ಕೇರಳದ 19 ವರ್ಷದ ವಿದ್ಯಾರ್ಥಿನಿ ಮುಡಿಗೆ 'ಮಿಸ್ ಯೂನಿವರ್ಸ್ ಇಂಡಿಯಾ 2026' ಕಿರೀಟ; ಯಾರು ಈ ಅತಿಲೋಕ ಸುಂದರಿ?ಭಾನುವಾರ ಜೈಪುರದಲ್ಲಿ ನಡೆದ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ 52 ಇತರ ಸ್ಪರ್ಧಿಗಳನ್ನು ಹಿಂದಿಕ್ಕಿದ ಕಾಜಿಯಾ, 'ಮಿಸ್ ಯೂನಿವರ್ಸ್ ಇಂಡಿಯಾ 2026' ವಿನ್ನರ್ ಆಗಿ ಹೊರಹೊಮ್ಮಿದರು.
Short dress video ವಿವಾದ: ಸ್ತ್ರೀ ದ್ವೇಷಿಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? DMK ಬೆಂಬಲಿಗರ ವಿರುದ್ಧ ಟಿವಿಕೆ ಸಚಿವೆ ಆಕ್ರೋಶಡಿಎಂಕೆ ಬೆಂಬಲಿಗರು ಎನ್ನಲಾದ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಸಣ್ಣ ಉಡುಪಿನಲ್ಲಿ ಮಹಿಳೆಯ ವೀಡಿಯೊವನ್ನು ಹಂಚಿಕೊಂಡು ಇದು ಕೈಗಾರಿಕಾ ಸಚಿವೆ ಕೀರ್ತನಾ ಅವರಾ? ಎಂದು ಪ್ರಶ್ನಿಸುವುದರೊಂದಿಗೆ ವಿವಾದ ಪ್ರಾರಂಭವಾಯಿತು. ನಂತರ ಟೀಕೆಗಳು ಬಂದವು.
'ಲಕ್ಷಾಂತರ ಜನರು ಮಾಡಿದ ತಪ್ಪು ಇಂದು ಕೋಟ್ಯಂತರ ಜನರಿಗೆ ತೊಂದರೆಯಾಗಿ ಪರಿಣಮಿಸಿದೆ': DMK ಮುಖ್ಯಸ್ಥ ಎಂಕೆ ಸ್ಟಾಲಿನ್ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಸ್ಟಾಲಿನ್, ದಿವಂಗತ ಡಿಎಂಕೆ ನಾಯಕ ಎಂ. ಕರುಣಾನಿಧಿ ಅವರ ಸಹೋದರಿಯ ಪುತ್ರ ಅಮೃತಂ ಹಾಗೂ ಮಾಜಿ ಕೇಂದ್ರ ಸಚಿವರಾದ ಮುರಸೊಲಿ ಮಾರನ್ ಮತ್ತು ಮುರಸೊಲಿ ಸೆಲ್ವಂ ಅವರೊಂದಿಗಿನ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು.
ನರಗಳಿಗೆ ಸಂಬಂಧಿಸಿದ ಈ 4 ಔಷಧಿಗಳ ಮಾರಾಟದ ಮೇಲೆ ಕೇಂದ್ರದ ನಿರ್ಬಂಧನಿಯಮಗಳ ಪ್ರಕಾರ, ಈ ದಾಖಲೆಗಳನ್ನು ಮೂರು ವರ್ಷಗಳವರೆಗೆ ಸಂರಕ್ಷಿಸಬೇಕು ಮತ್ತು ಅಧಿಕಾರಿಗಳು ತಪಾಸಣೆಗೆ ಲಭ್ಯವಾಗುವಂತೆ ಮಾಡಬೇಕು. ಆಗಸ್ಟ್ 19 ರ ದಿನಾಂಕದ ಅಧಿಸೂಚನೆಯನ್ನು 30-ದಿನದ ಅವಧಿ ಮುಗಿದ ನಂತರ ಅಂತಿಮಗೊಳಿಸಲಾಗುತ್ತದೆ
ಸಿಎಂ ವಿಜಯ್ ಬಂಪರ್ ಘೋಷಣೆ: ವರ್ಷಕ್ಕೆ 3 ಉಚಿತ LPG ಸಿಲಿಂಡರ್; ಮಹಿಳೆಯರ ಉಚಿತ ಬಸ್ ಪ್ರಯಾಣ ವಿಸ್ತರಣೆ; ಪರಂದೂರು ವಿಮಾನ ನಿಲ್ದಾಣಕ್ಕೆ ಬ್ರೇಕ್!ವಿಧಾನಸಭೆಯಲ್ಲಿ ನಿಯಮ 110ರ ಅಡಿಯಲ್ಲಿ ಘೋಷಣೆಗಳನ್ನು ಮಾಡಿದ ಸಿಎಂ ವಿಜಯ್ ಅವರು, ಪ್ರಸ್ತಾವಿತ ಪರಂದೂರು ಎರಡನೇ ವಿಮಾನ ನಿಲ್ದಾಣ ಯೋಜನೆಯನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.
