ಅಮಿತ್ ಶಾ ರ್ಯಾಲಿಯಲ್ಲಿ 'ಗೋಲಿ ಮಾರೋ' ಘೋಷಣೆ ಕೂಗಿದ ಮೂವರು ಬಿಜೆಪಿ ಕಾರ್ಯಕರ್ತರ ಬಂಧನ

ಕೋಲ್ಕತಾದ ಶಾಹಿದ್ ಮಿನರ್ ಮೈದಾನದಲ್ಲಿ ಭಾನುವಾರ ನಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರ‍್ಯಾಲಿಯಲ್ಲಿ 'ಗೋಲಿ ಮಾರೋ'(ಗುಂಡು ಹೊಡೆಯಿರಿ) ಘೋಷಣೆ ಕೂಗಿದ ಮೂವರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 
ಅಮಿತ್ ಶಾ
ಅಮಿತ್ ಶಾ
Updated on: 

ಕೋಲ್ಕತಾ: ಕೋಲ್ಕತಾದ ಶಾಹಿದ್ ಮಿನರ್ ಮೈದಾನದಲ್ಲಿ ಭಾನುವಾರ ನಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರ‍್ಯಾಲಿಯಲ್ಲಿ 'ಗೋಲಿ ಮಾರೋ'(ಗುಂಡು ಹೊಡೆಯಿರಿ) ಘೋಷಣೆ ಕೂಗಿದ ಮೂವರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 

ಶಾಹಿದ್ ಮಿನರ್ ಮೈದಾನದಲ್ಲಿ ಅಮಿತ್ ಶಾ ಅವರು ಸಿಎಎ ಪರ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ವೇಳೆಯೇ ಕೆಲವು ಕಾರ್ಯಕರ್ತರು 'ಗೋಲಿ ಮಾರೋ' ಘೋಷಣೆ ಕೂಗಿದ್ದರು. ಕೂಡಲೇ ಗುಂಪನ್ನು ಚದುರಿಸಿದ ಪೊಲೀಸರು, ಘೋಷಣೆ ಕೂಗದಂತೆ ಎಚ್ಚರಿಕೆ ನೀಡಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿತ್ತು. 

ಘಟನೆಗೆ ಸಂಬಂಧಿಸಿದಂತೆ ಇದೀಗ ಪೊಲೀಸರು ಮೂವರು ಬಿಜೆಪಿ ಕಾರ್ಯಕರ್ತರನ್ನು ಬಂಧನಕ್ಕೊಳಪಡಿಸಿದ್ದಾರೆ. ಬಂಧತರನ್ನು ಸುರೇಂದ್ರ ಕುಮಾರ್ ತಿವಾರಿ, ದ್ರುಬಾ ಬಸು ಮತ್ತು ಪಂಕಜ್ ಪ್ರಸಾದ್ ಎಂದು ಗುರ್ತಿಸಲಾಗಿದೆ.

ಮೂವರ ವಿರುದ್ಧ ಇದೀಗ ನ್ಯೂ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com