ಟ್ರಂಪ್ 'ವ್ಯಕ್ತಿತ್ವ' ಕುರಿತು ಭಾರತದ ಆತುರದ ನಿರ್ಣಯ ಬೇಡ: ಜೈಶಂಕರ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಕ್ತಿತ್ವದ ಕುರಿತು ಭಾರತ ಶೀಘ್ರಗತಿಯಲ್ಲಿ ನಿರ್ಣಯ ಕೈಗೊಳ್ಳಬಾರದು ಎಂದು ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರು...
ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್
ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್
Updated on: 
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಕ್ತಿತ್ವದ ಕುರಿತು ಭಾರತ ಶೀಘ್ರಗತಿಯಲ್ಲಿ ನಿರ್ಣಯ ಕೈಗೊಳ್ಳಬಾರದು ಎಂದು ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರು ಮಂಗಳವಾರ ಹೇಳಿದ್ದಾರೆ. 
ಕೈಗಾರಿಕಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಟ್ರಂಪ್ ಅವರು ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಅದರ ಪ್ರಾಮುಖ್ಯತೆಗಳನ್ನು ನಾವು ಚಿಂತನೆ ನಡೆಸಬೇಕಿದ್ದು, ಈ ನಿಟ್ಟಿನಲ್ಲಿ ಅವರ ಉದ್ದೇಶಗಳನ್ನು ಯಾವಾಗಲೂ ಅನುವಾದಿಸುವ ಪ್ರಯತ್ನಗಳನ್ನು ಮಾಡಬಾರದು ಎಂದು ಹೇಳಿದ್ದಾರೆ. 
ಟ್ರಂಪ್ ಅವರನ್ನು ಭಾರತ ಗಂಭೀರವಾಗಿ ಪರಿಗಣಿಸಬೇಕಿದೆ. ಅಮೆರಿಕಾ ಹಾಗೂ ಭಾರದ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಪ್ರಸ್ತುತ ಟ್ರಂಪ್ ಅವರ ವ್ಯಕ್ತಿತ್ವದ ಬಗ್ಗೆ ಭಾರತ ಶೀಘ್ರಗತಿಯಲ್ಲಿ ನಿರ್ಣಯಗಳನ್ನು ಕೈಗೊಳ್ಳದಿರುವುದೇ ಉತ್ತಮವಾಗಿರುತ್ತದೆ ಎಂದು ತಿಳಿಸಿದ್ದಾರೆ. 
ಅಮೆರಿಕ ಮಾಧ್ಯಮಗಳು ನನ್ನನ್ನು ಅಕ್ಷರಶಃವಾಗಿ ತೆಗೆದುಕೊಳ್ಳುತ್ತದೆ ಆದರೆ, ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಸಾರ್ವಜನಿಕರು ನನ್ನನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ ವಿಚಾರವನ್ನು ತೆಗೆದುಕೊಂಡರೆ ವಿಶ್ವದೆಲ್ಲೆಡೆ ವಿವಿಧ ರೀತಿಯ ಒಳನೋಟಗಳಿರುತ್ತವೆ. ಆದರೆ. ನಮ್ಮ ಧ್ಯೇಯ, ಮೊದಲ ಆದ್ಯತೆಯೇನಿದ್ದರೂ ನೆರೆರಾಷ್ಟ್ರಗಳ ಮೇಲಾಗಿರುತ್ತದೆ. ಇನ್ನು ಕೆಲವು ವಾರಗಳು ಮತ್ತು ತಿಂಗಳುಗಳಲ್ಲಿ ಅಮೆರಿಕಾದೊಂದಿಗೆ ಉನ್ನತವಾದ ಮಾತುಕತೆ ಹಾಗೂ ಒಪ್ಪಂದಗಳಾಗುವ ಸಂಭವವಿದೆ. 
ಜಾಗತೀಕರಣದಲ್ಲಿ ಭಯೋತ್ಪಾದನೆಗಿಂತಲೂ ದೊಡ್ಡ ವಿಚಾರವಿಲ್ಲ. ಯುದ್ಧತಂತ್ರಗಳು, ರಾಷ್ಟ್ರೀಯತೆಯ ಮೂಲಕವೇ ಇದಕ್ಕೆ ಪ್ರತಿಕ್ರಿಯೆ ನೀಡಬೇಕಿದೆ. ಉದಾಹರಣೆಗೆ, ಅಮೆರಿಕ ಹಾಗೂ ರಷ್ಯಾ ನಡುವಿನೆ ಸಂಬಂಧ ಉತ್ತಮವಾಗಿದ್ದು, ಸಿರಿಯಾ ಪರಿಸ್ಥಿತಿಯನ್ನು ಎರಡೂ ರಾಷ್ಟ್ರಗಳು ನಿಭಾಯಿಸುತ್ತಿವೆ. ಇದು ನಿಜಕ್ಕೂ ಉತ್ತಮವಾದ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com