ಈಶ್ವರ್ ಮಲ್ಪೆ 
ವಿಶೇಷ

ಅಪಾಯ ಲೆಕ್ಕಿಸದೆ ಮುಳುಗುತ್ತಿರುವವರ ರಕ್ಷಿಸುವ ಆಪತ್ಬಾಂಧವ, ಮುಳುಗುತಜ್ಞ ಉಡುಪಿಯ ಆಕ್ವಾಮ್ಯಾನ್ ಈಶ್ವರ್ ಮಲ್ಪೆ

ಕಳೆದ 20 ವರ್ಷಗಳಿಂದ ಇದುವರೆಗೂ 20 ಮಂದಿಯನ್ನು ಸಮುದ್ರದಿಂದ ಮೇಲೆತ್ತಿ ಬದುಕಿಸಿದ್ದಾರೆ. ಅಲ್ಲದೆ 200ಕ್ಕೂ ಹೆಚ್ಚು ಮೃತದೇಹಗಳನ್ನು ಸಮುದ್ರದಿಂದ ಮೇಲೆತ್ತಿದ್ದಾರೆ. 

ಉಡುಪಿ: ಆಕ್ವಾಮ್ಯಾನ್ ಎನ್ನುವ ಹಾಲಿವುಡ್ ಸಿನಿಮಾ ಕೆಲ ವರ್ಷಗಳ ಹಿಂದೆ ಬಿಡುಗಡೆ ಕಂಡು ಯಶಸ್ವಿಯಾಗಿತ್ತು. ಸಮುದ್ರಕನ್ಯೆಯ ಮಗನಾಗಿ ಅನೇಕ ಅತಿಮಾನುಷ ಶಕ್ತಿಗಳನ್ನು ಆತ ಹೊಂದಿರುತ್ತಾನೆ. 

ಅದೇ ರೀತಿ ಮನುಷ್ಯ ಸಹಜ ಸಾಮರ್ಥ್ಯದಿಂದಲೇ ಆಕ್ವಾ ಮ್ಯಾನ್ ಎನ್ನಿಸಿಕೊಂಡವರು ಉಡುಪಿಯ ಮುಳುಗುತಜ್ಞ ಈಶ್ವರ್ ಮಲ್ಪೆ. ಕಡಲ ತೀರದ ನಗರವಾದ ಉಡುಪಿಯಲ್ಲಿ ಇದುವರೆಗೂ 20 ಮಂದಿಯನ್ನು ಸಮುದ್ರದಿಂದ ಮೇಲೆತ್ತಿ ಬದುಕಿಸಿದ್ದಾರೆ. ಅಲ್ಲದೆ 200ಕ್ಕೂ ಹೆಚ್ಚು ಮೃತದೇಹಗಳನ್ನು ಸಮುದ್ರದಿಂದ ಮೇಲೆತ್ತಿದ್ದಾರೆ. 

45ರ ಹರೆಯದ ಈಶ್ವರ್ ಮಲ್ಪೆ ಅವರು ಪರಿಶ್ರಮ ಮತ್ತು ಕಠಿಣ ಅಭ್ಯಾಸದಿಂದ ಮುಳುಗುತಜ್ಞರಾದವರು. ದಿನದ ಯಾವುದೇ ಹೊತ್ತಿನಲ್ಲಿಯೂ ಅವರಿಗೆ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿಕೊಂಡವರ ರಕ್ಷಣೆಗೆ ಕರೆ ಬರುತ್ತದೆ. ತಕ್ಷಣವೇ ಅವರು ಹೊರಟು ನಿಲ್ಲುತ್ತಾರೆ. 

ಇಷ್ಟುದಿನ ಆಕ್ಸಿಜನ್ ಸಿಲಿಂಡರ್ ಸಹಾಯವಿಲ್ಲದೆ ಅವರು ಮುಳುಗು ಹಾಕುತ್ತಿದ್ದರು. ಆದರೆ ಕೆಲಸಮಯದಿಂದ ಆಕ್ಸಿಜನ್ ಸಿಲಿಂಡರ್ ಸೂಟ್ ಧರಿಸುತ್ತಿದ್ದಾರೆ. ಜೀವರಕ್ಷಕ ದಳ, ಪೊಲೀಸರು ಕೂಡಾ ಇವರ ಸಹಾಯ ಕೋರಿ ಕರೆ ಮಾಡುತ್ತಾರೆ.

ಯಥೇಚ್ಛ ಮಳೆ ಬೀಳುವ ಪ್ರದೇಶವಾಗಿರುವುದರಿಂದ ಎಷ್ಟೊಂದು ವೇಳೆ ನದಿ, ತೊರೆಗಳು ಮೈದಂಬಿ ಹರಿಯುತ್ತಿರುವ ಸಮಯದಲ್ಲಿ ರಕ್ಷಣಾ ಕಾರ್ಯ ತುಂಬಾ ಸವಾಲಾಗಿ ಪರಿಣಮಿಸುತ್ತದೆ ಎಂದು ಈಶ್ವರ್ ಹೇಳುತ್ತಾರೆ. ಅಂಥಾ ಸಮಯದಲ್ಲಿ ಅಪಾಯಕ್ಕೆ ಸಿಲುಕಿಕೊಂಡವರ ರಕ್ಷಣೆಯ ಜೊತೆಗೆ ತಮ್ಮ ರಕ್ಷಣೆಯ ಸವಾಲು ಕೂಡಾ ಇರುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಕಳೆದ 20 ವರ್ಷಗಳಿಂದ ಹಲವು ಅಪಾಯಕಾರಿ ಸನ್ನಿವೇಶಗಳಲ್ಲಿಯೂ ಆವರು ತಮ್ಮ ಪ್ರಾಣ ಲೆಕ್ಕಿಸದೆ ಹಲವರ ಜೀವ ಉಳಿಸಿದ್ದಾರೆ. ಇಂದು ಸಮುದ್ರ ಹಾಗೂ ನದಿಯಲ್ಲಿ ಶವ ಪತ್ತೆಗಾಗಿ ಬಹಳ ದೂರದ ಸ್ಥಳಗಳಿಂದಲೂ ಬುಲಾವ್ ಬರುತ್ತಿದೆ. 

