ಗರಂ ಮಸಾಲಾ ಪುಡಿ
ಗರಂ ಮಸಾಲಾ ಪುಡಿ

ಗರಂ ಮಸಾಲಾ ಪುಡಿ

ಮನೆಯಲ್ಲೇ ಗರಂ ಮಸಾಲಾ ಪುಡಿ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು

  • ದನಿಯಾ- ಮುಕ್ಕಾಲು ಬಟ್ಟಲು
  • ಜೀರಿಗೆ- ಅರ್ಧ ಬಟ್ಟಲು
  • ಕಪ್ಪು ಜೀರಿಗೆ- 1 ಚಮಚ
  • ಕಾಳುಮೆಣಸು-2 ಚಮಚ
  • ಒಣಗಿದ ಮೆಣಸಿನ ಕಾಯಿ-3
  • ಸ್ಟಾರ್ ಸೋಂಪು-5
  • ಚಕ್ಕೆ - ಸ್ವಲ್ಪ
  • ಜಾಯಿ ಪತ್ರೆ- 2
  • ಕಪ್ಪು ಏಲಕ್ಕಿ- 3
  • ಜಾಯಿಕಾಯಿ - 2
  • ಏಲಕ್ಕಿ- 3 ಚಮಚ
  • ಲವಂಗ- 1 ಚಮಚ
  • ಜೀರಿಗೆ- 1 ಚಮಚ
  • ಪಲಾವ್ ಎಲೆ- 5-6
  • ಶುಂಠಿ ಪುಡಿ- 1 ಚಮಚ

ಮಾಡುವ ವಿಧಾನ...

  • ಮೊದಲಿಗೆ ಒಂದು ದೊಡ್ಡ ಪ್ಯಾನ್ ತೆಗೆದುಕೊಂಡು ಒಲೆಯ ಮೇಲಿಟ್ಟು ಕಾದ ನಂತರ ಅದಕ್ಕೆ ದನಿಯಾ ಹಾಕಿ ಚೆನ್ನಾಗಿ ಕೆಂಪಗೆ ಹುರಿದಿಟ್ಟುಕೊಳ್ಳಿ.
  • ನಂತರ ಅದೇ ಪ್ಯಾನ್ ಒಲೆಯ ಮೇಲಿಟ್ಟು, ಅದಕ್ಕೆ ಜೀರಿಗೆ, ಕಪ್ಪು ಜೀರಿಗೆ, ಕಾಳುಮೆಣಸು, ಒಣಗಿದ ಮೆಣಸಿನ ಕಾಯಿ ಹಾಕಿ ಕೆಂಪಗೆ ಹುರಿಯಿರಿ.
  • ಮತ್ತೆ ಪ್ಯಾನ್ ಇಟ್ಟು, ಸ್ಟಾರ್ ಸೋಂಪು, ಚಕ್ಕೆ, ಜಾಯಿ ಪತ್ರೆ, ಕಪ್ಪು ಏಲಕ್ಕಿ, ಜಾಯಿಕಾಯಿ, ಏಲಕ್ಕಿ, ಲವಂಗ, ಜೀರಿಗೆ, ಪಲಾವ್ ಎಲೆ ಎಲ್ಲವನ್ನೂ ಹಾಕಿ ಕೆಂಪಗೆ ಹುರಿದುಕೊಂಡು, ಎಲ್ಲವೂ ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಇದಕ್ಕೆ ಶುಂಠಿ ಪುಡಿ ಸೇರಿಸಿ ಮಿಕ್ಸಿ ಜಾರ್'ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಂಡರೆ ಗರಂ ಮಸಾಲಾ ಪುಡಿ ಸಿದ್ಧ.

Related Stories

No stories found.

Advertisement

X
Kannada Prabha
www.kannadaprabha.com