swimming Poolಗೆ ಹೋದರೆ ಚರ್ಮದಲ್ಲಿ ಉರಿ, ಕೆಂಪು ಚುಕ್ಕೆಗಳಾಗುವುದೇ..? ಇಲ್ಲಿದೆ ಪರಿಹಾರ...

ಸ್ವಿಮ್ಮಿಂಗ್ ಪೂಲ್‌ನ ನೀರನ್ನು ಸ್ವಚ್ಛವಾಗಿಡಲು ಸಾಮಾನ್ಯವಾಗಿ ಕ್ಲೋರಿನ್ ಎಂಬ ರಾಸಾಯನಿಕವನ್ನು ಬಳಸಲಾಗುತ್ತದೆ. ಈ ರಾಸಾಯನಿಕ ನೀರನ್ನು ಶುದ್ಧವಾಗಿಡಲು ಸಹಾಯ ಮಾಡುತ್ತದೆ. ಆದರೆ, ಕೆಲವರ ಚರ್ಮಕ್ಕೆ ಇದು ಹೊಂದಿಕೆಯಾಗದೇ ಚರ್ಮದಲ್ಲಿ ಸಮಸ್ಯೆಗಳು ಉಂಟಾಗುತ್ತದೆ.
File photo
ಸಂಗ್ರಹ ಚಿತ್ರ
Updated on

ಈಜುವುದು ಆರೋಗ್ಯಕ್ಕೆ ಒಳ್ಳೆಯ ವ್ಯಾಯಾಮ. ಆದರೆ, ಕೆಲವೊಮ್ಮೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಿದ ಬಳಿಕ ಚರ್ಮದಲ್ಲಿ ಕೆಂಪು ಚುಕ್ಕೆಗಳು, ಉರಿ ಅಥವಾ ಕೆರೆತ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಸಾಮಾನ್ಯವಾಗಿ ಪೂಲ್ ರಾಶ್ ಅಥವಾ ಕ್ಲೋರಿನ್ ರಾಶ್ ಎಂದು ಕರೆಯಲಾಗುತ್ತದೆ.

ಸ್ವಿಮ್ಮಿಂಗ್ ಪೂಲ್‌ನ ನೀರನ್ನು ಸ್ವಚ್ಛವಾಗಿಡಲು ಸಾಮಾನ್ಯವಾಗಿ ಕ್ಲೋರಿನ್ ಎಂಬ ರಾಸಾಯನಿಕವನ್ನು ಬಳಸಲಾಗುತ್ತದೆ. ಈ ರಾಸಾಯನಿಕ ನೀರನ್ನು ಶುದ್ಧವಾಗಿಡಲು ಸಹಾಯ ಮಾಡುತ್ತದೆ. ಆದರೆ, ಕೆಲವರ ಚರ್ಮಕ್ಕೆ ಇದು ಹೊಂದಿಕೆಯಾಗದೇ ಚರ್ಮದಲ್ಲಿ ಸಮಸ್ಯೆಗಳು ಉಂಟಾಗುತ್ತದೆ. ವೈದ್ಯಕೀಯವಾಗಿ ಇದನ್ನು ಕಾಂಟ್ಯಾಕ್ಟ್ ಡರ್ಮಟೈಟಿಸ್ ಎಂದು ಕರೆಯುತ್ತಾರೆ.

ಕ್ಲೋರಿನ್ ಚರ್ಮದ ಮೇಲೆ ಇರುವ ನೈಸರ್ಗಿಕ ಎಣ್ಣೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಚರ್ಮ ಒಣಗುತ್ತದೆ. ಚರ್ಮ ಹೆಚ್ಚು ಒಣಗಿದರೆ ಸಣ್ಣ ಸೀಳುಗಳು, ಉರಿ ಮತ್ತು ಕೆರೆತ ಉಂಟಾಗುತ್ತದೆ. ನಂತರ ಇದೇ ಕ್ಲೋರಿನ್ ರಾಶ್ ಆಗಿ ಕಾಣಿಸಿಕೊಳ್ಳುತ್ತದೆ.

