ಇಂಡೋ-ಚೀನಾ ಗಡಿಯಲ್ಲಿ ಭಾರತೀಯ ಸೇನೆ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ. ಆದರೆ, ಕಾಂಗ್ರೆಸ್ ಸೇನೆಯನ್ನು ಅವಮಾನಿಸುತ್ತಿದೆ. 50 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ್ದ ಪಕ್ಷದ ಕಡೆಯಿಂದ ಈ ರೀತಿಯ ಹೇಳಿಕೆ ಬರುತ್ತಿರುವುದು ಸರಿಯಲ್ಲ. ವಿದೇಶಾಂಗ ನೀತಿ ಹಾಗೂ ರಕ್ಷಣಾ ನೀತಿಗಳ ಕುರಿತಂತೆ ರಾಜಕೀಯ ಮಾಡವುದನ್ನು ಕಾಂಗ್ರೆಸ್ ನಿಲ್ಲಿಸಬೇಕು. ಕಾಂಗ್ರೆಸ್'ನ ಈ ರೀತಿಯ ವರ್ತನೆಯನ್ನು ಪ್ರತೀಯೊಬ್ಬರೂ ಖಂಡಿಸಬೇಕು ಎಂದು ತಿಳಿಸಿದ್ದಾರೆ.