ಸೆಪ್ಟೆಂಬರ್ 11 ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ ಸಾಧ್ಯತೆಸೆಪ್ಟೆಂಬರ್ 11 ಶುಕ್ರವಾರ, ಮತ್ತು ನಂತರದ ಎರಡು ದಿನಗಳು ಬ್ಯಾಂಕ್ ರಜಾದಿನಗಳಾಗಿವೆ. ಸೆಪ್ಟೆಂಬರ್ 14 ಗಣೇಶ ಚತುರ್ಥಿಯಂದು ಕೆಲವು ರಾಜ್ಯಗಳಲ್ಲಿ ಬ್ಯಾಂಕ್ ಗಳಿಗೆ ರಜೆ ದಿನವಾಗಿದೆ.
7 ಗಂಟೆಗಳಲ್ಲಿ 416 ಮದುವೆ: ಕೇರಳಿಗರ ಚಿಂಗಂ ತಿಂಗಳ ಮೊದಲ ಭಾನುವಾರ ಗುರುವಾಯೂರು ದೇವಸ್ಥಾನದಲ್ಲಿ ದಾಖಲೆಯ ವಿವಾಹ ಕಾರ್ಯ!ನಿನ್ನೆ ಭಾನುವಾರ ನಸುಕಿನ ಜಾವ 4.10ಕ್ಕೆ ಆರಂಭಗೊಂಡು ಮಧ್ಯಾಹ್ನ 12.45ಕ್ಕೆ ಮುಕ್ತಾಯಗೊಂಡ ವಿವಾಹ ಕಾರ್ಯಕ್ರಮವು, 2024ರ ಸೆಪ್ಟೆಂಬರ್ 8ರಂದು ಒಂದೇ ದಿನದಲ್ಲಿ ನಡೆದಿದ್ದ 334 ಮದುವೆಗಳ ಹಿಂದಿನ ದಾಖಲೆಯನ್ನು ಸುಲಭವಾಗಿ ಮುರಿದಿದೆ.
ಐಫೋನ್ ದುರಂತಕ್ಕೆ ರೋಚಕ ಟ್ವಿಸ್ಟ್: ಚಪಾತಿ ಎರಡೂ ಕಡೆ ಸುಟ್ಟಾಗ ಮಾತ್ರ ರುಚಿ, ಸಂಬಂಧಗಳ ವಿಷಯದಲ್ಲೂ ಅಷ್ಟೇ; ತಾಯಿ ಸಂಗೀತಾ ನಿಗೂಢ ಪೋಸ್ಟ್..!ಕುನಾಲ್ ಕಳೆದ ವರ್ಷ ಇದೇ ಬೆಟ್ಟದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಆ ಸಮಯದಲ್ಲಿ ಆತನ ಮನವೊಲಿಸಿ ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
ಕೋಳಿ ಸಾಕಣೆ ಹೆಸರಲ್ಲಿ ನಡೀತಿತ್ತು ಡ್ರಗ್ಸ್ ದಂಧೆ; ಗಡಿ ಭಾಗದಲ್ಲಿ ಖಾಕಿ ಭರ್ಜರಿ ಬೇಟೆ; 1 ಕೋಟಿ ರೂ ಮೌಲ್ಯದ ನಿಷೇಧಿತ ಡ್ರಗ್ಸ್ ವಶKolhapur Drug Bust: ಕೋಳಿ ಸಾಕಣೆ ಕೇಂದ್ರದ ಹೆಸರಲ್ಲಿ ಗುಟ್ಟಾಗಿ ನಡೆಯುತ್ತಿದ್ದ ಭಾರಿ ದಂಧೆಯೊಂದು ಬಯಲಾಗಿದೆ. ಹೊರನೋಟಕ್ಕೆ ಹಳ್ಳಿಯ ಸಾಮಾನ್ಯ ಕೋಳಿ ಫಾರಂನಂತೆ ಕಂಡರೂ, ಒಳಗೆ ಕಾಲಿಟ್ಟ ಪೊಲೀಸರಿಗೆ ಕಂಡಿದ್ದು ನೂರಾರು ಕೋಟಿ ಮೌಲ್ಯದ ಅಪಾಯಕಾರಿ ಮಾದಕ ವಸ್ತುಗಳ ತಯಾರಿಕಾ ಜಾಲ. ಆ ಕುರಿತ ವರದಿ ಇಲ್ಲಿದೆ:
ಮುಂಬೈ: ಗಣೇಶ ಮೂರ್ತಿ ಮೆರವಣಿಗೆ ವೇಳೆ ಮೊಟ್ಟೆ ಎಸೆತ; ಎರಡು ಗುಂಪುಗಳ ನಡುವೆ ಘರ್ಷಣೆ; ಪೊಲೀಸ್ ಬಂದೋಬಸ್ತ್; Videoಪಿಟಿಐ ಸುದ್ದಿಸಂಸ್ಥೆ ವರದಿ ಪ್ರಕಾರ, ಗಣೇಶ ಮೂರ್ತಿಯ ಆಗಮನದ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ. ಗಣೇಶೋತ್ಸವ ಆಯೋಜಕರು, ಮೂರ್ತಿಯನ್ನು ಮೆರವಣಿಗೆಯಲ್ಲಿ ತರುತ್ತಿದ್ದ ವೇಳೆ ಕೆಲವರು ಮೊಟ್ಟೆ ಎಸೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಮಹಾರಾಷ್ಟ್ರ: ಜಿಲ್ಲಾ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸ್ಫೋಟ; 3 ನವಜಾತ ಶಿಶುಗಳ ಸಾವು!