ಟೋನಿ ಬ್ಲೇರ್, ಪುತಿನ್ ಮತ್ತು ಜೋರ್ಡಾನ್ ರಾಜ ಅಬ್ದುಲ್ಲ 
ವಿದೇಶ

ಪ್ಯಾಂಡೋರಾ ಪೇಪರ್ಸ್: ಜಗತ್ತಿನ ಪ್ರಭಾವಿ ವ್ಯಕ್ತಿಗಳ ವಿದೇಶಿ ಹೂಡಿಕೆಗಳ ರಹಸ್ಯ ದಾಖಲೆಗಳು ಸೋರಿಕೆ

117 ದೇಶಗಳ 600 ಪತ್ರಕರ್ತದ ಸಹಯೋಗದಲ್ಲಿ ನಡೆದ ಈ ಕಾರ್ಯಚರಣೆಗೆ ಪ್ಯಾಂಡೋರಾ ಪೇಪರ್ಸ್ ಎಂದು ಹೆಸರಿಡಲಾಗಿದೆ. ಭಾರತದ ಕ್ರಿಕೆಟ್ ಸೂಪರ್ ಸ್ಟಾರ್ ಸಚಿನ್ ತೆಂಡೂಲ್ಕರ್, ಪಾಪ್ ಸ್ಟಾರ್ ಶಕೀರಾ ಕೇಳಿಬಂದಿರುವುದು ಅಚ್ಚರಿ ಮೂಡಿಸಿದೆ. 

ನವದೆಹಲಿ: 91 ದೇಶದ 35 ಮಂದಿ ಪ್ರಭಾವಿ ವಿಶ್ವ ನಾಯಕರು, 330 ರಾಜಕಾರಣಿಗಳು ಮತ್ತು ಸಾರ್ವಜನಿಕ ಅಧಿಕಾರಿಗಳ ರಹಸ್ಯ ಸಂಪತ್ತಿನ ಮಾಹಿತಿಯನ್ನೊಳಗೊಂಡ ಲಕ್ಷಾಂತರ ದಾಖಲೆಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿವೆ. ಪ್ರಭಾವಿ ವ್ಯಕ್ತಿಗಳು ವಿದೇಶದಲ್ಲಿ ನಡೆಸಿರುವ ಹೂಡಿಕೆ ಮಾಹಿತಿಯನ್ನು ಈ ದಾಖಲೆಗಳು ಒಳಗೊಂಡಿವೆ. ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಮಂಡಳಿ ಈ ತನಿಖೆಯನ್ನು ನಡೆಸಿತ್ತು.

ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್, ರಷ್ಯಾ ಅಧ್ಯಕ್ಷ ಪುತಿನ್, ಜೋರ್ಡಾನ್ ರಾಜ ಸೇರಿದಂತೆ ಭಾರತ ಪಾಕಿಸ್ತಾನದ ರಾಜಕಾರಣಿಗಳು, ಸೆಲಬ್ರಿಟಿಗಳ ದಾಖಲೆಯೂ ಇದರಲ್ಲಿದೆ ಎನ್ನಲಾಗುತ್ತಿದೆ. 117 ದೇಶಗಳ 600 ಪತ್ರಕರ್ತದ ಸಹಯೋಗದಲ್ಲಿ ನಡೆದ ಈ ಕಾರ್ಯಚರಣೆಗೆ ಪ್ಯಾಂಡೋರಾ ಪೇಪರ್ಸ್ ಎಂದು ಹೆಸರಿಡಲಾಗಿದೆ. 

ಬಿಬಿಸಿ, ಗಾರ್ಡಿಯನ್ ಸೇರಿದಂತೆ ಭಾರತದ ಮಾಧ್ಯಮ ಸಂಸ್ಥೆಗಳೂ ಈ ತನಿಖೆಯಲ್ಲಿ ಪಾಲ್ಗೊಂಡಿವೆ. ಭಾರತದ ಕ್ರಿಕೆಟ್ ಸೂಪರ್ ಸ್ಟಾರ್ ಸಚಿನ್ ತೆಂಡೂಲ್ಕರ್, ಪಾಪ್ ಸ್ಟಾರ್ ಶಕೀರಾ ಕೇಳಿಬಂದಿರುವುದು ಅಚ್ಚರಿ ಮೂಡಿಸಿದೆ. 

ಸಚಿನ್ ತೆಂಡೂಲ್ಕರ್ ಅಟಾರ್ನಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಸಚಿನ್ ಅವರು ವಿದೇಶದಲ್ಲಿ ನಡೆಸಿರುವ ಹೂಡಿಕೆಗಳು ಕಾನೂನುಬದ್ಧವಾಗಿರುವುದಾಗಿ ತಿಳಿಸಿದ್ದಾರೆ. ಭಾರತದ 6 ಮತ್ತು ಪಾಕಿಸ್ತಾನದ 7 ಮಂದಿ ಪ್ರಭಾವಿ ರಾಜಕಾರಣಿಗಳ ವಿದೇಶಿ ಹೂಡಿಕೆ ಮಾಹಿತಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 

ಯುಕ್ರೇನ್, ಕೆನ್ಯಾ, ಈಕ್ವೆಡಾರ್ ಅಧ್ಯಕ್ಷ, ಜೆಕ್ ಪ್ರಧಾನಿ ಸೇರಿದಂತೆ ರಷ್ಯಾದ 130 ಮಂದಿ ಶತಕೋಟ್ಯಧಿಪತಿಗಳು, ಅಮೆರಿಕದ ಶತಕೋಟ್ಯಧಿಪತಿಗಳ ವ್ಯವಹಾರಗಳನ್ನು ಈ ದಾಖಲೆಗಳಲ್ಲಿ ಬಹಿರಂಗಪಡಿಸಲಾಗಿದೆ. 

2016ರಲ್ಲಿ ಇದೇ ತನಿಖಾ ಪತ್ರಕರ್ತರ ಅಂತಾರಾಷ್ಟ್ರೀಯ ಮಂಡಳಿ ಪನಾಮ ಪೇಪರ್ಸ್ ಎನ್ನುವ ಪ್ರಾಜೆಕ್ಟ್ ಅಡಿ ರಹಸ್ಯ ದಾಖಲೆಗಳನ್ನು ಬಿಡುಗಡೆಗೊಳಿಸಿತ್ತು. ಅಮಿತಾಭ್ ಬಚ್ಚನ್ ಸೇರಿದಂತೆ ವಿಶ್ವದ ಹಲವು ನಾಯಕರ ಹೂಡಿಕೆ ದಾಖಲೆಗಳನ್ನು ಆ ಸಮಯದಲ್ಲಿ ಬಹಿರಂಗಗೊಳಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

19 ವರ್ಷಗಳ ಹಳೆಯ ದಾಖಲೆ ಉಡೀಸ್: ಅಭಿಷೇಕ್, ಪಾಂಡೆ ಅಬ್ಬರ; ಜಿಂಬಾಬ್ವೆಗೆ 257 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿದ ಭಾರತ!

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

SCROLL FOR NEXT