ರಷ್ಯಾ-ಇರಾನ್ ತೈಲಕ್ಕೆ ಅಮೆರಿಕಾ ಕಟ್ಟುನಿಟ್ಟಿನ ನಿಲುವು: ವಿನಾಯಿತಿ ವಿಸ್ತರಣೆ ಇಲ್ಲ; ಅಮೆರಿಕಾ ಕಠಿಣ ನಿಲುವು

ಇರಾನ್ ವಿಚಾರದಲ್ಲಿ ಯಾವುದೇ ಸಡಿಲಿಕೆ ಇಲ್ಲ. ನಾವು ನಿರ್ಬಂಧ ಹೇರಿದ್ದೇವೆ, ಅಲ್ಲಿಂದ ಯಾವುದೇ ತೈಲ ಹೊರಬರುವುದಿಲ್ಲ. ಈಗಾಗಲೇ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೊಳಿಸಿದ್ದೇವೆ.
US President Donald Trump and Russian President Vladimir Putin
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
Updated on

ರಷ್ಯಾ ಮತ್ತು ಇರಾನ್‌ ತೈಲ ವ್ಯವಹಾರಗಳ ಮೇಲೆ ತನ್ನ ಕಟ್ಟುನಿಟ್ಟಿನ ನಿಲುವನ್ನು ಅಮೆರಿಕಾ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ರಷ್ಯಾ ಹಾಗೂ ಇರಾನ್ ತೈಲ ಖರೀದಿಗೆ ನೀಡಲಾಗಿದ್ದ ತಾತ್ಕಾಲಿಕ ವಿನಾಯಿತಿಗಳನ್ನು ಮುಂದುವರಿಸುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದೆ.

ಅಮೆರಿಕಾ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಮಾತನಾಡಿ, ರಷ್ಯಾದ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸಲು ನೀಡಿದ್ದ ವಿನಾಯಿತಿಯನ್ನು ನವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಇರಾನ್‌ ತೈಲಕ್ಕೂ ನೀಡಲಾಗಿದ್ದ ವಿನಾಯಿತಿಯನ್ನೂ ವಿಸ್ತರಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಇರಾನ್ ವಿಚಾರದಲ್ಲಿ ಯಾವುದೇ ಸಡಿಲಿಕೆ ಇಲ್ಲ. ನಾವು ನಿರ್ಬಂಧ ಹೇರಿದ್ದೇವೆ, ಅಲ್ಲಿಂದ ಯಾವುದೇ ತೈಲ ಹೊರಬರುವುದಿಲ್ಲ. ಈಗಾಗಲೇ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೊಳಿಸಿದ್ದೇವೆ ಎಂದು ಹೇಳಿದ್ದಾರೆ.

ಮುಂದಿನ ಎರಡು-ಮೂರು ದಿನಗಳಲ್ಲಿ ಇರಾನ್ ತೈಲ ಉತ್ಪಾದನೆಯನ್ನು ನಿಲ್ಲಿಸುವ ಪರಿಸ್ಥಿತಿ ಎದುರಿಸಬಹುದು, ಇದು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

US President Donald Trump and Russian President Vladimir Putin
ಪಾಕ್'ನಲ್ಲಿ 2ನೇ ಸುತ್ತಿನ ಸಂಧಾನ ಸಭೆ: ನೇರ ಮಾತುಕತೆಗೆ ಅಮೆರಿಕಾ ಒತ್ತಾಯ, ಇರಾನ್ ನಕಾರ

ಈ ಹಿಂದೆ, ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಹೆಚ್ಚು ಏರಿಕೆಯಾಗಿದ್ದ ಹಿನ್ನೆಲೆ, ಜಾಗತಿಕ ಮಾರುಕಟ್ಟೆಯನ್ನು ಸ್ಥಿರಗೊಳಿಸುವ ಉದ್ದೇಶದಿಂದ ಅಮೆರಿಕಾ ಮಾರ್ಚ್ ತಿಂಗಳಲ್ಲಿ ರಷ್ಯಾ ತೈಲಕ್ಕೆ ವಿನಾಯಿತಿ ನೀಡಿತ್ತು. ನಂತರ, ಬೆಸೆಂಟ್ ವೈಟ್ ಹೌಸ್‌ನಲ್ಲಿ ಈ ಸಡಿಲಿಕೆಯನ್ನು ಮುಂದುವರಿಸುವ ಯೋಜನೆ ಇಲ್ಲ ಎಂದು ಹೇಳಿದರೂ, ಖಜಾನೆ ಇಲಾಖೆ ಎರಡು ದಿನಗಳ ಬಳಿಕ ಅದನ್ನು ಮರುನವೀಕರಿಸಿತ್ತು.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬೆಸೆಂಟ್ ಅವರು, ತಮ್ಮ ಹಿಂದಿನ ನಿರ್ಧಾರದ ಹಿನ್ನೆಲೆಯನ್ನು ವಿವರಿಸಿದ್ದಾರೆ.

ಕಳೆದ ವಾರ ನಡೆದ ವಿಶ್ವ ಬ್ಯಾಂಕ್ ಮತ್ತು ಐಎಂಎಫ್ ಸಭೆಗಳ ಸಂದರ್ಭದಲ್ಲಿ 10ಕ್ಕೂ ಹೆಚ್ಚು ಬಡ ಹಾಗೂ ದುರ್ಬಲ ರಾಷ್ಟ್ರಗಳು ಸಹಾಯಕ್ಕಾಗಿ ತಮ್ಮನ್ನು ಸಂಪರ್ಕಿಸಿದ್ದವು. ಬಡ ಹಾಗೂ ದುರ್ಬಲ ರಾಷ್ಟ್ರಗಳ ಅಗತ್ಯಕ್ಕಾಗಿ ನಾವು ಆ ವೇಳೆ ಸಡಿಲಿಕೆ ನೀಡಿದ್ದೆವು. ಆದರೆ, ಮತ್ತೆ ಅದನ್ನು ಮುಂದುವರಿಸುವ ಸಾಧ್ಯತೆ ಕಡಿಮೆ. ಈಗಾಗಲೇ ಸಮುದ್ರದಲ್ಲಿದ್ದ ರಷ್ಯಾ ತೈಲವನ್ನು ಬಹುತೇಕ ಖರೀದಿ ಮಾಡಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com