

ಕಠ್ಮಂಡು: ಹೊಸ ಸಂವಿಧಾನ ಅನುಷ್ಠಾನಕ್ಕೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ನೇಪಾಳ ಪ್ರಧಾನಿ ಸುಶೀಲ್ ಕುಮಾರ್ ಕೊಯಿರಾಲ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.
ಇದೇ ವೇಳೆ ಅವರು ಹೊಸ ಪ್ರಧಾನಿ ನೇಮಕಕ್ಕೆ ಸಂಬಂಧಿಸಿದ ಪ್ರಕ್ರಿಯೆಗೆ ಮರು ಚಾಲನೆ ನೀಡುವಂತೆ ರಾಷ್ಟ್ರಪತಿ ಅವರಿಗೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ. ನೇಪಾಳಿ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥ ಖಡಗ ಪ್ರಸಾದ್ ಶರ್ಮಾ ಓಲಿ ನೂತನ ಪ್ರಧಾನ ಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ಈ ನಡುವೆ, ಭಾರತದ ಜತೆಗೆ ಗುರುತಿಸಿ ಕೊಳ್ಳಬಯಸುವ ಮೆಧೇಸಿಸ್ ಜನಾಂಗದವರು ನೇಪಾಳದ ಹೊಸ ಸಂವಿಧಾನದ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ಮತ್ತಷ್ಟುತೀವ್ರಗೊಳಿಸಿದ್ದಾರೆ.
ನೇಪಾಳವನ್ನು ಹಿಂದೂರಾಷ್ಟ್ರ ಎಂದು ಘೋಷಿಸುವಂತೆ ಆಗ್ರಹಿಸುತ್ತಿರುವ ಮಧೇಸಿಸ್‍ಗಳು ಭಾರತ ಮತ್ತು ನೇಪಾಳ ಗಡಿಯನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. ಇದರಿಂದ ದೇಶಾದ್ಯಂತ ತೈಲ ಸಮಸ್ಯೆ ಬಿಗಡಾಯಿಸಿದ್ದು, ಇದಕ್ಕೆ ಭಾರತವನ್ನೇ ಹೊಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಠ್ಮಂಡುವಿನಲ್ಲಿ ಭಾರತ ವಿರೋಧಿ ಭಾವನೆ ಹೆಚ್ಚುತ್ತಿದೆ. ಭಾರತೀಯ ಟೀವಿಗಳ ಪ್ರಸಾರವನ್ನು ಕೇಬಲ್ ಟೀವಿಯವರು ಬಂದ್ ಮಾಡಿದ್ದಾರೆ.