ವಿಶೇಷ

ಸಸ್ಯಗಳನ್ನು ಬಳಸಿ ಕರೆಂಟ್ ಉತ್ಪಾದನೆ: ಭಾರತದ ಐಐಟಿ ಸಂಶೋಧಕರ ವಿನೂತನ ಪ್ರಯತ್ನ

Harshavardhan M

ನವದೆಹಲಿ: ಜೋಧ್ ಪುರದ ಐಐಟಿ ಸಂಶೋಧಕರು ಸಸ್ಯಜನ್ಯ ಮೈಕ್ರೊಬಯಲ್ ಫ್ಯುಯೆಲ್ ಸೆಲ್ಸ್ ಮತ್ತು ತ್ಯಾಜ್ಯ ನೀರನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡಬಹುದು ಎಂದು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟಿದ್ದಾರೆ. 

ಸಂಶೋಧಕರ ಪ್ರಯೋಗವನ್ನು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಪ್ರಾಯೋಜಿಸಿತ್ತು. ಸಂಶೋಧಕರ ತಂಡದಲ್ಲಿ ಮೂರು ಮಂದಿಯಿದ್ದು, ತ್ಯಾಜ್ಯದ ನೀರನ್ನು ಮರುಬಳಕೆ ಮಾಡುವ ವ್ಯವಸ್ಥೆ ರೂಪಿಸುವುದು ಯಾವುದೇ ನಾಗರಿಕ ಸಮಾಜದ ಲಕ್ಷಣ. 

ತ್ಯಾಜ್ಯದ ನೀರಿನಲ್ಲಿ ಲೇಟೆಂಟ್ ಎನರ್ಜಿ ಹೆಚ್ಚಾಗಿರುತ್ತದೆ. ಇದನ್ನು ಬಳಸಿ ವಿದ್ಯುತ್ ತಯಾರಿಸುವ ಬಗ್ಗೆ ಜಗತ್ತಿನ ವಿವಿಧ ಸಂಶೋಧಕರು ಪ್ರಯೋಗ ನಡೆಸಿದ್ದಾರೆ.

ಮೈಕ್ರೋಬ್ಸ್ ಬಳಸಿ ವಿದ್ಯುತ್ ತಯಾರಿಸುವ ಐಡಿಯಾ 1911ರಲ್ಲೇ ಮೈಕೆಲ್ ಪಾಟರ್ ಎನ್ನುವ ವಿಜ್ಞಾನಿ ಮಂಡಿಸಿದ್ದರು. ಆದರೆ ಭಾರತದ ಸಂಶೋಧಕರು ಸಸ್ಯಜನ್ಯ ಫ್ಯುಯೆಲ್ ಸೆಲ್ ಗಳನ್ನು ಬಳಸಿ ಈ ಪ್ರಯೋಗ ಮಾಡಿದ್ದಾರೆ. 

SCROLL FOR NEXT