DCM DK Shivakumar
ಡಿಸಿಎಂ ಡಿಕೆ ಶಿವಕುಮಾರ್

ಕುರ್ಚಿ ಗುದ್ದಾಟ: 'ಇನ್ನು ರಾಜಕಾರಣ ಇಲ್ಲ.. ಜನರ ಸೇವೆ, ಆಡಳಿತ ಅಷ್ಟೇ'; ಡಿಸಿಎಂ ಡಿ.ಕೆ ಶಿವಕುಮಾರ್ ಮಾರ್ಮಿಕ ಮಾತು

ಕಳೆದ ಒಂದೂವರೆ ತಿಂಗಳಿಂದ ಕಾಂಗ್ರೆಸ್​ ಪಾಳಯದಲ್ಲಿ ಸಂಚಲನ ಸೃಷ್ಟಿಸಿದ್ದ ಸಿಎಂ ಬದಲಾವಣೆ ಚರ್ಚೆಗೆ ಖುದ್ದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​​ ತೆರೆ ಎಳೆದಿದ್ದಾರೆ.
Published on

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಸಿಎಂ ಕುರ್ಚಿಗಾಗಿ ಗುದ್ದಾಟಕ್ಕೆ ತಾತ್ಕಾಲಿಕ ವಿರಾಮ ಬಿದ್ದಿದ್ದು, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಮೊದಲ ಬಾರಿಗೆ ಡಿಸಿಎಂ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು.. ಕಳೆದ ಒಂದೂವರೆ ತಿಂಗಳಿಂದ ಕಾಂಗ್ರೆಸ್​ ಪಾಳಯದಲ್ಲಿ ಸಂಚಲನ ಸೃಷ್ಟಿಸಿದ್ದ ಸಿಎಂ ಬದಲಾವಣೆ ಚರ್ಚೆಗೆ ಖುದ್ದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​​ ತೆರೆ ಎಳೆದಿದ್ದಾರೆ.

ಬ್ರೇಕ್​ಫಾಸ್ಟ್​ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್​, ಇನ್ನು ರಾಜಕಾರಣ ಇಲ್ಲ. ಏನಿದ್ರೂ ಜನರ ಸೇವೆ, ಆಡಳಿತ ಅಷ್ಟೇ. ಡಿನ್ನರ್​ಗೆ ಸಿಎಂ ಕರೆಯುವ ದಿನಾಂಕ ನಿಮಗೆ ಹೇಳುತ್ತೇನೆ ಎಂದಿದ್ದಾರೆ.

DCM DK Shivakumar
Watch | ಸಿಎಂ-ಡಿಸಿಎಂ ಒಗ್ಗಟ್ಟಿನ ಮಂತ್ರ! ಇದೇನಿದು ಹೈಕಮಾಂಡ್ ತಂತ್ರ?

ನನ್ನ ಆಹ್ವಾನದ ಮೇರೆಗೆ ಮನೆಗೆ ಬಂದು ಉಪಾಹಾರ ಸೇವಿಸಿದ ಡಿಕೆ ಉಪಮುಖ್ಯಮಂತ್ರಿಗಳಿಗೆ ಧನ್ಯವಾದಗಳು. ಅವರೂ ಕೂಡ ನನ್ನನ್ನು ಮನೆಗೆ ಉಪಾಹಾರಕ್ಕಾಗಿ ಆಮಂತ್ರಣ ನೀಡಿದ್ದಾರೆ. ನಮ್ಮಿಬ್ಬರ ಒಗ್ಗಟ್ಟು ಗಟ್ಟಿಯಾಗಿದ್ದು, ಯಾರೂ ಕೂಡ ಈ ಒಗ್ಗಟ್ಟನ್ನು ಮುರಿಯಲಾರರು" ಎಂದು ಸಿದ್ದರಾಮಯ್ಯ ಹೇಳಿದರು.

ಬೆಳಗಿನ ಉಪಾಹಾರ ಸಭೆಯು ಸೌಜನ್ಯದ ಭೇಟಿಯಾಗಿದ್ದು, ಯಾವುದೇ ರಾಜಕೀಯ ವಿಚಾರ ಚರ್ಚೆ ಮಾಡಲಿಲ್ಲ. ಸಿದ್ದರಾಮಯ್ಯ ಮತ್ತು ನನ್ನ ನಡುವಿನ ಸಂಬಂಧ ಅತ್ಯಂತ ಗಟ್ಟಿಯಾಗಿದ್ದು, ಅದನ್ನು ಯಾರೂ ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದರು.

'ನಾವು ಯಾವುದೇ ಸಂದೇಶವನ್ನು ನೀಡಬೇಕಿದ್ದರೂ, ಮುಖ್ಯಮಂತ್ರಿ ಮತ್ತು ನಾನು ಇಬ್ಬರೂ ಅದನ್ನು ಎಲ್ಲಾ ಕಾಂಗ್ರೆಸ್ ಸದಸ್ಯರಿಗೆ ನೀಡಿದ್ದೇವೆ. ನಾವು ಅದಕ್ಕೆ ಬದ್ಧರಾಗಿದ್ದೇವೆ... ವಿಶೇಷವಾಗಿ ನೀರಾವರಿ ಮತ್ತು ನಗರಾಭಿವೃದ್ಧಿಯಲ್ಲಿ ಬಹಳಷ್ಟು ಸಮಸ್ಯೆಗಳಿವೆ. ನಾನು (ದೆಹಲಿಗೆ) ಹೋಗಬೇಕು. ನಾನು ಕೇಂದ್ರ ಮಂತ್ರಿಗಳೊಂದಿಗೆ ಸಮಯ ನಿಗದಿಪಡಿಸಬೇಕು. ಇದ್ದಕ್ಕಿದ್ದಂತೆ, ನಾನು ಹೋಗಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಮತ್ತು ನಾನು ಸರ್ವಪಕ್ಷ ಸಭೆ ನಡೆಸಲು ಬಯಸಿದ್ದೆವು. ಏಕೆಂದರೆ ರಾಜ್ಯದಲ್ಲಿ ಪ್ರಸ್ತುತ ಇರುವ ಈ ಕಬ್ಬು, ಮೆಕ್ಕೆಜೋಳ ಮತ್ತು ಇತರ ಕೆಲವು ವಿಷಯಗಳ ಕುರಿತು ಸರ್ವಪಕ್ಷ ನಿಯೋಗವನ್ನು ಕರೆದೊಯ್ಯಲು ನಾವು ಬಯಸುತ್ತೇವೆ.. ಎಂದು ಡಿಕೆ ಶಿವಕುಮಾರ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com