ಬೆಚ್ಚಿಬೀಳಿಸುವ ಅಪಘಾತ: ಪಿಕಪ್ ವ್ಯಾನ್‌ನಿಂದ ಕಬ್ಬಿಣದ ಸರಳುಗಳು ಬಿದ್ದು ಬೈಕ್ ಸವಾರ ಸಾವು!-Video

ಮೃತರನ್ನು ಶೆರಿನ್ ಜಾನ್ ಎಂದು ಗುರುತಿಸಲಾಗಿದ್ದು, ತ್ರಿಶೂರ್‌ನ ಕುಟ್ಟನೆಲ್ಲೂರು ಪ್ರದೇಶದ HiLITE ಮಾಲ್ ಸಮೀಪ ಬೆಳಗ್ಗೆ 10.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
Biker Killed After Iron Rods Fall Off Van
ಕಬ್ಬಿಣದ ಸರಳುಗಳು ಬಿದ್ದು ಬೈಕ್ ಸವಾರ ಸಾವು
Updated on

ತ್ರಿಶೂರ್: ಚಲಿಸುತ್ತಿದ್ದ ಪಿಕಪ್ ವ್ಯಾನ್‌ನಲ್ಲಿದ್ದ ಕಬ್ಬಿಣದ ಸರಳುಗಳು ಏಕಾಏಕಿ ಜಾರಿ ಬೈಕ್ ಸವಾರನ ಮೇಲೆ ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಮೃತರನ್ನು ಶೆರಿನ್ ಜಾನ್ ಎಂದು ಗುರುತಿಸಲಾಗಿದ್ದು, ತ್ರಿಶೂರ್‌ನ ಕುಟ್ಟನೆಲ್ಲೂರು ಪ್ರದೇಶದ HiLITE ಮಾಲ್ ಸಮೀಪ ಬೆಳಗ್ಗೆ 10.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ರಸ್ತೆಯಲ್ಲಿ ಸಾಗುತ್ತಿದ್ದ ಆಟೋ ರಿಕ್ಷಾವೊಂದು ಏಕಾಏಕಿ ಮಧ್ಯರಸ್ತೆಯಲ್ಲೇ ಯೂ-ಟರ್ನ್ ತೆಗೆದುಕೊಂಡಿದೆ. ಆಟೋದ ಹಿಂದೆ ಬೈಕ್‌ನಲ್ಲಿ ಬರುತ್ತಿದ್ದ ಶೆರಿನ್ ಜಾನ್ ಕೂಡ ತಕ್ಷಣ ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ.

ಅವರ ಹಿಂದೆಯೇ ಕಬ್ಬಿಣದ ಸರಳುಗಳನ್ನು ಸಾಗಿಸುತ್ತಿದ್ದ ಪಿಕಪ್ ವ್ಯಾನ್ ಕೂಡ ಹಠಾತ್ ಬ್ರೇಕ್ ಹಾಕಬೇಕಾಯಿತು. ಈ ವೇಳೆ ಪಿಕಪ್ ವ್ಯಾನ್‌ನಲ್ಲಿದ್ದ ಕಬ್ಬಿಣದ ಸರಳುಗಳು ಮುಂದಕ್ಕೆ ಜಾರಿದ್ದು, ಶೆರಿನ್ ಅವರ ದೇಹದ ಮೇಲೆ ಬಿದ್ದಿವೆ ಎಂದು ಹೇಳಲಾಗಿದೆ.

Biker Killed After Iron Rods Fall Off Van
Video: ಗ್ಯಾಂಗ್'ಸ್ಟರ್ ಗಳ ಅಟ್ಟಹಾಸ; ಪೊಲೀಸರಿಂದ ತಪ್ಪಿಸಿಕೊಳ್ಳುವ ವೇಳೆ ತೆಂಗಿನಕಾಯಿ ವ್ಯಾಪಾರಿ ಮೇಲೆ ಹರಿದ Thar!

ರಕ್ಷಿಸಲು ಸ್ಥಳೀಯರ ಹರಸಾಹಸ

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ದೇಹ ಮೇಲೆ ಬಿದ್ದಿದ್ದ ಕಬ್ಬಿಣದ ಸರಳುಗಳನ್ನು ತೆರವುಗೊಳಿಸಿ ಶೆರಿನ್ ಅವರನ್ನು ರಕ್ಷಿಸಲು ಸ್ಥಳೀಯರು ಹರಸಾಹಸಪಟ್ಟಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶೆರಿನ್ ಮೃತಪಟ್ಟಿದ್ದಾರೆ.

ಪಿಕಪ್ ವ್ಯಾನ್ ಪೊಲೀಸರ ವಶಕ್ಕೆ

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕಬ್ಬಿಣದ ಸರಳುಗಳನ್ನು ಸಾಗಿಸುತ್ತಿದ್ದ ಪಿಕಪ್ ವ್ಯಾನ್‌ನ್ನು ವಶಕ್ಕೆ ಪಡೆದಿದ್ದಾರೆ. ಅಪಘಾತದ ಕುರಿತು ತನಿಖೆ ಮುಂದುವರಿದಿದೆ. ಮೃತ ಶೆರಿನ್ ಅವರ ದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com