ಸಿಬ್ಬಂದಿಯ ಹರಸಾಹಸದ ಹೊರತಾಗಿಯೂ ತೀವ್ರ ಸುಟ್ಟ ಗಾಯಗಳು ಮತ್ತು ಹೊಗೆಯಿಂದಾಗಿ ಉಸಿರುಗಟ್ಟಿ ಮೂರು ಕಂದಮ್ಮಗಳು ಪ್ರಾಣ ಕಳೆದುಕೊಂಡವು.
ದೆಹಲಿಯಲ್ಲಿ ಭೀಕರ ಅಪಘಾತ: ಡಿವೈಡರ್ ದಾಟಿ SUVಗೆ ಕಾರು ಡಿಕ್ಕಿ; ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸೇರಿ 6 ಮಂದಿಗೆ ಗಾಯ..!ಲಕ್ಷ್ಮೀನಗರದಿಂದ ಐಟಿಒ ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು, ತಡೆಗೋಡೆ ದಾಟಿ ಎದುರಿನ ರಸ್ತೆಗೆ ನುಗ್ಗಿ, ಐಟಿಒದಿಂದ ಲಕ್ಷ್ಮೀನಗರದತ್ತ ಬರುತ್ತಿದ್ದ ಕರ್ನಾಟಕ ಸರ್ಕಾರ ಎಂಬ ಫಲಕ ಹೊಂದಿದ್ದ ಎಸ್ಯುವಿಗೆ ಡಿಕ್ಕಿ ಹೊಡೆದಿದೆ.
Onion Price: ಈರುಳ್ಳಿ ಬೆಲೆ ದಿಢೀರ್ ಏರಿಕೆ; ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಮತ್ತಷ್ಟು ದುಬಾರಿ ಸಾಧ್ಯತೆ; ಕಾರಣವೇನು?ಪೂರೈಕೆ ಕಡಿಮೆಯಾಗಿರುವುದು ಹಾಗೂ ಹೊಸ ಖಾರಿಫ್ ಬೆಳೆ ಮಾರುಕಟ್ಟೆಗೆ ಬರುವಲ್ಲಿ ವಿಳಂಬವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ದೇಶಾದ್ಯಂತ ಈರುಳ್ಳಿ ದರ ದಿಢೀರ್ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ..
ಮದ್ಯ ಸಾಗಣೆ ಹಗರಣ: ಆಂಧ್ರಪ್ರದೇಶದ ಮಾಜಿ ಸಚಿವರ ಬಂಧಿಸಿದ EDಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ರಾವ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.
ಮಹಿಳಾ ಮೀಸಲಾತಿ ಮಸೂದೆ ಬೆಂಬಲಿಸಿ, ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಮಾತರಂ ಪೂರ್ತಿಯಾಗಿ ಹಾಡಿ ತೋರಿಸಿ: ಸ್ಮೃತಿ ಇರಾನಿ ಸವಾಲುಶನಿವಾರ ಪುಣೆಯಲ್ಲಿ ನಡೆದ 'ಛಾತ್ರೋನ್ ಕಿ ಗೂಂಜ್' ಕಾರ್ಯಕ್ರಮದಲ್ಲಿ ಗಾಂಧಿಯವರು ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ್ದಕ್ಕೆ ಪ್ರತಿಕ್ರಿಯೆಯಾಗಿ ಇರಾನಿಯವರ ಈ ಹೇಳಿಕೆಗಳು ಬಂದಿವೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!