ಚಿಕನ್ ಪ್ರಿಯರ ಫೇವರಿಟ್‌ ಸ್ನ್ಯಾಕ್‌: ಮನೆಯಲ್ಲೇ ಗರಿಗರಿಯಾದ ಚಿಕನ್ ಪಕೋಡಾ ಹೀಗೆ ಮಾಡಿ

ಚಿಕನ್‌ನಿಂದ ತಯಾರಿಸುವ ವೈವಿಧ್ಯಮಯ ಖಾದ್ಯಗಳಲ್ಲಿ ಚಿಕನ್ ಪಕೋಡಾ ಎಲ್ಲರಿಗೂ ಇಷ್ಟವಾಗುವ ಜನಪ್ರಿಯ ಸ್ನ್ಯಾಕ್‌. ಸಂಜೆಯ ಹೊತ್ತಿನಲ್ಲಿ ಬಿಸಿ ಬಿಸಿಯಾಗಿ, ಗರಿಗರಿಯಾಗಿ ಏನಾದರೂ ತಿನ್ನಬೇಕು ಎನಿಸಿದಾಗ ಚಿಕನ್ ಪಕೋಡಾ ಕೂಡ ಉತ್ತಮ ಆಯ್ಕೆ.
Chicken Pakora
ಚಿಕನ್ ಪಕೋಡಾ
Updated on

ಚಿಕನ್‌ನಿಂದ ತಯಾರಿಸುವ ವೈವಿಧ್ಯಮಯ ಖಾದ್ಯಗಳಲ್ಲಿ ಚಿಕನ್ ಪಕೋಡಾ ಎಲ್ಲರಿಗೂ ಇಷ್ಟವಾಗುವ ಜನಪ್ರಿಯ ಸ್ನ್ಯಾಕ್‌. ಸಂಜೆಯ ಹೊತ್ತಿನಲ್ಲಿ ಬಿಸಿ ಬಿಸಿಯಾಗಿ, ಗರಿಗರಿಯಾಗಿ ಏನಾದರೂ ತಿನ್ನಬೇಕು ಎನಿಸಿದಾಗ ಚಿಕನ್ ಪಕೋಡಾ ಕೂಡ ಉತ್ತಮ ಆಯ್ಕೆ. ಸಂಜೆ ತಿಂಡಿಗೆ, ಸ್ನೇಹಿತರೊಂದಿಗೆ ಕೂತು ಸವಿಯಲು ಅಥವಾ ಮನೆಯಲ್ಲೇ ಸಣ್ಣ ಸಮಾರಂಭವಿದ್ದಾಗ ತಯಾರಿಸಲು ಇದು ಸೂಕ್ತ. ಮನೆಯಲ್ಲೇ ರುಚಿಕರವಾದ ಚಿಕನ್ ಪಕೋಡಾ ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ...

ಬೇಕಾಗುವ ಪದಾರ್ಥಗಳು...

  • ಚಿಕನ್ – 500 ಗ್ರಾಂ (ಬೋನ್ ಲೆಸ್)

  • ಕಡಲೆ ಹಿಟ್ಟು – 1 ಬಟ್ಟಲು

  • ಅಕ್ಕಿ ಹಿಟ್ಟು – 2 ಚಮಚ

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ

  • ಖಾರದ ಪುಡಿ – 1 ಚಮಚ

  • ಅರಿಶಿನ – ¼ ಚಮಚ

  • ಗರಂ ಮಸಾಲಾ – ½ ಚಮಚ

  • ಜೀರಿಗೆ ಪುಡಿ – ½ ಚಮಚ

  • ನಿಂಬೆ ರಸ – 1 ಚಮಚ

  • ಮೊಸರು – 2 ಚಮಚ

  • ಹಸಿಮೆಣಸಿನಕಾಯಿ – 2, ಸಣ್ಣಗೆ ಹೆಚ್ಚಿದ್ದು

  • ಕರಿಬೇವು – ಸ್ವಲ್ಪ

  • ಕೊತ್ತಂಬರಿ ಸೊಪ್ಪು – ಸ್ವಲ್ಪ

  • ಉಪ್ಪು – ರುಚಿಗೆ ತಕ್ಕಷ್ಟು

  • ಎಣ್ಣೆ – ಕರಿಯಲು

  • ನೀರು – ಅಗತ್ಯವಿದ್ದಷ್ಟು

Chicken Pakora
ಗರಿಗರಿಯಾದ ಮಂಡಕ್ಕಿ ದೋಸೆ: ಒಮ್ಮೆ ಮಾಡಿದರೆ ಮತ್ತೆ ಮತ್ತೆ ಮಾಡ್ತೀರಾ!

ಮಾಡುವ ವಿಧಾನ...

  • ಮೊದಲು ಚಿಕನ್‌ ತುಂಡುಗಳನ್ನು ಚೆನ್ನಾಗಿ ತೊಳೆದು ನೀರು ಬಸಿದುಕೊಳ್ಳಿ.

  • ಒಂದು ಪಾತ್ರೆಯಲ್ಲಿ ಚಿಕನ್‌ಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್‌, ಖಾರದ ಪುಡಿ, ಅರಿಶಿನ, ಗರಂ ಮಸಾಲಾ, ಜೀರಿಗೆ ಪುಡಿ, ಉಪ್ಪು, ನಿಂಬೆ ರಸ ಮತ್ತು ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

  • ಇದಕ್ಕೆ ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.

  • ಈಗ ಕಡಲೆ ಹಿಟ್ಟು ಮತ್ತು ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಕಲಸಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ಚಿಕನ್‌ಗೆ ಹಿಟ್ಟು ಚೆನ್ನಾಗಿ ಅಂಟಿಕೊಳ್ಳುವಷ್ಟು ದಪ್ಪವಾದ ಮಿಶ್ರಣ ತಯಾರಿಸಿ.

  • ಮಸಾಲೆ ಮಿಶ್ರಿತ ಚಿಕನ್‌'ನ್ನು ಕನಿಷ್ಠ 20–30 ನಿಮಿಷ ನೆನೆಯಲು ಬಿಡಿ.

  • ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಮಧ್ಯಮ ಉರಿಯಲ್ಲಿ ಚಿಕನ್ ತುಂಡುಗಳನ್ನು ಒಂದೊಂದಾಗಿ ಹಾಕಿ ಕರಿಯಿರಿ.

  • ಚಿಕನ್ ತುಂಡುಗಳು ಹೊರಗೆ ಗರಿಗರಿಯಾಗಿ ಹಾಗೂ ಒಳಗೆ ಚೆನ್ನಾಗಿ ಬೇಯುವವರೆಗೆ ಕರಿಯಿರಿ.

  • ಕರಿದ ಪಕೋಡಾಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಇಡಿ.

ಟಿಪ್ಸ್...

  • ಪಕೋಡಾ ಇನ್ನಷ್ಟು ಗರಿಗರಿಯಾಗಲು ಕಡಲೆ ಹಿಟ್ಟಿನ ಜೊತೆಗೆ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸುವುದು ಉತ್ತಮ.

  • ಎಣ್ಣೆ ತುಂಬಾ ಬಿಸಿಯಾಗಿದ್ದರೆ ಹೊರಭಾಗ ಮಾತ್ರ ಬೇಗ ಕರಿದು ಒಳಗೆ ಬೇಯದೇ ಉಳಿಯಬಹುದು; ಆದ್ದರಿಂದ ಮಧ್ಯಮ ಉರಿಯಲ್ಲಿ ಕರಿಯಿರಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com