ರಾಜ್ಯ

ಬೆಂಗಳೂರಿನ ಪಾರು ಗೌಡ ನ್ಯಾಷನಲ್ ಮೋಜ್ ಸೂಪರ್ ಸ್ಟಾರ್ ಹಂಟ್ ವಿಜೇತೆ: 6.5 ಲಕ್ಷ ಸ್ಪರ್ಧಿಗಳು

Harshavardhan M

ಬೆಂಗಳೂರು: ಭಾರತದ ಜನಪ್ರಿಯ ವೀಡಿಯೋ ಶೇರಿಂಗ್ ಆ್ಯಪ್ ಮೋಜ್ ನ ಎರಡು ತಿಂಗಳ ಸುದೀರ್ಘವಾದ ಡಿಜಿಟಲ್ ಪ್ರತಿಭಾನ್ವೇಷಣೆ ಮುಕ್ತಾಯಗೊಂಡಿದ್ದು, ನಟನಾ ವಿಭಾಗದಲ್ಲಿ ಬೆಂಗಳೂರಿನ ಪಾರು ಗೌಡ ಮೋಜ್ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಪಾರು ರೂ 5 ಲಕ್ಷ ನಗದು ಬಹುಮಾನ ಕೂಡಾ ಪಡೆದಿದ್ದಾರೆ.

ದೇಶಾದ್ಯಂತ ಅದ್ಭುತ ಪ್ರತಿಭೆಗಳನ್ನು ಅನ್ವೇಷಿಸುವ ಗುರಿಯೊಂದಿಗೆ #MojSuperstarHunt ವೇದಿಕೆಯಲ್ಲಿ ತಮ್ಮ ಪ್ರತಿಭೆ, ಕೌಶಲ್ಯಗಳನ್ನು ಪ್ರದರ್ಶಿಸಲು ದೇಶಾದ್ಯಂತ ಸ್ಪರ್ಧಿಗಳನ್ನು ಆಹ್ವಾನಿಸಲಾಗಿತ್ತು. ದೇಶದ ಪ್ರಸಿದ್ಧ ನೃತ್ಯಸಂಯೋಜಕ-ನಿರ್ದೇಶಕರಾದ ರೆಮೋ ಡಿಸೋಜಾ ಮತ್ತು ಮೋಜ್ ನ ಜನಪ್ರಿಯ ಪ್ರಭಾವಿ ವ್ಯಕ್ತಿ ಆವೇಜ್ ದರ್ಬಾರ್ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಕರ್ನಾಟಕದಲ್ಲಿ ಶಾರ್ಟ್ ವಿಡಿಯೋಗಳನ್ನು ಮಾಡಿ ಜನಪ್ರಿಯತೆ ಗಳಿಸಿರುವ ಪ್ರತಿಭಾನ್ವಿತರನ್ನು ಮೋಜ್ ಸಂಸ್ಥೆ ಇತ್ತೀಚಿಗೆ ಒಂದೆಡೆ ಸೇರಿಸಿ ವರ್ಚುವಲ್ ಕಾರ್ಯಕ್ರಮ 'ಮೋಜ್ ಟಾಕ್ಸ್' ಆಯೋಜಿಸಿತ್ತು. ಟ್ಯಾಲೆಂಟೆಡ್ ಕಲಾವಿದ, ಬಿಂದು ಗೌಡ, ಆಶಿಕಾ ಗೌಡ, ಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ, ಅಲ್ಲು ರಘು, ಅರುಣ್ ಆರಾಧ್ಯ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 300ಕ್ಕೂ ಹೆಚ್ಚು ಮಂದಿ ಇದರಲ್ಲಿ ಪಾಲ್ಗೊಂಡಿದ್ದರು ಎಂಡು ಸಂಸ್ಥೆ ತಿಳಿಸಿದೆ. ಕಂಟೆಂಟ್ ಕ್ರಿಯೇಟ್ ಮಾಡುವುದು, ಪ್ರವಾಸ, ಜೀವನ ಹೀಗೆ ವಿವಿಧ ವಿಷಯಗಳ ಕುರಿತು ಅಲ್ಲಿ ಮಾತುಕತೆ ನಡೆದಿತ್ತು.

SCROLL FOR NEXT