ಸಿನಿಮಾ ಪೋಸ್ಟರ್ 
ಸಿನಿಮಾ ಸುದ್ದಿ

ಪ್ರೇಮಂ ಪೂಜ್ಯಂ ಚಿತ್ರಕಥೆ ಕೇಳಿ ಮೆಚ್ಚಿಕೊಂಡಿದ್ದ ರೆಬೆಲ್ ಸ್ಟಾರ್ ಅಂಬರೀಷ್

ನವೆಂಬರ್ 12 ಬಿಡುಗಡೆಯಾಗಲಿರುವ ಪ್ರೇಮಂ ಪೂಜ್ಯಂ ಸಿನಿಮಾ ಮೂಲಕ ವೃತ್ತಿಯಲ್ಲಿ ನ್ಯೂರೋಸರ್ಜನ್ ಆದ ಬಿ.ಎಸ್.ರಾಘವೇಂದ್ರ ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ. ಕಾಲೇಜಿನಲ್ಲಿ ಟಾಪರ್, ಗೋಲ್ಡ್ ಮೆಡಲಿಸ್ಟ್ ವಿದ್ಯಾರ್ಥಿಯಾಗಿದ್ದ ಅವರು ಸಿನಿಮಾರಂಗದಲ್ಲಿಯೂ ತಮ್ಮ ಛಾಪನ್ನು ಮೂಡಿಸುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದ್ದಾರೆ. 

ಬೆಂಗಳೂರು: ತಾವು ವೃತ್ತಿಯಲ್ಲಿ ವೈದ್ಯರಾಗದೇ ಇರುತ್ತಿದ್ದರೆ ಎಂದೋ ನಿರ್ದೇಶಕನಾಗುತ್ತಿದ್ದೆ ಎನ್ನುತ್ತಾರೆ ಬಿ.ಎಸ್.ರಾಘವೇಂದ್ರ. ಅವರು ವೃತ್ತಿಯಲ್ಲಿ ನ್ಯೂರೋ ಸರ್ಜನ್. ಅವರಿಗೆ ಚಿಕ್ಕಂದಿನಿಂದಲೂ ಸಿನಿಮಾಗಳ ಮೇಲಿನ ಆಸಕ್ತಿ ಇಂದು ಅವರನ್ನು ನಿರ್ದೇಶಕ ಸ್ಥಾನದಲ್ಲಿ ಕುಳ್ಳಿರಿಸಿದೆ. 

ನವೆಂಬರ್ 12 ಬಿಡುಗಡೆಯಾಗಲಿರುವ ಪ್ರೇಮಂ ಪೂಜ್ಯಂ ಸಿನಿಮಾ ಮೂಲಕ ಅವರು ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ. ಕಾಲೇಜಿನಲ್ಲಿ ಟಾಪರ್, ಗೋಲ್ಡ್ ಮೆಡಲಿಸ್ಟ್ ವಿದ್ಯಾರ್ಥಿಯಾಗಿದ್ದ ರಾಘವೇಂದ್ರ ಅವರು ಸಿನಿಮಾರಂಗದಲ್ಲಿಯೂ ತಮ್ಮ ಛಾಪನ್ನು ಮೂಡಿಸುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದ್ದಾರೆ. 

ವೈದ್ಯ ವೃತಿಯನ್ನೂ ಪ್ರೀತಿಸುವ ಅವರು ಇದೀಗ ತಮ್ಮ ಚಿಕ್ಕಂದಿನ ಕನಸನ್ನು ನನಸು ಮಾಡಿಕೊಳ್ಲಲು ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾ ಸ್ಕ್ರಿಪ್ಟನ್ನು ಅಂಬರೀಷ್ ಅವರಿಗೆ ಮೊದಲು ರಾಘವೇಂದ್ರ ಅವರು ಕೇಳಿಸಿದ್ದರು. 

ಚಿತ್ರದ ಸ್ಕ್ರಿಪ್ಟನ್ನು ಅವರು ಬಹಳ ಮೆಚ್ಚಿಕೊಂಡಿದ್ದರು. ಅಲ್ಲದೆ, ಸಿನಿಮಾ ತಯಾರಿ ಸಂದರ್ಭದಲ್ಲೂ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾಗಿ ರಾಘವೇಂದ್ರ ನೆನಪಿಸಿಕೊಳ್ಳುತ್ತಾರೆ. ಸಿನಿಮಾ ಕೆಲಸಗಳು ಶುರುವಾಗುವ ಮೊದಲೇ ಅಂಬರೀಷ್ ನಿಧನರಾಗಿದ್ದಾಗಿ ಬೇಸರ ವ್ಯಕ್ತಪಡಿಸುತ್ತಾರೆ ಅವರು. 

