ದೇಶ

ಬಾಂಗ್ಲಾ ಯುದ್ಧದ ನಂತರ ಭಾರತ ಪಿಒಕೆ ವಶಪಡಿಸಿಕೊಳ್ಳಲಿದೆ ಎಂದುಕೊಂಡಿತ್ತು ಅಮೆರಿಕಾ!

ಬಾಂಗ್ಲಾ ಯುದ್ಧದ ನಂತರ ಭಾರತ ಪಿಒಕೆ ವಶಪಡಿಸಿಕೊಳ್ಳಲಿದೆ ಎಂದುಕೊಂಡಿತ್ತು ಅಮೆರಿಕಾ!
ಬಾಂಗ್ಲಾ ಯುದ್ಧದ ನಂತರ ಭಾರತ ಪಿಒಕೆ ವಶಪಡಿಸಿಕೊಳ್ಳಲಿದೆ ಎಂದುಕೊಂಡಿತ್ತು ಅಮೆರಿಕಾ!
Published On :
ನವದೆಹಲಿ: ಬಾಂಗ್ಲಾ ವಿಮೋಚನೆಗಾಗಿ ನಡೆದ ಯುದ್ಧದ ನಂತರ ಭಾರತದ ಪ್ರಧಾನಿ ಇಂದಿರಾ ಗಾಂಧಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯಲು ಪಶ್ಚಿಮ ಪಾಕಿಸ್ತಾನದ ವಿರುದ್ಧ ದಾಳಿಗೆ ಸೂಚಿಸುತ್ತಾರೆ ಎಂದು ಅಮೆರಿಕ ಭಾವಿಸಿತ್ತು ಎಂದು ಸಿಐಎ ಬಿಡುಗಡೆ ಮಾಡಿರುವ ವರದಿಗಳು ಹೇಳಿವೆ. 
ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಬೆನ್ನಲ್ಲೇ ವಾಷಿಂಗ್ ಟನ್ ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾರತ-ಪಾಕಿಸ್ತಾನಕ್ಕೆ ಸಂಬಂಧಿಸಿದ ಕಾರ್ಯತಂತ್ರವನ್ನು ಸಿದ್ಧಪಡಿಸಬೇಕೆಂಬುದು ಸ್ಪಷ್ಟವಾಗಿತ್ತು. ಬಾಂಗ್ಲಾ ವಿಮೋಚನೆ ಬೆನಲ್ಲೇ ನಡೆಯಬಹುದಾದ ಬೆಳವಣಿಗೆಗಳ ಬಗ್ಗೆ ಅಂದಿನ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಹೆನ್ರಿ ಎ ಕಿಸ್ಸಿಂಗರ್ ವಿಶ್ಲೇಷಣೆ ನೀಡಿದ್ದರು. ಈ ಪೈಕಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯಲು ಮತ್ತೊಂದು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಭಾವಿಸಲಾಗಿದ್ದನ್ನು ಸಿಐಎ ವರದಿಗಳ ಮೂಲಕ ತಿಳಿದುಬಂದಿದೆ. 
ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವುದಷ್ಟೇ ಅಲ್ಲದೇ, ಪಾಕಿಸ್ತಾನ ಶಸ್ತ್ರಾಗಾರ, ವಾಯುಪಡೆ ಶಕ್ತಿಯನ್ನು ನಾಶ ಮಾಡಬಹುದೆಂದೂ ಅಂದಾಜಿಸಲಾಗಿತ್ತು ಎಂದು ಸಿಐಎ ಹೇಳಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.