ಭಾರತದ ಭರ್ಜರಿ ಬ್ಯಾಟಿಂಗ್: ಹ್ಯಾಮಿಲ್ಟನ್ ನಲ್ಲಿ ದಾಖಲಾಯ್ತು 2ನೇ ಗರಿಷ್ಠ ಮೊತ್ತ!

ಅತಿಥೇಯ ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿ 347 ರನ್ ಗಳ ಬೃಹತ್ ಪೇರಿಸಿದ ಭಾರತ ತಂಡ ದಾಖಲೆ ನಿರ್ಮಾಣ ಮಾಡಿದೆ.
ಹ್ಯಾಮಿಲ್ಟನ್ ನಲ್ಲಿ ದಾಖಲಾಯ್ತು 2ನೇ ಗರಿಷ್ಠ ಮೊತ್ತ!
ಹ್ಯಾಮಿಲ್ಟನ್ ನಲ್ಲಿ ದಾಖಲಾಯ್ತು 2ನೇ ಗರಿಷ್ಠ ಮೊತ್ತ!

ಹ್ಯಾಮಿಲ್ಟನ್: ಅತಿಥೇಯ ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿ 347 ರನ್ ಗಳ ಬೃಹತ್ ಪೇರಿಸಿದ ಭಾರತ ತಂಡ ದಾಖಲೆ ನಿರ್ಮಾಣ ಮಾಡಿದೆ.

ಹ್ಯಾಮಿಲ್ಟನ್ ನ ಸೆಡಾನ್ ಪಾರ್ಕ್ ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಶ್ರೇಯಸ್ ಅಯ್ಯರ್ ಆಕರ್ಷಕ ಶತಕ (103), ಕೊಹ್ಲಿ (51)ಮತ್ತು ರಾಹುಲ್ (79) ಭರ್ಜರಿ ಬ್ಯಾಟಿಂಗ್ ನೆರವಿನಿಂದಾಗಿ ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು 348 ರನ್ ಗಳ ಬೃಹತ್ ಗುರಿ ನೀಡಿದೆ. ಇದು ಈ ಕ್ರೀಡಾಂಗಣದ 2ನೇ ಬೃಹತ್ ಮೊತ್ತವಾಗಿದ್ದು, ಈ ಹಿಂದೆ ಈ ಕ್ರೀಡಾಂಗಣದಲ್ಲಿ 2014ರಲ್ಲಿ ವೆಸ್ಟ್ ಇಂಡೀಸ್ ತಂಡ 363 ರನ್ ಗಳನ್ನು ಪೇರಿಸಿತ್ತು. ಇದು ಈ ಮೈದಾನದಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ. ಆ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 203 ರನ್ ಗಳ ಅಂತರದಲ್ಲಿ ಜಯಭೇರಿ ಭಾರಿಸಿತ್ತು.

ಇದೇ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ 2007ರಲ್ಲಿ ಆಸ್ಟ್ರೇಲಿಯಾ ತಂಡ ಗಳಿಸಿದ್ದ 346 ರನ್ ಮೂರನೇ ಗರಿಷ್ಠ ಮೊತ್ತವಾಗಿದ್ದು, ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 1 ವಿಕೆಟ್ ಗಳ ಅಂತರದ ರೋಚಕ ಜಯ ಸಾಧಿಸಿತ್ತು. ಇನ್ನು 2015ರಲ್ಲಿ ಜಿಂಬಾಬ್ವೆ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಇದೇ ಮೈದಾನದಲ್ಲಿ 339ರನ್ ಗಳ ಪೇರಿಸಿತ್ತು. ಇದು ಈ ಮೈದಾನದಲ್ಲಿ ದಾಖಲಾದ 4ನೇ ಗರಿಷ್ಠ ಮೊತ್ತವಾಗಿದೆ. ಆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 62 ರನ್ ಗಳ ಅಂತರದಲ್ಲಿ ಜಯ ಸಾಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com