ಡೋಕ್ಲಾಮ್ ವಿವಾದ: ಲಡಾಖ್ ಬಳಿ ಭಾರತ-ಚೀನಾ ನಡುವೆ ನಡೆದಿದ್ದ ಸಂಘರ್ಷದ ವಿಡಿಯೋ ಬಹಿರಂಗ

Published On :
ನವದೆಹಲಿ: ಅತ್ತ ಸಿಕ್ಕಿಂ ಬಳಿಯ ಡೋಕ್ಲಾಮ್ ಪ್ರದೇಶದ ಒಡೆತನಕ್ಕಾಗಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ನಡೆಯುತ್ತಿರುವಾಗಲೇ, ಇತ್ತ ಲಡಾಖ್ ನಲ್ಲೂ ಭಾರತೀಯ ಹಾಗೂ ಚೀನೀ ಪಡೆಗಳು ಆಗಸ್ಟ್ 15ರಂದು ಮಂಗಳವಾರ ಕಾದಾಡಿಕೊಂಡಿದ್ದ ವಿಡಿಯೋ ಶನಿವಾರ ಬಿಡುಗಡೆಯಾಗಿದೆ.
ಅಂದು ಭಾರತೀಯ ಭೂಭಾಗವನ್ನು ಪ್ರವೇಶಿಸಲು ಚೀನಾ ಯೋಧರು ಯತ್ನಿಸಿದ್ದು, ಇವರನ್ನು ಹಿಮ್ಮೆಟ್ಟಿಸುವಲ್ಲಿ ಭಾರತದ ಪಡೆಗಳು ಯಶಸ್ವಿಯಾಗಿದ್ದವು. ಘಟನೆ ವೇಳೆ ಉಭಯ ಪಡೆಗಳ ಯೋಧರು ಗಾಯಗೊಂಡಿದ್ದರು. ಈ ಘಟನೆಯನ್ನು ಭಾರತ ದೃಢಪಡಿಸಿತ್ತಾದರೂ, ಚೀನಾ ದೃಢಪಡಿಸಲು ನಿರಾಕರಿಸಿತ್ತು.
ಆದರೆ, ಈಗ ವಿಡಿಯೋವನ್ನು ಅಧಿಕೃತವಾಗಿ ಭಾರತೀಯ ಸೇನೆ ಬಿಡುಗಡೆ ಮಾಡಿಲ್ಲ. 'ದ ಪ್ರಿಂಟ್" ಎಂಬ ಆಂಗ್ಲ ಆನ್ ಲೈನ್ ಮಾಧ್ಯಮದ ವರದಿಗಾರ ಮನು ಪಬ್ಬಿ ಅವರು ಮೊದಲು ಇದನ್ನು ಆನ್ ಲೈನ್ ನಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಟೀಕೆ ಹಾಗೂ ವಿರೋಧಗಳು ವ್ಯಕ್ತವಾಗತೊಡಗಿವೆ.
ವಿಡಿಯೋದಲ್ಲಿರುವ ಪ್ರಕಾರ, ಪಾಂಗಾಂಗ್ ಸರೋವರದ ಬಳಿಯ 'ಫಿಂಗರ್ 4' ಹಾಗೂ 'ಫಿಂಗರ್ 5' ಭೂಭಾಗದಲ್ಲಿ ಬೆಳಗ್ಗೆ 6ರಿಂದ 9ರವರೆಗೆ ವಾಸ್ತವ ಗಡಿರೇಖೆ (ಎಲ್ಎಸಿ) ದಾಟಿ ಬರಲು ಸೇನಾ ಪಡೆಗಳು ಯತ್ನಿಸುತ್ತವೆ. ಈ ವೇಳೆ ಭಾರತೀಯ ಸೈನಿಕರು ಮಾನವ ತಡೆಗೋಡೆ ನಿರ್ಮಿಸಿ ಅವರನ್ನು ತಡೆಯಲೆತ್ನಿಸುತ್ತಾರೆ.
ಆಗ ಚೀನೀ ಸೈನಿಕರು ಕಲ್ಲು ತೂರಲು ಆರಂಭಿಸುತ್ತಾರೆ. ಇದಕ್ಕೆ ಭಾರತೀಯ ಪಡೆಗಳ ಯೋಧರು ದಿಟ್ಟ ಉತ್ತರ ನೀಡಿ, ಕಲ್ಲು ತೂರುವ ಚೀನಾ ಯೋಧರನ್ನು ಹಿಮ್ಮೆಟ್ಟಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತChinaಚೀನಾಲಡಾಖ್ಡೋಕ್ಲಾಮ್ ವಿವಾದDoklam standoffLadkahIndian and Chinese soldiersಭಾರತ ಮತ್ತು ಚೀನಾ ಯೋಧರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


