ವಿಶ್ವದಲ್ಲಿ ಕೊರೋನಾ ರೌದ್ರನರ್ತನ: 3.42 ಲಕ್ಷ ಮಹಾಮಾರಿಗೆ ಬಲಿ, 54 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆವಿಶ್ವಾದ್ಯಂತ ಕೊರೊನಾ ವೈರಸ್ ತನ್ನ ರೌದ್ರನರ್ತನವನ್ನು ಮುಂದುವರೆಸಿದ್ದು, ಹೆಮ್ಮಾರಿ ವೈರಸ್'ಗೆ ಈವರೆಗೂ 3.42 ಲಕ್ಷ ಮಂದಿ ಬಲಿಯಾಗಿದ್ದಾರೆ. ಅಲ್ಲದೆ, ಸೋಂಕಿತರ ಸಂಖ್ಯೆ 54 ಲಕ್ಷಕ್ಕೆ ಏರಿಕೆಯಾಗಿದೆ.
ಅಮೆರಿಕಾದಲ್ಲಿ ಕೊರೋನಾ ಆರ್ಭಟ: ಒಂದೇ ದಿನ 1,127 ಮಂದಿ ಬಲಿ, ಸೋಂಕಿತರ ಸಂಖ್ಯೆ 16 ಲಕ್ಷಕ್ಕೆ ಏರಿಕೆಅಮೆರಿಕಾದಲ್ಲಿ ಕೊರೋನಾ ಆರ್ಭಟ ಎಂದಿನಂತೆ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 1,127 ಮಂದಿ ಬಲಿಯಾಗಿದ್ದಾರೆ. ಅಲ್ಲದೆ ಒಟ್ಟಾರೆ ಸಾವಿನ ಸಂಖ್ಯೆ 1 ಲಕ್ಷಕ್ಕೆ ತಲುಪುತ್ತಿದೆ.
ಲಡಾಖ್'ನಲ್ಲಿ ಭಾರತ-ಚೀನಾ ಸಂಘರ್ಷ: ಭಾರತೀಯ ಯೋಧರನ್ನು ವಶಕ್ಕೆ ಪಡೆದುಕೊಂಡಿರುವ ಚೀನಾಲಡಾಖ್'ನಲ್ಲಿ ಭಾರತ ಮತ್ತು ಚೀನಾ ಯೋಧರ ಗುದ್ದಾಟ ತೀವ್ರಗೊಂಡಿದ್ದು, ಕಳೆದ ವಾರ ಕೆಲ ಭಾರತೀಯ ಯೋಧರನ್ನು ಚೀನಾ ಸೇನೆ ಹಲವು ಗಂಟೆಗಳ ಕಾಲ ತನ್ನ ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ ಘಟನೆ ಇದೀಗ ಬೆಳಕಿಗೆ ಬಂದಿದೆ.
ಜನಾಂಗೀಯ ನಿಂದನೆ: ಅಪ್ರಾಪ್ತ ಬಾಲಕನ ಶಿಕ್ಷಣ ಮೊಟಕು, ಮೊಕದ್ದಮೆ ದಾಖಲುಅಮೆರಿಕದ ನ್ಯೂಜೆರ್ಸಿಯ ಸಿಖ್ ವಿದ್ಯಾರ್ಥಿಯೊಬ್ಬ ಜನಾಂಗೀಯ ನಿಂದನೆಗೆ ಒಳಗಾಗಿದ್ದಾನೆ ಮತ್ತು ದೀರ್ಘಕಾಲದ ಕಿರುಕುಳದಿಂದಾಗಿ ಶಾಲೆಯಿಂದ ಶಾಶ್ವತವಾಗಿ ಹೊರಗುಳಿಯಬೇಕಾಯಿತು ಎಂದು ಆರೋಪಿಸಿ ಶಿಕ್ಷಣ ಮಂಡಳಿಯ ವಿರುದ್ಧ ಮೊಕದ್ದಮೆ ಹೂಡಲಾಗಿದೆ.
