Toxic Big Update: ಯಶ್ ನಟನೆಯ ಟಾಕ್ಸಿಕ್ ಚಿತ್ರದಿಂದ ಕರೀನಾ ಕಪೂರ್ ಔಟ್, ನಯನತಾರಾ ಇನ್?

ಕರೀನಾ ಕಪೂರ್ ಕೆಜಿಎಫ್ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ಜೊತೆ ಟಾಕ್ಸಿಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಅಭಿಮಾನಿಗಳ ಸಂತೋಷವನ್ನು ಹಿಮ್ಮುಡಿಗೊಳಿಸಿತ್ತು.
ಕರೀನಾ ಕಪೂರ್
ಕರೀನಾ ಕಪೂರ್
Updated on

ಕರೀನಾ ಕಪೂರ್ ಕೆಜಿಎಫ್ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ಜೊತೆ ಟಾಕ್ಸಿಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಅಭಿಮಾನಿಗಳ ಸಂತೋಷವನ್ನು ಇಮ್ಮಡಿಗೊಳಿಸಿತ್ತು. ಗೀತು ಮೋಹನ್‌ದಾಸ್ ನಿರ್ದೇಶನದ ಆಕ್ಷನ್ ಚಿತ್ರದಲ್ಲಿ ಕರೀನಾ ಮತ್ತು ಯಶ್ ಅವರನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಈಗ ತಾಜಾ ಸುದ್ದಿ ಹೊರಬಿದ್ದಿದೆ. ಅದರಂತೆ ಕರೀನಾ ಕಪೂರ್ ಚಿತ್ರದಿಂದ ಹೊರಬಂದಿದ್ದಾರೆ.

ಈ ಚಿತ್ರವು ನಟಿಯ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲು ಆಗಲಿತ್ತು. ಆದರೆ ಈಗ ಅವರು ಟಾಕ್ಸಿಕ್‌ನ ಭಾಗವಾಗಿಲ್ಲ. ಇದರ ಹಿಂದಿನ ಸರಳ ಕಾರಣ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ವರದಿಯ ಪ್ರಕಾರ, ಯಶ್ ಅಭಿನಯದ ಟಾಕ್ಸಿಕ್ ಚಿತ್ರದಿಂದ ಕರೀನಾ ನಿರ್ಗಮಿಸಲು ದಿನಾಂಕಗಳು ಕಾರಣ ಎಂದು ಹೇಳಲಾಗಿದೆ. ಚಿತ್ರದ ವೇಳಾಪಟ್ಟಿಗೆ ಅನುಗುಣವಾಗಿ ಡೇಟ್‌ಗಳನ್ನು ನಿರ್ವಹಿಸಲು ನಟಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ದೊಡ್ಡ ಯೋಜನೆಯನ್ನೇ ಕೈಬಿಡಲು ನಟಿ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಕರೀನಾ ಕಪೂರ್
ಟಾಕ್ಸಿಕ್ ಚಿತ್ರದಿಂದ ಕರೀನಾ ಕಪೂರ್ ಔಟ್; ಯಶ್‌ಗೆ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಜೋಡಿ!

ಈ ಮಧ್ಯೆ ಟಾಕ್ಸಿಕ್ ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ಯಶ್ ಅವರ ಸಹೋದರಿಯ ಪಾತ್ರದಲ್ಲಿ ನಟಿಸಲು ಈ ಹಿಂದೆ ಕರೀನಾ ಕಪೂರ್ ಖಾನ್ ಅವರಿಗೆ ಆಫರ್ ನೀಡಲಾಗಿತ್ತು. ಈ ಪಾತ್ರಕ್ಕೆ ಇದೀಗ ನಯನತಾರಾ ಆಸಕ್ತಿ ತೋರಿಸಿದ್ದಾರೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com