253 ರನ್ ಟಾರ್ಗೆಟ್ ಅನ್ನು ಬೆನ್ನತ್ತಿದ್ದ ಕಿವೀಸ್ ಆಟಗಾರರು ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲಿತ್ತು. 150 ರನ್ಗಳಿಗೆ 6 ವಿಕೆಟ್ ಕಳೆದುಕೊಂಡರೂ, ನಂತರ ತಂಡಕ್ಕೆ ಆಲ್ ರೌಂಡರ್ ಜೇಮ್ಸ್ ನೀಶಮ್ ಆಸರೆಯಾಗಿದ್ದರು. ಹೊಡಿ ಬಡಿ ಆಟದ ಮೂಲಕ ತಂಡಕ್ಕೆ ರನ್ ಗಳ ಸುರಿಮಳೆ ಸುರಿಸಿದ್ದರು. 32 ಎಸೆತಗಳಲ್ಲಿ 44 ರನ್ ಗಳನ್ನು ನೀಶಮ್ ಸಿಡಿಸಿದ್ದರು. ಇದರಲ್ಲಿ ನಾಲ್ಕು ಬೌಂಡರಿ ಎರಡು ಸಿಕ್ಸರ್ ಒಳಗೊಂಡಿತ್ತು. ಇನ್ನೇನು ಪಂದ್ಯವನ್ನು ನ್ಯೂಜಿಲ್ಯಾಂಡ್ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎನ್ನುವಷ್ಟರಲ್ಲಿ ಧೋನಿ ತಮ್ಮ ಕೈ ಚಳಕ ತೋರಿಸಿದ್ದರು.