ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

'ಭಜರಂಗಿ 2' ನಾಯಕಿ ಪೋಸ್ಟರ್ ಬಿಡುಗಡೆ; ಭಾವನಾ ಮೆನನ್ ಲುಕ್ ಗೆ ಫ್ಯಾನ್ಸ್ ಫಿದಾ!

ಅದ್ದೂರಿ ಸೆಟ್‌ಗಳು, ಬಹು ತಾರಾಗಣ, ಭರ್ಜರಿ ಆ್ಯಕ್ಷನ್ ದೃಶ್ಯಗಳಿಂದಾಗಿ ಟೀಸರ್‌ ಮೂಲಕವೇ 'ಭಜರಂಗಿ 2' ಎಲ್ಲರ ಮನ ಗೆದ್ದಿತು. 'ಕೆಜಿಎಫ್‌' ರೀತಿಯೇ ಎಲ್ಲ ಭಾಷೆಗೂ ಅನ್ವಯ ಆಗುವಂತಹ ಗುಣಮಟ್ಟದಲ್ಲಿ 'ಭಜರಂಗಿ 2' ಸಿದ್ಧವಾಗಿದೆ ಎಂಬುದಕ್ಕೆ ಟೀಸರ್‌ ಸಾಕ್ಷಿ ನೀಡಿದೆ.

ಸಿನಿಮಾ ಸ್ಟಿಲ್
Harshavardhan M
Updated On : 9 Oct 2021, 1:03 pm

ಬೆಂಗಳೂರು: ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ 2' ಸಿನಿಮಾದ ನಾಯಕಿಯ ಪೋಸ್ಟರ್ ಬಿಡುಗಡೆಗೊಂಡಿದ್ದು, ಭಾವನಾ ಮೆನನ್ ಸಖತ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

ಮೈಕ್ರೊಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಕೂ ವೇದಿಕೆಯಲ್ಲಿ ಚಿನಿಮಿನಿಕಿ-ದಿ ಲೇಡಿ ಫೈರ್' ಎಂಬ ಅಡಿಬರಹದಲ್ಲಿ ನಾಯಕಿ ಭಾವನಾ ಮೆನನ್ ನ ಪೋಸ್ಟರ್ ಅನ್ನು  ಸಿನೆಮಾ ತಂಡ ಹಂಚಿಕೊಂಡಿದೆ.

ಶಿವಣ್ಣನ ಜನ್ಮದಿನದಂದು,  ನಿರ್ದೇಶಕ ಎ. ಹರ್ಷ ಅವರ ಬತ್ತಳಿಕೆಯಿಂದ ಮೂಡಿ ಬಂದಿರುವ ಈ ಸಿನಿಮಾದ  ಟೀಸರ್ ಬಿಡುಗಡೆಗೊಂಡಿತ್ತು. ದೊಡ್ಡ ಕ್ಯಾನ್ವಾಸ್‌ನಲ್ಲಿ 'ಭಜರಂಗಿ 2' ಸಿದ್ಧವಾಗಿದ್ದು, ಶಿವರಾಜ್‌ಕುಮಾರ್‌ ಮತ್ತು ಎ. ಹರ್ಷ ಕಾಂಬಿನೇಷನ್‌ನಲ್ಲಿ ಈ ಹಿಂದೆ ಮೂಡಿಬಂದಿದ್ದ 'ಭಜರಂಗಿ' ಚಿತ್ರದ ಸೀಕ್ವೆಲ್‌ ಆಗಿ ಈ ಸಿನಿಮಾ ಸಿದ್ಧವಾಗಿದೆ. 