ಸಿನಿಮಾದಲ್ಲಿ ಪ್ರೇಮ್, ಐಂದ್ರಿತಾ ರೇ, ಬೃಂದಾ ಆಚಾರ್ಯ, ಮಾಸ್ಟರ್ ಆನಂದ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ತ್ಯಾಗರಾಜ ಎಂ.ಎಸ್ ಮತ್ತು ಚರಣ್ ರಾವ್ ಸಂಗೀತ ನೀಡಿದ್ದು ಅವರಿಬ್ಬರೂ ರಾಘವೇಂದ್ರ ಅವರಿಗೆ ಹಿಂದಿನಿಂದಲೂ ಸ್ನೇಹಿತರು. ಸಿನಿಮಾವನ್ನು ಡಾ. ರಕ್ಷಿತ್ ಕೆದಂಬಾಡಿ ಮತ್ತು ಡಾ. ರಾಜಕುಮಾರ್ ಜಾನಕಿರಾಮನ್ ನಿರ್ಮಿಸಿದ್ದಾರೆ. 

Related Article

ಅರ್ಜುನ್ ಸರ್ಜಾ- ರಾಧಿಕಾ 'ಒಪ್ಪಂದ': ಹೊಸ ಸಿನಿಮಾ ಹೆಸರು ಬದಲಾವಣೆ

ಬಿಸಿ ಪಾಟೀಲ್ ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶನದ ಹೊಸ ಚಿತ್ರಕ್ಕೆ ಯಶಸ್ ಸೂರ್ಯ ನಾಯಕ!

ಎಆರ್ ರೆಹಮಾನ್ ಪುತ್ರಿ ಖತಿಜಾ ಅನಿಮೇಟೆಡ್ ಸಂಗೀತ ವಿಡಿಯೋ ಜಾಗತಿಕ ಪ್ರಶಸ್ತಿಗೆ ಭಾಜನ

ಅಪ್ಪು ಕಳೆದುಕೊಂಡು ಸಾಕಷ್ಟು ನೊಂದಿದ್ದೇವೆ: ನಿಮ್ಮ ಕುಟುಂಬವನ್ನು ಒಂಟಿಯಾಗಿಸಬೇಡಿ: ಅಭಿಮಾನಿಗಳಿಗೆ ಅಶ್ವಿನಿ ಮನವಿ

ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಎಲ್ಲರೂ ಸಮಾಧಾನದಿಂದ ಬಂದು ಊಟ ಮಾಡಿಕೊಂಡು ಹೋಗಿ: ಶಿವಣ್ಣ, ರಾಘಣ್ಣ ಮನವಿ

ನಂದಮೂರಿ ಬಾಲಕೃಷ್ಣ ಜೊತೆ ತೆಲುಗು ಸಿನಿಮಾ: ಟಾಲಿವುಡ್ ಗೆ ದುನಿಯಾ ವಿಜಯ್ ಪಾದಾರ್ಪಣೆ

ಸಮಾಜ ಸೇವೆ ಮಾಡುವ ಉದಾತ್ತ ಕೆಲಸವನ್ನು ಬಿಟ್ಟು ಹೋಗಿದ್ದೀಯಾ, ಅದನ್ನು ಮುಂದುವರಿಸುವ ಶಕ್ತಿಯನ್ನು ನೀಡು: 'ಅಪ್ಪು' ನೆನೆದು ರಾಘಣ್ಣ ಭಾವುಕ ನುಡಿ

ಕಲಾವಿದನಾಗಿ ನಾನು ನೀರಿನಂತೆ ಇರಬೇಕು, ಪಾತ್ರ ಯಾವುದಾದರೂ ಅದಕ್ಕೆ ಒಗ್ಗಿಕೊಳ್ಳಬೇಕು: ಟಾಮ್ ಅಂಡ್ ಜೆರ್ರಿ ನಾಯಕ ನಿಶ್ಚಿತ್ ಕೊರೊಡಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT