ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದು ಧೋನಿ ದಾಖಲೆ ಸಮಗೈದ ರಿಷಬ್!
ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಅವರು ಆರು ಕ್ಯಾಚ್ ಗಳನ್ನು ಹಿಡಿಯುವ ಮೂಲಕ ಎಂಎಸ್ ಧೋನಿ ದಾಖಲೆಯನ್ನು ಸಮಗಟ್ಟಿದ್ದಾರೆ...
ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಅವರು ಆರು ಕ್ಯಾಚ್ ಗಳನ್ನು ಹಿಡಿಯುವ ಮೂಲಕ ಎಂಎಸ್ ಧೋನಿ ದಾಖಲೆಯನ್ನು ಸಮಗಟ್ಟಿದ್ದಾರೆ.
2009ರಲ್ಲಿ ಎಂಎಸ್ ಧೋನಿ ನ್ಯೂಜಿಲ್ಯಾಂಡ್ ವಿರುದ್ಧದ ವಿಲ್ಲಿಂಗ್ಟನ್ ಟೆಸ್ಟ್ ನಲ್ಲಿ ಇನ್ನಿಂಗ್ಸ್‍ವೊಂದರಲ್ಲಿ ಆರು ಕ್ಯಾಚ್ ಗಳನ್ನು ಹಿಡಿದು ನೂತನ ದಾಖಲೆ ಬರೆದಿದ್ದರು. ಇದೀಗ ರಿಷಬ್ ಸಹ ಇನ್ನಿಂಗ್ಸ್‍ವೊಂದರಲ್ಲಿ ಆರು ಕ್ಯಾಚ್ ಗಳನ್ನು ಹಿಡಿಯುವ ಮೂಲಕ ಧೋನಿ ಹಾದಿಯಲ್ಲೇ ನಡೆಯುತ್ತಿದ್ದಾರೆ.
ರಿಷಬ್ ಪಂತ್ ಆಸ್ಟ್ರೇಲಿಯಾದ ಆಟಗಾರರಾದ ಉಸ್ಮಾನ್ ಖವಾಜ, ಪೀಟರ್ ಹ್ಯಾಂಡ್ಸ್ ಕ್ಯೂಬ್, ಟಿಮ್ ಪೈನ್, ಮಿಚೇಲ್ ಸ್ಟಾರ್ಕ್, ಟ್ರಾವಿಸ್ ಹೇಡ್ ಮತ್ತು ಜೋಶ್ ಹೇಜಲ್ವುಡ್ ಅವರ ಕ್ಯಾಚ್ ಗಳನ್ನು ಹಿಡಿದಿದ್ದಾರೆ.