ಶುಭಮನ್ ಗಿಲ್ ಭಾರತದ ಟಿ20 ತಂಡಕ್ಕೆ ಮರಳುತ್ತಾರಾ?; ಸ್ಫೋಟಕ ಭವಿಷ್ಯ ನುಡಿದ ಭಾರತದ ಮಾಜಿ ಆಟಗಾರ!

ಈಮಧ್ಯೆ, ಭಾರತದ ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ, ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಅವರನ್ನು ಐರ್ಲೆಂಡ್ T20I ಗಳಿಂದ ಹೊರಗಿಡುವ ಮೂಲಕ ಆಯ್ಕೆದಾರರು ಅವಕಾಶವನ್ನು ಕಳೆದುಕೊಂಡಿದ್ದಾರೆ ಎಂದಿದ್ದಾರೆ.
Shubman Gill
ಶುಭಮನ್ ಗಿಲ್
Updated on

ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಆಟಗಾರರು ಐರ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ಪ್ರಭಾವ ಬೀರುವಲ್ಲಿ ವಿಫಲವಾದರು. ಭಾರತದ ಕ್ರಿಕೆಟ್ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಟೀಂ ಇಂಡಿಯಾ ಐರ್ಲೆಂಡ್ ವಿರುದ್ಧ ಸರಣಿ ಸೋಲು ಕಂಡಿದೆ. ಎರಡೂ ಟಿ20ಐ ಪಂದ್ಯಗಳಲ್ಲಿಯೂ ಆರಂಭಿಕ ಆಟಗಾರರು ಇಬ್ಬರೂ ಗೋಲ್ಡನ್ ಡಕ್‌ಗೆ ಔಟಾದರು. ಸತತ ಸೋಲುಗಳು ಬ್ಯಾಟ್ಸ್‌ಮನ್‌ಗಳ ವಿರುದ್ಧ ಭಾರಿ ಟೀಕೆಗೆ ಕಾರಣವಾಯಿತು ಮತ್ತು ವೈಭವ್ ಸೂರ್ಯವಂಶಿ ಅವರನ್ನು ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಿಕೊಳ್ಳದ ಬಗ್ಗೆ ಹಲವಾರು ಅಭಿಮಾನಿಗಳು ಮತ್ತು ಹಿರಿಯ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶುಭಮನ್ ಗಿಲ್ ನಿಧಾನವಾಗಿ ಭಾರತದ ಟಿ20ಐ ಸೆಟಪ್‌ಗೆ ಮರಳುತ್ತಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಭವಿಷ್ಯ ನುಡಿದಿದ್ದಾರೆ. ಎರಡನೇ ಟಿ20ಐ ಮುಖಾಮುಖಿಯಲ್ಲಿ ಭಾರತ ಸೋತ ನಂತರ, ಮಂಜ್ರೇಕರ್ ಐಪಿಎಲ್‌ನಲ್ಲಿ ಗಿಲ್ ಅವರ ಪ್ರದರ್ಶನ ಮತ್ತು ಇಂಗ್ಲೆಂಡ್‌ನಲ್ಲಿ ಅವರ ದಾಖಲೆಯನ್ನು ಉಲ್ಲೇಖಿಸಿ ಅವರು ಟಿ20ಐಗಳಲ್ಲಿ ಇನ್ನೂ ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದರು.

'ಜನರಿಗೆ ಅರ್ಥವಾಗಲೆಂದು ಹೇಳುತ್ತಿದ್ದೇನೆ. ಶುಭಮನ್ ಗಿಲ್ ಈಗ ಟಿ20 ಬ್ಯಾಟ್ಸ್‌ಮನ್ ಮತ್ತು ಅದ್ಭುತ ಐಪಿಎಲ್ ಕೂಡ ಆಡಿದ ವ್ಯಕ್ತಿ. ನಾನು ನಾಯಕತ್ವದ ಬಗ್ಗೆ ಮಾತನಾಡುತ್ತಿಲ್ಲ, ಆದರೆ ನೀವು ನಿಧಾನವಾಗಿ ಟಿ20 ಕ್ರಿಕೆಟ್‌ಗೆ ಮತ್ತೆ ಪರಿಚಯಿಸಲು ಬಯಸುವ ಆಟಗಾರ ಅವರಾಗಿದ್ದಾರೆ. ಏಕೆಂದರೆ, ಅವರು ಈ ರೀತಿಯ ಪರಿಸ್ಥಿತಿಗಳಲ್ಲಿ ಸ್ವಲ್ಪ ಹೆಚ್ಚು ಆಳವನ್ನು ಹೊಂದಿದ್ದಾರೆ ಮತ್ತು ಇಂಗ್ಲೆಂಡ್ ಮತ್ತು ವಿದೇಶಗಳಲ್ಲಿ ಆಡಿದಾಗ ನಾವು ನೋಡಿದಂತೆ ಅವರಿಗೆ ಒಗ್ಗಿಕೊಂಡಿದ್ದಾರೆ' ಎಂದು ಮಂಜ್ರೇಕರ್ ಸೋನಿ ಸ್ಪೋರ್ಟ್ಸ್‌ನಲ್ಲಿ ಹೇಳಿದರು.

'ಮುಂದೆ ಶುಭಮನ್ ಗಿಲ್‌ಗೆ ಅದು ದಾರಿಯಾಗಲಿದೆ. ಅದು ತಕ್ಷಣ ಆಗುವುದಿಲ್ಲ, ಆದರೆ ನೀವು ನಿಧಾನವಾಗಿ ಅವರನ್ನು ಭಾರತದ T20 ಯೋಜನೆಗಳಲ್ಲಿ ನೋಡಲು ಪ್ರಾರಂಭಿಸುತ್ತೀರಿ ಎಂದು ನಾನು ಭಾವಿಸುತ್ತೇನೆ' ಎಂದರು.