  • ಪೂಲ್ ರಾಶ್ ಗುರ್ತಿಸುವುದು ಹೇಗೆ..?

  • ಚರ್ಮದಲ್ಲಿ ಕೆಂಪು ಚುಕ್ಕೆಗಳು ಕಾಣಿಸಿಕೊಳ್ಳುವುದು

  • ಚರ್ಮ ಒಣಗುವುದು ಮತ್ತು ಸಿಪ್ಪೆ ಕಾಣಿಸುವುದು

  • ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುವುದು.

  • ಉರಿ ಮತ್ತು ಕೆರೆತ

  • ಚರ್ಮದಲ್ಲಿ ಸುಡುವಂತಹ ಅನುಭವ

File photo
ಭಾರತದಲ್ಲಿ ಪುರುಷರಿಗಿಂತ ಹೆಚ್ಚಿನ ಮಹಿಳೆಯರಿಗೆ ಹೊಟ್ಟೆಯ ಬೊಜ್ಜಿನ ಸಮಸ್ಯೆ: ಅಧ್ಯಯನ ವರದಿ
file photo
ಸಂಗ್ರಹ ಚಿತ್ರ

ನಿಯಂತ್ರಿಸುವುದು ಹೇಗೆ..?

  • ಸ್ವಿಮ್ಮಿಂಗ್ ಪೂಲ್‌ಗೆ ಹೋಗುವ ಮೊದಲು ಮತ್ತು ಈಜಿದ ನಂತರ ತಣ್ಣನೆಯ ನೀರಿನಿಂದ ಸ್ನಾನ ಮಾಡುವುದು ಉತ್ತಮ.

  • ಪೂಲ್‌ನಿಂದ ಹೊರಬಂದ ನಂತರ ದೇಹವನ್ನು ಚೆನ್ನಾಗಿ ತೊಳೆಯಬೇಕು.

  • ಸುಗಂಧವಿಲ್ಲದ ಮತ್ತು ಮೃದುವಾದ ಕ್ಲೆನ್ಸರ್ ಬಳಸಿ ದೇಹವನ್ನು ಸ್ವಚ್ಛಗೊಳಿಸಬೇಕು.

  • ಸ್ನಾನದ ನಂತರ ಚರ್ಮ ಒಣಗದಂತೆ ಉತ್ತಮ ಮಾಯಿಶ್ಚರೈಸರ್ ಬಳಸಿ.

  • ಚರ್ಮ ಉರಿ ಅಥವಾ ಕೆಂಪಾಗಿದ್ದರೆ ಐಸ್ ಕಂಪ್ರೆಸ್ ಬಳಸಬಹುದು.

  • ಕೆರೆತ ಇದ್ದರೂ ಚರ್ಮವನ್ನು ಕೆರೆಯಬಾರದು. ಇದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ.

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?

  • ಕಿರಿಕಿರಿ ಹೆಚ್ಚಾದಾಗ

  • ಉರಿ ತೀವ್ರಗೊಂಡಾಗ

  • ಹಲವು ದಿನಗಳಾದರೂ ಸಮಸ್ಯೆ ಕಡಿಮೆಯಾಗದಿದ್ದರೆ ತಜ್ಞ ವೈದ್ಯರ ಸಂಪರ್ಕಿಸುವುದು ಅಗತ್ಯ.

  • ಒಟ್ಟಿನಲ್ಲಿ, ಸ್ವಿಮ್ಮಿಂಗ್ ಆರೋಗ್ಯಕ್ಕೆ ಒಳ್ಳೆಯದ್ದೇ ಆಗಿದ್ದರೂ, ಚರ್ಮದ ಆರೈಕೆಯನ್ನು ಸರಿಯಾಗಿ ಮಾಡುವುದು ಬಹಳ ಮುಖ್ಯ. ಸರಿಯಾದ ಮುನ್ನೆಚ್ಚರಿಕೆ ತೆಗೆದುಕೊಂಡರೆ ಪೂಲ್ ರಾಶ್ ಸಮಸ್ಯೆಯನ್ನು ಸುಲಭವಾಗಿ ತಪ್ಪಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com