ಲಾಕ್ ಡೌನ್ ವೇಳೆ 1200 ಕಿ.ಮೀ ಸೈಕಲ್ ತುಳಿದು ಜ್ಯೋತಿ ಸಾಹಸ: ಇವಾಂಕಾ ಟ್ರಂಪ್ ಮೆಚ್ಚುಗೆಗುರುಗ್ರಾಮದಲ್ಲಿ ಕೊರೋನಾ ಲಾಕ್ಡೌನ್ನಿಂದಾಗಿ ಸಿಕ್ಕಿಹಾಕಿಕೊಂಡಿದ್ದ ಅನಾರೋಗ್ಯ ತಂದೆಯನ್ನು ಸೈಕಲ್ ಮೇಲೆ ಕೂರಿಸಿಕೊಂಡು 1,200 ಕಿಲೋಮೀಟರ್ ಪ್ರಯಾಣ ಮಾಡಿದ್ದ ಜ್ಯೋತಿಕುಮಾರಿಗೆ ಹತ್ತು ಹಲವು ಕಡೆಯಿಂದ ಅಭಿನಂದನೆಗಳ ಸುರಿಮಳೆಯಾಗಿದೆ.
ಅನಿಲ್ ಅಂಬಾನಿಗೆ ಮತ್ತೆ ಹೊಡೆತ: ಚೀನಾದ ಬ್ಯಾಂಕುಗಳಿಗೆ 717 ಮಿಲಿಯನ್ ಡಾಲರ್ ಕಟ್ಟಿ ಎಂದ ಇಂಗ್ಲೆಂಡ್ ಕೋರ್ಟ್ಸಾಲ ಒಪ್ಪಂದದ ಪ್ರಕಾರ 21 ದಿನಗಳೊಳಗೆ ಚೀನಾದ ಮೂರು ಬ್ಯಾಂಕುಗಳಿಗೆ ಸುಮಾರು 717 ಮಿಲಿಯನ್ ಡಾಲರ್ ನೀಡುವಂತೆ ಲಂಡನ್ ನ ಕೋರ್ಟ್ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರಿಗೆ ಆದೇಶ ನೀಡಿದೆ.
ಪಾಕ್ ವಿಮಾನ ದುರಂತ: ಸಾವಿನ ಸಂಖ್ಯೆ 97ಕ್ಕೆ ಏರಿಕೆ, ಇಬ್ಬರು ಪ್ರಾಣಾಪಾಯದಿಂದ ಪಾರುಪಾಕಿಸ್ತಾನದ ಕರಾಚಿ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 97ಕ್ಕೆ ಏರಿಕೆಯಾಗಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಎಂದು ಪಾಕಿಸ್ತಾನದ ಸಿಂಧ್ ಆರೋಗ್ಯ ಇಲಾಖೆಯ ವಕ್ತಾರ ಮೀರನ್ ಯೂಸುಫ್ ಶನಿವಾರ ಖಚಿತಪಡಿಸಿದ್ದಾರೆ.
107 ಮಂದಿ ಪ್ರಯಾಣಿಕರಿದ್ದ ಪಾಕ್ ವಿಮಾನ ವಸತಿ ಪ್ರದೇಶದ ಮೇಲೆ ಪತನ, ಭೀಕರ ವಿಡಿಯೋ!ಲಾಹೋರ್ ನಿಂದ ಕರಾಚಿಗೆ ತೆರಳುತ್ತಿದ್ದ ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನ(ಪಿಐಎ) ವಸತಿ ಪ್ರದೇಶದಲ್ಲಿ ಪತನಗೊಂಡಿದ್ದು 107 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.
ಬಿಕಿನಿ ಧರಿಸಿ ಪುರುಷ ರೋಗಿಗಳಿಗೆ ಚಿಕಿತ್ಸೆ ನೀಡಿದ ಕೊರೋನಾ ವಾರಿಯರ್, ಮುಂದೆ ಏನಾಯ್ತು!ಮಹಾಮಾರಿ ಕೊರೋನಾ ವೈರಸ್ ಜಗತ್ತನ್ನೇ ನಡುಗಿಸುತ್ತಿದೆ. ಕೊರೋನಾ ತಡೆಯಲು ವೈದ್ಯಕೀಯ ಸಿಬ್ಬಂದಿ ಮತ್ತು ನರ್ಸ್ ಗಳು 24 ಗಂಟೆ ಕರ್ತವ್ಯದಲ್ಲಿ ನಿರತರಾಗಿದ್ದಾರೆ.
ಮಿಲಿಟರಿ ವೆಚ್ಚ 179 ಶತಕೋಟಿ ಡಾಲರ್ ಗೆ ಹೆಚ್ಚಿಸಿದ ಚೀನಾ: ಭಾರತಕ್ಕಿಂತ ಮೂರು ಪಟ್ಟು ಅಧಿಕ!ಕೊರೋನಾ ವೈರಸ್ ನಡುವೆಯೂ ಚೀನಾ ದೇಶ ರಕ್ಷಣಾ ಬಜೆಟ್ ಮೊತ್ತವನ್ನು ಪ್ರಸಕ್ತ ಸಾಲಿನಲ್ಲಿ ಹೆಚ್ಚಿಸಿದ್ದು ಇದೀಗ ಭಾರೀ ಸುದ್ದಿಯಾಗಿದೆ. ವಿಶ್ವದಲ್ಲಿ ಅಮೆರಿಕ ನಂತರ ಮಿಲಿಟರಿಗೆ ಅತ್ಯಂತ ಹೆಚ್ಚು ಹಣವನ್ನು ಖರ್ಚು ಮಾಡುವ ದೇಶ ಚೀನಾ.
ಕೊರೋನಾ 2ನೇ ಹಂತ ಎದುರಾದರೂ ಅಮೆರಿಕಾದಲ್ಲಿ ಲಾಕ್ ಡೌನ್ ಮಾಡಲ್ಲ: ಟ್ರಂಪ್ಮಾಹಾಮಾರಿ ಕೊರೋನಾ ವೈರಸ್ ಸೋಂಕಿನಿಂದ ಅಮೆರಿಕದಲ್ಲಿ ಅದಾಗಲೇ 96 ಸಾವಿರ ಮಂದಿ ಬಲಿಯಾಗಿದ್ದು ಸೋಂಕಿತರ ಸಂಖ್ಯೆ 16 ಲಕ್ಷ ದಾಟಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಲಾಕ್ ಡೌನ್ ಜಾರಿಗೊಳಿಸುವುದಿಲ್ಲ ಎಂದು ಹೇಳುತ್ತಿದ್ದಾರೆ.
ಪಾಕಿಸ್ತಾನದಲ್ಲಿ ಕೊರೋನಾದಿಂದ ಮೂರು ಪತ್ರಕರ್ತರು ಸಾವುಪಾಕಿಸ್ತಾನದಲ್ಲಿ ಮೂವರು ಪತ್ರಕರ್ತರು ಕೊರೋನಾ ವೈರಸ್ನಿಂದ ಸಾವನ್ನಪ್ಪಿದ್ದು, 156 ಮಾಧ್ಯಮ ವ್ಯಕ್ತಿಗಳು ಕೊವಿಡ್-19ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೂಕ್ತ ನೈರ್ಮಲ್ಯ ಇಲ್ಲದೆ ಕೋವಿಡ್-19 ಅಪಾಯದಲ್ಲಿ 2 ಬಿಲಿಯನ್ ಜನರು!ಕೋವಿಡ್-19 ವೈರಾಣು ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಈ ನಡುವೆ ಸಾಬೂನು ಹಾಗೂ ಶುದ್ಧ ನೀರಿನ ಲಭ್ಯತೆ ಇಲ್ಲದೇ 2 ಬಿಲಿಯನ್ ಜನರು ಕೋವಿಡ್-19 ರ ಅಪಾಯದಲ್ಲಿ ಸಿಲುಕಿದ್ದಾರೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ಅಮೆರಿಕಾದಲ್ಲಿ ಕೊರೋನಾ ಆರ್ಭಟ: ಒಂದೇ ದಿನ 1,531 ಮಂದಿ ಸಾವುಅಮೆರಿಕಾದಲ್ಲಿ ಕೊರೋನಾ ಆರ್ಭಟ ಏರುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 1,531 ಮಂದಿ ಬಲಿಯಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಕೊರೋನಾಘಾತ: ಜಗತ್ತಿನಾದ್ಯಂತ 24 ಗಂಟೆಗಳಲ್ಲಿ 1 ಲಕ್ಷ ಮಂದಿಗೆ ಸೋಂಕು!ವಿಶ್ವಾದ್ಯಂತ ಕೊರೋನಾ ಅಟ್ಟಹಾಸ ಮತ್ತಷ್ಟು ಹೆಚ್ಚಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಜಗತ್ತಿನಲ್ಲಿ 1.06 ಲಕ್ಷ ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.