Shubman Gill
'ಶುಭಮನ್ ಗಿಲ್ ಹುಟ್ಟುತ್ತಲೇ ನಾಯಕನಲ್ಲ': ಅಫ್ಘಾನಿಸ್ತಾನ ವಿರುದ್ಧ ಸರಣಿ ಸ್ವೀಪ್ ಮಾಡಿದರೂ ನಾಯಕತ್ವ ಪ್ರಶ್ನಿಸಿದ ಮನೋಜ್ ತಿವಾರಿ

ಈಮಧ್ಯೆ, ಭಾರತದ ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ, ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಅವರನ್ನು ಐರ್ಲೆಂಡ್ T20I ಗಳಿಂದ ಹೊರಗಿಡುವ ಮೂಲಕ ಆಯ್ಕೆದಾರರು ಅವಕಾಶವನ್ನು ಕಳೆದುಕೊಂಡಿದ್ದಾರೆ ಮತ್ತು ಈಗ ಮುಂಬರುವ ಇಂಗ್ಲೆಂಡ್ ವಿರುದ್ಧದ ವೈಟ್-ಬಾಲ್ ಸರಣಿಗೆ ಅವರನ್ನು ಬೆಂಬಲಿಸಬೇಕು ಎಂದಿದ್ದಾರೆ

ನಿರೀಕ್ಷೆಗಳಿಗೆ ವಿರುದ್ಧವಾಗಿ, ಸೂರ್ಯವಂಶಿ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತದ ಹಿರಿಯ ಆಟಗಾರರ ತಂಡಕ್ಕೆ ಪದಾರ್ಪಣೆ ಮಾಡಲಿಲ್ಲ, ಆ ಸರಣಿಯಲ್ಲಿ ಭಾರತ 0-2 ಅಂತರದಲ್ಲಿ ಸೋತಿತು. ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿ ಮೇಲೆ ಇದೀಗ ಎಲ್ಲರ ಕಣ್ಣು ನೆಟ್ಟಿದ್ದು, ಯುವ ಬ್ಯಾಟಿಂಗ್ ಪ್ರತಿಭೆ ಮತ್ತೊಮ್ಮೆ ಚೊಚ್ಚಲ ಅಂತರರಾಷ್ಟ್ರೀಯ ಕ್ಯಾಪ್ ಪಡೆಯುವ ಸಾಲಿನಲ್ಲಿದ್ದಾರೆ.

1983ರ ವಿಶ್ವಕಪ್ ವಿಜೇತ ಸೈಯದ್ ಕಿರ್ಮಾನಿ, ಬೆಲ್‌ಫಾಸ್ಟ್‌ನಲ್ಲಿ 15 ವರ್ಷದ ಬಾಲಕನನ್ನು ಹೊರಗಿಡುವ ನಿರ್ಧಾರ ತಪ್ಪು ಮತ್ತು ಇಂಗ್ಲೆಂಡ್ ವಿರುದ್ಧ ಅವರನ್ನು ಬೆಂಬಲಿಸುವಂತೆ ತಂಡದ ಆಡಳಿತವನ್ನು ಒತ್ತಾಯಿಸಿದರು.

'ಅವರನ್ನು ಐರ್ಲೆಂಡ್ ವಿರುದ್ಧ ಆಡಿಸದಿರುವುದು ತಪ್ಪು. ಭಾರತ ತಂಡ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೋತ ನಂತರ ಎರಡನೇ ಟಿ20 ಪಂದ್ಯದಲ್ಲಿ ಅವರನ್ನು ನೋಡದಿರುವುದು ನನಗೆ ನಿಜಕ್ಕೂ ಆಶ್ಚರ್ಯ ತಂದಿತು. ನಾವೆಲ್ಲರೂ ಏನಾಯಿತು ಎಂಬುದನ್ನು ನೋಡಿದ್ದೇವೆ. ಪಂದ್ಯದ ಸಂಪೂರ್ಣ ಸಮಯ ಅವರನ್ನು ಡ್ರೆಸ್ಸಿಂಗ್ ಕೋಣೆಯಲ್ಲಿ ಕುಳಿತುಕೊಳ್ಳಲು ಬಿಡುವ ಬದಲು ಅವರನ್ನು ಭಾರತ ಪ್ಲೇಯಿಂಗ್ XIನಲ್ಲಿ ಸೇರಿಸಿಕೊಳ್ಳುವಲ್ಲಿ ನಾವು ಹೆಚ್ಚಿನ ದೃಢಸಂಕಲ್ಪ ತೋರಿಸಬೇಕು' ಎಂದು ಹೇಳಿದರು.

'ಅವರು ಒಬ್ಬ ಸೂಪರ್ ಪ್ರತಿಭೆ. ಅವರು ಒಬ್ಬ ಮನರಂಜನೆಕಾರ. ನಾನು ಕ್ರಿಕೆಟ್ ನೋಡುವುದೇ ಅವನಿಂದಾಗಿ. ಈ ಸರಣಿ ಕುರಿತು ಅವರ ಸುತ್ತವೇ ಮಾರ್ಕೆಟಿಂಗ್ ನಡೆದಿದೆ. ಪ್ರಸಾರಕರನ್ನು ನೋಡಿ... ನಾವು ಅವರನ್ನು ಟ್ರೇಲರ್‌ಗಳಲ್ಲಿ ನೋಡುತ್ತೇವೆ ಆದರೆ ಮುಖ್ಯ ಚಿತ್ರದಲ್ಲಿ ನೋಡುವುದಿಲ್ಲ, ಇದೇನಿದು?' ಎಂದು ಕಿರ್ಮಾನಿ ಪ್ರಶ್ನಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com