ಅವರ ಬಳಿ 2 ಆಕ್ಸಿಜನ್ ಸಿಲಿಂಡರ್ ಇದೆ. ನೀರಿಗೆ ಇಳಿಯುವುದಕ್ಕೆ ಅವರಿಗೆ ಮುಖ್ಯವಾಗಿ ಬೇಕಾದ ಸಲಕರಣೆ ಎಂದರೆ ಅದುವೇ. ಅವನ್ನು ಮಲ್ಪೆ ಯಾಂತ್ರಿಕ ಸೊಸೈಟಿ ಅವರು ದೇಣಿಗೆಯಾಗಿ ನೀಡಿದ್ದಾರೆ ಎಂದು ಈಶ್ವರ್ ಸ್ಮರಿಸಿಕೊಳ್ಳುತ್ತಾರೆ. 

ಈಶ್ವರ್ ಆಕ್ಸಿಜನ್ ರೀಫಿಲ್ಲಿಂಗ್ ಕಿಟ್ ಗಾಗಿ ಎದುರು ನೋಡುತ್ತಿದ್ದಾರೆ. ಅದೊಂದು ಇದ್ದುಬಿಟ್ತರೆ ಯಾವುದೇ ತೊಡಕಿಲ್ಲದೆ ಈಶ್ವರ್ ತಮ್ಮ ಸಮಾಜ ಸೇವೆ ಮುಂದುವರಿಸಬಹುದು. ಯಾರಾದರೂ ಸಹೃದಯರು ದೇಣಿಗೆ ನೀಡುವರೇ ಎಂದು ಅವರು ಕಾದಿದ್ದಾರೆ. 

ಈಶ್ವರ್ ಅವರು ಮಲ್ಪೆ ಬೀಚಿನಲ್ಲಿ ತಾಯಿ, ಪತ್ನಿ ಹಾಗೂ ಮೂವರು ಮಕ್ಕಳೊಡನೆ ವಾಸವಿದ್ದಾರೆ. ಮನೆಯಲ್ಲಿ ಅರ್ಥಿಕ ತೊಂದರೆ ಇದ್ದರೂ ತಾವು ಯಾವತ್ತೂ ಹಣಕ್ಕಾಗಿ ರಕ್ಷಣೆ ಮಾಡಿದ್ದಿಲ್ಲ ಎಂಬ ಆತ್ಮವಿಶ್ವಾಸದ ನುಡಿಗಳನ್ನಾಡುತ್ತಾರೆ ಈಶ್ವರ್ ಮಲ್ಪೆ.

Related Article

1934ರಲ್ಲಿ ಮಹಾತ್ಮಾ ಗಾಂಧಿಯವರನ್ನು ದಾವಣಗೆರೆಗೆ ಕರೆತರುವಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಪಾತ್ರ ಮಹತ್ವದ್ದು

ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯಿಂದ ಹಲವು ಮಂದಿಗೆ ಜೀವದಾನ: ಅಂತಿಮ ಕ್ಷಣದ ಆಪದ್ಬಾಂಧವ

14 ವರ್ಷಗಳ ಹಿಂದೆ ಕಾಣೆಯಾದ ಹುಡುಗಿ ಮನೆಗೆ ವಾಪಸ್: ಜಾರ್ಖಂಡ್ ಸರ್ಕಾರದ ಕಾರ್ಯಕ್ಕೆ ಶ್ಲಾಘನೆ

ವರ್ಲ್ಡ್ ಮ್ಯೂಸಿಕ್ ಮಾಂತ್ರಿಕ, ಗ್ರ್ಯಾಮಿ ವಿಜೇತ ಬೆಂಗಳೂರು ಹುಡುಗ ರಿಕಿ ಕೇಜ್ ಉಭಯ ಕುಶಲೋಪರಿ ಸಾಂಪ್ರತ: ಸಂದರ್ಶನ

60 ಸೆಕೆಂಡುಗಳಲ್ಲಿ 426 ಪಂಚು ಕೊಟ್ಟು ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ ಭಾರತದ ಪಂಚ್ ವೀರ

ಜಿಂಕೆಗಳಿಗಾಗಿ 45 ಎಕರೆ ಭೂಮಿ ಮೀಸಲಿಟ್ಟ ರೈತ: ಕಳೆದ 20 ವರ್ಷಗಳಲ್ಲಿ ಜಿಂಕೆಗಳ ಸಂಖ್ಯೆ ಮೂರು ಪಟ್ಟು ಹೆಚ್ಚಳ

ಡಯೆಟ್, ಸೆಕ್ಸ್, ಕೊಕೇನ್: ಪ್ರಖ್ಯಾತ ಇನ್ನರ್ ವೇರ್ ಸಂಸ್ಥೆಯ ಸೂಪರ್ ಮಾಡೆಲ್ ಬಿಚ್ಚಿಟ್ಟ ರಹಸ್ಯ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT