ಸಿಡ್ನಿ: ಭಾರತ ತಂಡದ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಕುರಿತು ಕೀಳು ಅಭಿರುಚಿಯ ಟ್ವೀಟ್ ಮಾಡುವ ಮೂಲಕ ಆಸಿಸ್ ಮಾಧ್ಯಮವೊಂದು ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದೆ.
ಈ ಹಿಂದೆ ಟೀಂ ಇಂಡಿಯಾ ಆಟಗಾರರ ಪ್ರವಾಸದ ಕುರಿತು ಆಸಿಸ್ ಮಾಧ್ಯಮಗಳು ಇದೀಗ ಭಾರತ ತಂಡದ ಹಿರಿಯ ಆಟಗಾರ ಎರಡನೇ ಏಕದಿನ ಪಂದ್ಯದ ಮ್ಯಾಚ್ ವಿನ್ನರ್ ಎಂಎಸ್ ಧೋನಿ ಕುರಿತಂತೆ ಕೀಳು ಅಭಿರುಚಿಯ ಟ್ವೀಟ್ ಮಾಡುವ ಮೂಲಕ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದೆ.
ಅಡಿಲೇಡ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದ ಕೊನೆಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ, ಧೋನಿ ಬಳಲಿದಂತೆ ಕಂಡು ಬಂದರು. ಬೌಂಡರಿಗಳಿಗಿಂತ, ಸಿಂಗಲ್ಸ್, ಡಬಲ್ಸ್ಗಳಲ್ಲೇ ಹೆಚ್ಚು ರನ್ ಗಳಿಸಿದ್ದ ಧೋನಿ, ಸುಸ್ತಿನಿಂದಾಗಿ ಮೈದಾನದಲ್ಲೇ ಕುಳಿತು ದಣಿವಾರಿಸಿಕೊಂಡಿದ್ದರು.. ಇದನ್ನೇ ನೆಪವಾಗಿಸಿಕೊಂಡ ಟೆಲಿಗ್ರಾಫ್ ಸ್ಪೋರ್ಟ್, ತನ್ನ ಟ್ವಿಟರ್ ಖಾತೆಯಲ್ಲಿ ತಲೆ ಮೇಲೆ ನೀರುಸುರಿದುಕೊಂಡ ವ್ಯಕ್ತಿಯ ಪೋಟೊ ಜೊತೆಗೆ, ಧೋನಿ ಮೈದಾನದಲ್ಲಿ ಸುಸ್ತಾಗಿ ಕೂತಿರುವ ಪೋಟೋ ಪೋಸ್ಟ್ ಮಾಡಿತ್ತು. ಅಲ್ಲದೇ ಧೋನಿ ಕೈಯಿಂದ ನಿಂತುಕೊಳ್ಳೋಕು ಆಗ್ತಿಲ್ಲ ಎಂದು ಬರೆದುಕೊಂಡಿತ್ತು. ಈ ಮೂಲಕ ಧೋನಿಗೆ ವಯಸ್ಸಾಗಿದೆ, ಅವರ ಆಟ ಮುಗಿದಿದೆ ಎಂದು ಪರೋಕ್ಷವಾಗಿ ಧೋನಿಯ ಸಾಮರ್ಥ್ಯವನ್ನ ಅವಮಾನ ಮಾಡಿದೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು, ಟೆಲಿಗ್ರಾಫ್ ಮಾಧ್ಯಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಭಾರತೀಯ ಕ್ರೀಡಾಭಿಮಾನಿಗಳಷ್ಟೇ ಅಲ್ಲದೇ ಆಸಿಸ್ ಕ್ರೀಡಾಭಿಮಾನಿಗಳೂ ಟೆಲಿಗ್ರಾಫ್ ಸ್ಫೋರ್ಟ್ಸ್ ಟ್ವೀಟ್ ಗೆ ಕಿಡಿಕಾರಿದ್ದಾರೆ.