

ನವದೆಹಲಿ: ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರ(ಪಿಒಕೆ) ಅಂದರೆ ಗಿಲ್ಜಿತ್-ಬಾಲ್ಟಿಸ್ತಾನ್ ಪ್ರದೇಶ ಭಾರತಕ್ಕೆ ಸೇರಿರೋದೇ ಅಲ್ಲ. ಅದು ಪಾಕಿಸ್ತಾನದ್ದೇ ಸ್ಥಿರಾಸ್ತಿ ಎಂಬ ಚೀನಾದ ಉದ್ಧಟತನದ ಹೇಳಿಕೆಗೆ ಭಾರತದಾದ್ಯಂತ ಉಗ್ರ ಖಂಡನೆ ವ್ಯಕ್ತವಾಗಿದೆ.
ಪಶ್ಚಿಮ ಚೀನಾದ ಜಿನ್ ಜಿಯಾಂಗ್ ಪ್ರದೇಶದ ಅಧಿಕಾರಿಗಳು ಮಂಗಳವಾರ ಖುಂಜೆರಾಬ್ ಕಣಿವೆಯನ್ನು ಚಳಿಗಾಲದ ಪ್ರಯುಕ್ತ ತಾತ್ಕಲಿಕವಾಗಿ ಮುಚ್ಚುವ ನಿರ್ಧಾರ ತೆಗೆದುಕೊಂಡಿದ್ದಾರೆ. ಖುಂಜೆರಾಬ್ ಕಣಿಕವೆಯು ಜಿಂಗ್ ಜಿಯಾಂಗ್ ಮತ್ತು ಪಾಕೀ ಆಕ್ರಮಿತ ಕಾಶ್ಮೀರ ಪ್ರದೇಶವನ್ನು ಸೇರಿಸುವ ಮುಖ್ಯ ಕೊಂಡಿಯಾಗಿದೆ.
ಚೀನಾ ಅಧಿಕೃತ ಸುದ್ದಿ ಸಂಸ್ಥೆ ತಾನು ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ಈ ಕಣಿವೆ ಬಂದ್ ಮಾಡುವ ವಿಷಯ ಪ್ರಸ್ತಾಪಿಸುತ್ತ ಗಿಲ್ಜಿತ್-ಬಾಲ್ಟಿಸ್ತಾನ್ ಪ್ರದೇಶವನ್ನು ಪಾಕಿಸ್ತಾನದ ಭಾಗ ಎಂದೇ ಬರೆದಿರುವುದು, ಸಹಜವಾಗಿಯೇ ಭಾರತದ ಕೆಂಗಣ್ಣಿಗೆ ಕಾರಣವಾಗಿದೆ.