್ ಆದ್ಮಿ ಪಾರ್ಟಿ), ಸುದತ್ ಜೈನ್, ಯಾದವ ಶೆಟ್ಟಿ(ಸಿಪಿಎಂ), ಹನೀಫ್ ಖಾನ್(ಎಸ್ಡಿಪಿಐ), ಮೂಸಾ ಕುಂಞ(ಬಿಎಸ್ಪಿ), ಮುಹಮ್ಮದ್ ಅಕ್ರಂ(ಎಸ್ಡಿಪಿಐ), ಮ್ಯಾಕ್ಸಿಂ ಪಿಂಟೋ, ಅಬ್ದುಲ್ ಹಮೀದ್, ಕುಶಲ (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಪರಿಶೀಲನೆ ಮಾ.27ರಂದು ಬೆಳಗ್ಗೆ 11ರಿಂದ 12ರ ವರೆಗೆ ನಡೆಯಲಿದೆ. ನಾಮಪತ್ರ ಸಲ್ಲಿಸಿದ ಎಲ್ಲ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಬಿ ಫಾರಂ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎ.ಬಿ.ಇಬ್ರಾಹಿಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ನೀತಿಸಂಹಿತೆ ಉಲ್ಲಂಘಟನೆಯ ಒಟ್ಟು 46 ಪ್ರಕರಣ ಪ್ರಕರಣ ದಾಖಲಾಗಿದೆ. ಜಿಲ್ಲಾ ಕಂಟ್ರೋಲ್ ರೂಂ 1077ರಲ್ಲಿ 9 ಪ್ರಕರಣ ವರದಿಯಾಗಿದೆ. ಪೊಲೀಸ್ ಇಲಾಖೆಯಲ್ಲಿ 23 ಪ್ರಕರಣ ದಾಖಲಾಗಿದೆ. 9 ಪ್ರಕರಣದಲ್ಲಿ ರು. 14.70 ಲಕ್ಷ ನಗದು ವಶಪಡಿಸಲಾಗಿದೆ. ಮೂಲ್ಕಿಯಲ್ಲಿ ಬುಧವಾರ ದಾಖಲೆಪತ್ರ ರಹಿತ ಸಾಗಾಟ ಮಾಡುತ್ತಿದ್ದ ರು. 4 ಲಕ್ಷ ನಗದು ವಶಪಡಿಸಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

