ಇದೇ ವೇಳೆ ಕೇರಳದ ಆಡಳಿತಾರೂಢ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಅವರು, ನ್ಯಾಯಾಲಯದ ಆದೇಶದ ಹೆಸರಿನಲ್ಲಿ ಹಿಂಸಾಚಾರ ಸೃಷ್ಟಿಸುತ್ತಿರುವವರಿಗೆ ಒಂದು ಮಾತನ್ನು ಹೇಳುತ್ತೇನೆ. ವಿವಿಧ ನಿಯಮ ಹಾಗೂ ಪದ್ಧತಿಗಳೊಂದಿಗೆ ಸಾಕಷ್ಟು ದೇವಾಲಯಗಳು ನಡೆಯುತ್ತಿವೆ. ಸರ್ಕಾರದ ವರ್ತನೆ ಹೀಗೆಯೇ ಮುಂದುವರೆದರೆ, ಎಲ್'ಡಿಎಸ್ ಸರ್ಕಾರವನ್ನು ಕೆಳಗಿಳಿಸಲು ಬಿಜೆಪಿ ಹಿಂಜರಿಯುವುದಿಲ್ಲ ಎಂದು ತಿಳಿಸಿದ್ದಾರೆ.