
ಬೆಂಗಳೂರು: BMTC ಬಸ್‌ನಲ್ಲಿ ನಡೆದ ಈ ಘಟನೆಯು ಸಾರ್ವಜನಿಕ ನಡವಳಿಕೆ ಮತ್ತು ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಬಸ್ ನಲ್ಲಿ ಕುಳಿತ್ತಿದ್ದ ಮಹಿಳೆಯೊಬ್ಬರು ಫೋನ್ ನೋಡುತ್ತಿದ್ದಾಗ ಆಕೆಯ ಹಿಂದೆ ಕುಳಿತಿದ್ದ ವೃದ್ಧ ವ್ಯಕ್ತಿಯೊಬ್ಬ ಅತ್ಯಂತ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದಾನೆ. ಮಹಿಳೆಯನ್ನು ಪದೇ ಪದೇ ಮುಟ್ಟಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಆತನಿಗೆ ಬೈಯ್ಯಲು ಶುರು ಮಾಡಿದ್ದಾಳೆ. ಘರ್ಷಣೆಯ ನಂತರ, ಆ ವ್ಯಕ್ತಿ ಒಂದು ಮಾತನ್ನೂ ಹೇಳದೆ ಸದ್ದಿಲ್ಲದೆ ಬಸ್ಸಿನಿಂದ ಇಳಿದು ಹೋಗಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಈ ರೀತಿಯ ನಡವಳಿಕೆಯು ಯಾರಿಂದ ನಡೆದರೂ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ.
Advertisement