Advertisement

Advertisement

ಅದ್ದೂರಿ ಸೆಟ್‌ಗಳು, ಬಹು ತಾರಾಗಣ, ಭರ್ಜರಿ ಆ್ಯಕ್ಷನ್ ದೃಶ್ಯಗಳಿಂದಾಗಿ ಟೀಸರ್‌ ಮೂಲಕವೇ 'ಭಜರಂಗಿ 2' ಎಲ್ಲರ ಮನ ಗೆದ್ದಿತು. 'ಕೆಜಿಎಫ್‌' ರೀತಿಯೇ ಎಲ್ಲ ಭಾಷೆಗೂ ಅನ್ವಯ ಆಗುವಂತಹ ಗುಣಮಟ್ಟದಲ್ಲಿ 'ಭಜರಂಗಿ 2' ಸಿದ್ಧವಾಗಿದೆ ಎಂಬುದಕ್ಕೆ ಟೀಸರ್‌ ಸಾಕ್ಷಿ  ನೀಡಿತ್ತು. 

'ಭಜರಂಗಿ 2' ಚಿತ್ರಕ್ಕೆ ಜಯಣ್ಣ-ಭೋಗೇಂದ್ರ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ 'ಭಜರಂಗಿ 2' ಚಿತ್ರದಲ್ಲಿ ಶ್ರುತಿ, ಸೌರವ್ ಲೋಕೇಶ್, ಶಿವರಾಜ್.ಕೆ.ಆರ್.ಪೇಟೆ ಸೇರಿದಂತೆ ದೊಡ್ಡ ತಾರಾಬಳಗವಿದೆ.

Related Article

ಕಿಚ್ಚ ಸುದೀಪ್ ಕೋಟಿಗೊಬ್ಬ3 ಸಿನಿಮಾ ರಾಜ್ಯಾದ್ಯಂತ 1,000 ಸ್ಕ್ರೀನ್ ಗಳಲ್ಲಿ ಪ್ರದರ್ಶನ: ಅ.11ರಿಂದ ಅಡ್ವಾನ್ಸ್ಡ್ ಟಿಕೆಟ್ ಬುಕಿಂಗ್

'ಟಗರು' ಯಶಸ್ಸಿನ ನಂತರ ಹೊಸ ಸಿನಿಮಾಗಾಗಿ ಸೂರಿ-ಶಿವರಾಜ್ ಕುಮಾರ್ ಮಾತುಕತೆ!

ಮಿಮಿಕ್ರಿ ದಯಾನಂದ್ ಚೊಚ್ಚಲ ನಿರ್ದೇಶನದ 'ಅನಿರೀಕ್ಷಿತ' ಚಿತ್ರಕ್ಕೆ ಪ್ರಶಸ್ತಿಯ ಗರಿ!

ಡಾಲಿ ಧನಂಜಯ್ ನಟನೆಯ ರತ್ನನ್ ಪ್ರಪಂಚ, ಅಕ್ಟೋಬರ್ 22 ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

ಲಿವಿನ್ ರಿಲೇಶನ್ ಶಿಪ್ ಗಳನ್ನು ಮದುವೆಯಂತೆಯೇ ನೋಡಬೇಕು: ಚಂದನವನಕ್ಕೆ ಗಂಧದಗುಡಿ ನಾಯಕನ ಮೊಮ್ಮಗಳು ಭರ್ಜರಿ ಎಂಟ್ರಿ

'ನೀರ್ ದೋಸೆ' ಹುಯ್ದಿದ್ದ ನಿರ್ದೇಶಕ ವಿಜಯಪ್ರಸಾದ್ 'ಪರಿಮಳ ಲಾಡ್ಜ್' ಸಿನಿಮಾಗೆ ಯೋಗಿ ನಾಯಕ

ರಾಜ್ ಬಿ. ಶೆಟ್ಟಿ 'ಗರುಡ ಗಮನ ವೃಷಭ ವಾಹನ' ಸಿನಿಮಾ ರಕ್ಷಿತ್ ಶೆಟ್ಟಿ ಪರಂವಾಹ್ ಸ್ಟುಡಿಯೋಸ್ ಬ್ಯಾನರ್ ಅಡಿ ಬಿಡುಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement