ಸುಪ್ರೀಂನ ಮಧ್ಯಂತರ ಆದೇಶ ವಿದ್ಯಾರ್ಥಿಗಳ ವಿರುದ್ಧ ದುರ್ಬಳಕೆಯಾಗುವ ಸಾಧ್ಯತೆ: 'ಕಿರುಕುಳ' ಮುಂದುವರಿದರೆ ಸರಿ ಇರಲ್ಲ- ದೀಪ್ಕೆ ವಾರ್ನಿಂಗ್!ಸರ್ಕಾರ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಅವರ ವಿರುದ್ಧ ದ್ವೇಷಪೂರಿತ ಕ್ರಮಗಳನ್ನು (witch-hunting) ಕೈಗೊಳ್ಳುತ್ತಿದೆ ಎಂದು ದಿಪ್ಕೆ ಆರೋಪಿಸಿದ್ದಾರೆ.
ದೆಹಲಿಗೆ ಬಂದು ನಾಟಕವಾಡುವ ನಿಮಗೆ KPSC ಹಗರಣ ಅನ್ಯಾಯ ಅನಿಸಲಿಲ್ಲವೇ?: ಲೋಕಸಭೆಯಲ್ಲಿ ಸಿಎಂ ಶಿವಕುಮಾರ್ ವಿರುದ್ಧ ತೇಜಸ್ವಿ ವಾಗ್ದಾಳಿ!ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026ರ ಚರ್ಚೆಯ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಶಾಸಕರ ಭವನದ 7ನೇ ಮಹಡಿಯಿಂದ ಬಿದ್ದು ಮಾಜಿ ಸಚಿವ ನಾನಕ್ ರಾಮ್ ಭುರ್ಜಿ ಸಾವು; ಕೊಲೆಯೋ, ಆತ್ಮಹತ್ಯೆಯೋ?ಮಾಜಿ ಸಚಿವರ ಸಾವಿನ ಬಗ್ಗೆ ಅವರ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನೂ ತಿಳಿದು ಬಂದಿಲ್ಲ. ಹೀಗಾಗಿ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಾಕ್ ತನ್ನ ಅತಿಕ್ರಮಣವನ್ನು ಮುಚ್ಚಿಹಾಕಲು PoKನಲ್ಲಿ ಚುನಾವಣೆ ನಡೆಸುವ ಪ್ರಯತ್ನ: ಭಾರತ ತೀವ್ರ ಖಂಡನೆಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ನಡೆಯುತ್ತಿರುವ ಚುನಾವಣೆಗಳನ್ನು ಭಾರತ ತಿರಸ್ಕರಿಸಿದೆ. ಇಡೀ ಜಮ್ಮು ಮತ್ತು ಕಾಶ್ಮೀರ ಭಾರತದ ಭಾಗವಾಗಿದೆ. ಈ ಚುನಾವಣೆಗಳು ಕೇವಲ ಅಕ್ರಮ ಆಕ್ರಮಣವನ್ನು ಮರೆಮಾಚುವ ಪ್ರಯತ್ನ ಎಂದು ಹೇಳಿದೆ.
ಸಿಜೆಪಿ ನೇತೃತ್ವದ ಪ್ರತಿಭಟನೆಗೆ ಪಾಕಿಸ್ತಾನದ Gen Z ಬೆಂಬಲ: MEA ತೀಕ್ಷ್ಣ ಪ್ರತಿಕ್ರಿಯೆ! Videoದಶಕಗಳಿಂದ ನಡೆಯುತ್ತಿರುವ ಪಾಕ್ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಯನ್ನು ಕೊನೆಗೊಳಿಸಬೇಕೆಂದು Gen Z ಸೇರಿದಂತೆ ಭಾರತೀಯರು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ ಎಂದು MEA ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಿಗೆ ಕಡಿವಾಣ: ಮೆಟಾ, ಎಕ್ಸ್, ಗೂಗಲ್, ಸ್ನ್ಯಾಪ್‌ಚಾಟ್‌ಗೆ ಸಂಸದೀಯ ಸಮಿತಿ ಸಮನ್ಸ್ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ವಿಷಯಗಳ ಕುರಿತು ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಕ್ರೋಢೀಕರಿಸಲು ಕಾಕ್ರೋಚ್ ಜನತಾ ಪಕ್ಷ(ಸಿಜೆಪಿ) ವಿಶೇಷವಾಗಿ ಇನ್‌ಸ್ಟಾಗ್ರಾಮ್ ಅನ್ನು ವ್ಯಾಪಕವಾಗಿ ಬಳಸಿಕೊಂಡ ಕೆಲವು ದಿನಗಳ ನಂತರ ಈ ಸಭೆ ಕರೆಯಲಾಗಿದೆ.
ಪ್ರಹ್ಲಾದ್ ಜೋಶಿ ಕೊಳಕು ಮನುಷ್ಯ; ಅತ್ಯಾಚಾರಿಯನ್ನು ರಕ್ಷಿಸುವವರು ನೂತನ ಶಿಕ್ಷಣ ಸಚಿವರಾಗಿದ್ದಾರೆ: ರಾಹುಲ್ ಗಂಭೀರ ಆರೋಪ, Videoಗರ್ಭಿಣಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದವರನ್ನು ಬಿಡುಗಡೆ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದ ವ್ಯಕ್ತಿ ಇಂದು ಹೊಸ ಶಿಕ್ಷಣ ಸಚಿವರನ್ನು ನೇಮಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಪ್ರಿಯಾಂಕಾ ವಾದ್ರಾ ಹೇಳಿಕೆ ಸಂಸತ್ತಿನಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
ಮೇಕೆದಾಟು ಯೋಜನೆಗೆ ತಮಿಳುನಾಡು ಮತ್ತೆ ಅಡ್ಡಗಾಲು; ಪ್ರಧಾನಿ ಮೋದಿ ಮಧ್ಯ ಪ್ರವೇಶಿಸುವಂತೆ ಕೋರಿ ವಿಜಯ್ ಪತ್ರಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಕೆಳಹರಿವಿನ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ ಎಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಹೇಳಿದ್ದೆ ತಡ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್, ಮೇಕೆದಾಟು ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಕೋರಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
LS Debate: ಸರ್ಕಾರ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು, ತತ್ತರಿಸಿ ಹೋಗಿದೆ- ಅಖಿಲೇಶ್ ಯಾದವ್; Video"ಜಬ್ ಸರ್ಕಾರ್ ದಾರ್ ಜಾತಿ ಹೈ, ಘಬ್ರಾ ಜಾತಿ ಹೈ, ಟು ಸ್ವೀಕರ್ ಕರ್ ಲೇತಿ ಹೈ... ಸರ್ಕಾರ್ ಝುಕಿ ಔರ್ ಸ್ವೀಕರ್ ಕಿಯಾ (ಸರ್ಕಾರ ಗಲಿಬಿಲಿಗೊಂಡಾಗ, ಅದು ಸ್ವೀಕರಿಸುತ್ತದೆ... ಸರ್ಕಾರವು ಬಾಗಿ ಬೇಡಿಕೆಗಳನ್ನು ಸ್ವೀಕರಿಸುತ್ತದೆ)" ಎಂದು ಅವರು ಹೇಳಿದರು.
LS Debate: ದೇಶದ ಯುವಶಕ್ತಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೆಚ್ಚಿಬಿದ್ದಿದೆ- ಸಂಸದೆ ಪ್ರಿಯಾಂಕಾ ವಾದ್ರಾಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026ರ ಚರ್ಚೆಯ ಸಂದರ್ಭದಲ್ಲಿ ವಯನಾಡು ಕ್ಷೇತ್ರದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, ಕಾಕ್ರೋಚ್ ಜನತಾ ಪಕ್ಷದ (CJP) ಪ್ರತಿಭಟನೆಯ ಸಂದರ್ಭದಲ್ಲಿ ಲಾಠಿಚಾರ್ಜ್ ಕುರಿತು ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡರು.
CJP, ಖಾತೆ ಬದಲಾವಣೆ ಪ್ರಸ್ತಾಪ ತಿರಸ್ಕರಿಸಿದ್ದರಿಂದ ಧರ್ಮೇಂದ್ರ ಪ್ರಧಾನ್ ರಾಜೀನಾಮೆ: BJP ಹೇಳಿದ್ದೇನು?ವರದಿಗಳ ಪ್ರಕಾರ, ಜಂತರ್ ಮಂತರ್‌ನಲ್ಲಿ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ಪ್ರತಿಭಟನೆ ನಡೆಸಿದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾಗ, ಸರ್ಕಾರ ಆರಂಭದಲ್ಲಿ ಪ್ರಧಾನ್ ಅವರ ಖಾತೆಯನ್ನು ಬದಲಾಯಿಸುವ ಪ್ರಸ್ತಾಪ ಮುಂದಿಟ್ಟಿದೆ.
ಜನತೆ ವಿಷ್ಣುವಿನ ಅವತಾರ, ನಿರ್ಲಕ್ಷ್ಯಿಸಬೇಡಿ; ಕೇಂದ್ರದ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ; ಸಿಜೆಪಿ ಪ್ರತಿಭಟನೆಗೆ ಮೆಚ್ಚುಗೆಪಕ್ಷದ ಮುಖವಾಣಿ ಸಾಮ್ನಾ ಗೆ ಸಂಸದ ಸಂಜಯ್ ರಾವತ್ ನಿರೂಪಣೆಯಲ್ಲಿ ಸಂದರ್ಶನ ನೀಡಿರುವ ಉದ್ಧವ್ ಠಾಕ್ರೆ, ಸರ್ಕಾರ ಭಯ ಹುಟ್ಟಿಸಿ ದೀರ್ಘಾವಧಿ ಆಡಳಿತ ನಡೆಸಿದೆ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿಗೆ ಮದ್ವೆ ಆಗುವಂತೆ ಮನವೊಲಿಸಿ: CJP ವೈರಲ್ ಪ್ರತಿಭಟನಾಕಾರನ ಬಳಿ ಪ್ರಿಯಾಂಕಾ ಗಾಂಧಿ ಮನವಿ!ಹೌದು, ಸಿಜೆಪಿ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಪರ ಧ್ವನಿ ಎತ್ತುವ ಮೂಲಕ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆಗಿದ್ದ ದಿನಗೂಲಿ ಕಾರ್ಮಿಕ ಮೊಹಮ್ಮದ್ ಇರ್ಫಾನ್ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ನಡುವಿನ ಸಂಭಾಷಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆದಿದೆ.
ಮಧ್ಯರಾತ್ರಿ 'ಸೆಲ್ಫಿ ವಿಡಿಯೋ' ಎಫೆಕ್ಟ್: ಇನ್ಸ್ಟಾಗ್ರಾಂನಲ್ಲಿ ಮೋದಿ ಹೊಸ ದಾಖಲೆ; 105 ಮಿಲಿಯನ್ ದಾಟಿದ ಫಾಲೋವರ್ಸ್!ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದು, ಅವರ ಫಾಲೋವರ್ಸ್ ಸಂಖ್ಯೆ ಈಗ 105 ಮಿಲಿಯನ್ ದಾಟಿದೆ.
ಎಲ್ಲದಕ್ಕೂ AI ಇರುವಾಗ 'ವೈದ್ಯಕೀಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳೇಕೆ 10 ವರ್ಷ ವ್ಯಯಿಸಬೇಕು? ನೀಟ್ಗೆ ಏಕೆ ತಯಾರಿ ನಡೆಸಬೇಕು?: Ramgopal Verma"ಶಿಕ್ಷಣವನ್ನು ಕೊಲ್ಲಬೇಕು." ಎಂಬ ಶೀರ್ಷಿಕೆಯಡಿ ಬರೆದಿರುವ ವರ್ಮಾ, ಮೊದಲು ಈ ದೇಶದಲ್ಲಿ ವೈದ್ಯಕೀಯ ಅಧ್ಯಯನದ ಸಾಂಪ್ರದಾಯಿಕ ವಿಧಾನವನ್ನು ವಿವರಿಸಿದರು.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್