'ಸಂಜು ಸ್ಯಾಮ್ಸನ್‌ರನ್ನು ಕೈಬಿಟ್ಟಿಲ್ಲ, ಸದ್ಯಕ್ಕೆ ಆಡುತ್ತಿಲ್ಲ': ಜಿಂಬಾಬ್ವೆ ವಿರುದ್ಧ ಟಿ20ಐ ಸರಣಿಗೆ ಭಾರತ ತಂಡ ಪ್ರಕರಣ; BCCI ಸ್ಪಷ್ಟನೆ

ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗಲಿರುವ ಮೂರು ಪಂದ್ಯಗಳ ಟಿ20ಐ ಸರಣಿಗೆ 15 ಸದಸ್ಯರ ತಂಡವನ್ನು ಸೋಮವಾರ ಘೋಷಿಸಲಾಯಿತು. ಆರಂಭಿಕರಾಗಿ ಪ್ರಭ್ಸಿಮ್ರನ್ ಸಿಂಗ್, ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಪಟ್ಟಿಯಲ್ಲಿದ್ದಾರೆ.
Sanju Samson
ಸಂಜು ಸ್ಯಾಮ್ಸನ್‌
Updated on

ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಗೆ ಭಾರತ ತಂಡವನ್ನು ಪ್ರಕರಟಿಸಿದ್ದು, ತಂಡದಿಂದ ಸಂಜು ಸ್ಯಾಮ್ಸನ್ ಅವರನ್ನು ಹೊರಗಿಟ್ಟಿರುವ ಬಗ್ಗೆ ಕೇಳಿಬರುತ್ತಿರುವ ಗೊಂದಲವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪರಿಹರಿಸಿದೆ. ಸಂಜು ಸ್ಯಾಮ್ಸನ್ ಅವರಿಗೆ ವಿಶ್ರಾಂತಿ ನೀಡಲಾಗಿದೆ ಮತ್ತು ಅವರನ್ನು ಕೈಬಿಡಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗಲಿರುವ ಮೂರು ಪಂದ್ಯಗಳ ಟಿ20ಐ ಸರಣಿಗೆ 15 ಸದಸ್ಯರ ತಂಡವನ್ನು ಸೋಮವಾರ ಘೋಷಿಸಲಾಯಿತು. ಆರಂಭಿಕರಾಗಿ ಪ್ರಭ್ಸಿಮ್ರನ್ ಸಿಂಗ್, ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಪಟ್ಟಿಯಲ್ಲಿದ್ದಾರೆ. ಇಂಗ್ಲೆಂಡ್ vs ಭಾರತ 2ನೇ ಟಿ20ಐನಲ್ಲಿ ಪ್ಲೇಯಿಂಗ್ XI ನಲ್ಲಿ ವೈಭವ್ ಸೂರ್ಯವಂಶಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ಕೊನೆಯ ಮೂರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸ್ಯಾಮ್ಸನ್ ಅವರನ್ನು ಹೊರಗಿಡಲಾಗಿದೆ.

ಸುದ್ದಿಸಂಸ್ಥೆ ಪಿಟಿಐ ಪ್ರಕಾರ, ಸಂಜು ಸ್ಯಾಮ್ಸನ್ ಜಿಂಬಾಬ್ವೆಯಲ್ಲಿ ಆಡುತ್ತಿರಲಿಲ್ಲ ಮತ್ತು ಆದ್ದರಿಂದ ಅವರನ್ನು ಸರಣಿಗೆ ತಂಡಕ್ಕೆ ಸೇರಿಸಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಮೂಲವೊಂದು ಹೇಳಿದೆ. ಕೇರಳದ ವಿಕೆಟ್ ಕೀಪರ್-ಬ್ಯಾಟರ್ 2026ರ ಏಷ್ಯನ್ ಗೇಮ್ಸ್ ತಂಡದ ಭಾಗವಾಗಿದ್ದ ಹಿರಿಯ ಆಟಗಾರನಾಗಿದ್ದು, ಜಿಂಬಾಬ್ವೆ ಸರಣಿಯಲ್ಲಿ ಯುವಕರಿಗೆ ಅವಕಾಶ ನೀಡುವ ಸಲುವಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

'ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಸಂಜುಗೆ ವಿಶ್ರಾಂತಿ ನೀಡಿರುವುದರಲ್ಲಿ ಆಶ್ಚರ್ಯ ಏನಿದೆ? ಹೀಗೆ ಹೇಳುತ್ತಿರುವ ಜನರು ಅವರು ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ತಂಡದಲ್ಲಿದ್ದಾರೆ ಎಂದು ತಿಳಿದುಕೊಳ್ಳಬೇಕು. ಆದ್ದರಿಂದ ಆಯ್ಕೆ ಸಮಿತಿಯನ್ನು ಟೀಕಿಸುವವರು ಸ್ವಲ್ಪ ಹೋಂ ವರ್ಕ್ ಮಾಡಬಹುದು. ಸ್ಯಾಮ್ಸನ್ ಆಡದಿದ್ದಾಗ ಅವರನ್ನು ಹೊತ್ತುಕೊಂಡು ಹೋಗುವುದರಲ್ಲಿ ಅರ್ಥವೇನು? ಅವರು ಹಿರಿಯ ಆಟಗಾರ' ಎಂದು sಮೂಲಗಳು ತಿಳಿಸಿವೆ.

ಸ್ಯಾಮ್ಸನ್ ತಮ್ಮ ಟಿ20ಐ ವೃತ್ತಿಜೀವನದಲ್ಲಿ ನಿರಂತರವಾಗಿ ನೀರಸ ಪ್ರದರ್ಶನ ನೀಡುತ್ತಿದ್ದಾರೆ. ವರ್ಷದ ಆರಂಭದಲ್ಲಿ, ಅವರು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದರು. 5 ಪಂದ್ಯಗಳಲ್ಲಿ 46 ರನ್ ಗಳಿಸಿದರು. ನಂತರ ಅವರು ಭಾರತದ ಟಿ20 ವಿಶ್ವಕಪ್ 2026ರ ಹೀರೋ ಆದರು, ನಾಕೌಟ್ ಹಂತಗಳಲ್ಲಿ 97*, 89 ಮತ್ತು 89 ರನ್ ಗಳಿಸಿದರು. ಅವರನ್ನು ಪ್ಲೇಯರ್ ಆಫ್ ದ ಟೂರ್ನಮೆಂಟ್‌ ಎಂದು ಹೆಸರಿಸಲಾಯಿತು. ನಂತರ, ಸ್ಯಾಮ್ಸನ್ ಐಪಿಎಲ್ 2026ರ 14 ಪಂದ್ಯಗಳಲ್ಲಿ 477 ರನ್ ಗಳಿಸಿದರು. ನಂತರ, ಐರ್ಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ 0 ಮತ್ತು 5 ರನ್ ಗಳಿಸಿದರೆ ಮತ್ತು ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲನೇ ಪಂದ್ಯದಲ್ಲಿ 1 ರನ್ ಗಳಿಸಿದರು.

ಜಿಂಬಾಬ್ವೆ ವಿರುದ್ಧದ T20I ಸರಣಿಗೆ ಭಾರತ ತಂಡ

ಶ್ರೇಯಸ್ ಅಯ್ಯರ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ, ಮಯಾಂಕ್ ಯಾದವ್, ಪ್ರಭ್ರಿಮ್ರನ್ ಸಿಂಗ್ (ವಿಕೆಟ್ ಕೀಪರ್).

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com