IPL 2026: Virat Kohliಯ 10 ವರ್ಷಗಳ ಹಳೆಯ ಸಾರ್ವಕಾಲಿಕ ಐಪಿಎಲ್ ದಾಖಲೆಗೂ ಕುತ್ತು ತಂದ Vaibhav Sooryavanshi

ಈಗಾಗಲೇ ಕ್ರಿಕೆಟ್ ಜಗತ್ತಿನ ಖ್ಯಾತನಾಮ ಬೌಲರ್ ಗಳ ಮೊದಲ ಎಸೆತಗಳಲ್ಲೇ ಸಿಕ್ಸರ್ ಸಿಡಿಸಿರುವ ವೈಭವ್ ಸೂರ್ಯವಂಶಿ ದಾಖಲೆಗಳನ್ನೆಲ್ಲಾ ಪುನರ್ ನಿರ್ಮಿಸುತ್ತಿದ್ದಾರೆ.
Vaibhav Suryavanshi and Virat Kohli
ವೈಭವ್ ಸೂರ್ಯವಂಶಿ ಹಾಗೂ ವಿರಾಟ್ ಕೊಹ್ಲಿ
Updated on

ಮುಂಬೈ: ಭಾರತದ ಉದಯೋನ್ಮುಖ ಆಟಗಾರ ಹಾಗೂ ರಾಜಸ್ತಾನ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ (Vaibhav Sooryavanshi) ಇದೀಗ ಆರ್ ಸಿಬಿಯ ರನ್ ಮೆಷಿನ್ ವಿರಾಟ್ ಕೊಹ್ಲಿ (Virat Kohli) ಅವರ ಐತಿಹಾಸಿಕ ಸಾರ್ವಕಾಲಿಕ ದಾಖಲೆಗೂ ಕುತ್ತು ತಂದಿದ್ದಾರೆ.

ಐಪಿಎಲ್ 2026ರ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಮೂಲಕ ದಾಖಲೆಗಳ ಪುಸ್ತಕವನ್ನೇ ಮರುಬರೆಯುತ್ತಿರುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಕ್ರಿಕೆಟ್ ಜಗತ್ತಿನ ಖ್ಯಾತನಾಮ ಬೌಲರ್ ಗಳ ಮೊದಲ ಎಸೆತಗಳಲ್ಲೇ ಸಿಕ್ಸರ್ ಸಿಡಿಸಿರುವ ವೈಭವ್ ಸೂರ್ಯವಂಶಿ ದಾಖಲೆಗಳನ್ನೆಲ್ಲಾ ಪುನರ್ ನಿರ್ಮಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಅವರ ಗರಿಷ್ಟ ಸಿಕ್ಸರ್ ದಾಖಲೆಯನ್ನೂ ಮುರಿದಿದ್ದರು. ಇದೀಗ ಆರ್ ಸಿಬಿಯ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ಸಾರ್ವಕಾಲಿಕ ದಾಖಲೆಗೂ ಹತ್ತಿರವಾಗುತ್ತಿದ್ದಾರೆ.

ಕೊಹ್ಲಿಯ ಸಾರ್ವಕಾಲಿಕ ದಾಖಲೆ

10 ವರ್ಷಗಳ ಹಿಂದೆ ಅಂದರೆ 2006ರಲ್ಲಿ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ಬ್ಯಾಟಿಂಗ್‌ಗೆ ಹೊಸ ಅರ್ಥ ನೀಡಿದ್ದರು. IPL 2016ರಲ್ಲಿ ಅವರು ನಾಲ್ಕು ಶತಕಗಳು, ಏಳು ಅರ್ಧಶತಕಗಳು ಸೇರಿದಂತೆ ಒಟ್ಟು 973 ರನ್‌ಗಳನ್ನು ಸಿಡಿಸಿ ಐಪಿಎಲ್ ನಲ್ಲಿ ಗರಿಷ್ಠ ರನ್ ಪೇರಿಸಿದ ವಿಶ್ವದಾಖಲೆ ನಿರ್ಮಿಸಿ ಅಚ್ಚರಿ ಮೂಡಿಸಿದ್ದರು. ನಿಯಂತ್ರಿತ ಆಕ್ರಮಣಶೀಲತೆ ಮತ್ತು ಅಸಾಧಾರಣ ಸ್ಥಿರತೆಯ ಅದ್ಭುತ ಉದಾಹರಣೆಯಾಗಿದ್ದ ಆ ಸೀಸನ್, ಇಂದಿಗೂ IPL ಇತಿಹಾಸದ ಶ್ರೇಷ್ಠ ವೈಯಕ್ತಿಕ ಪ್ರದರ್ಶನವೆಂದು ಪರಿಗಣಿಸಲಾಗಿದೆ.

ಕೊಹ್ಲಿಗೇ ಕಿರೀಟ ಕೊಟ್ಟಿದ್ದ ಆವೃತ್ತಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2025ರಲ್ಲಿ ತಮ್ಮ ಮೊದಲ IPL ಟ್ರೋಫಿ ಗೆದ್ದಿರಬಹುದು. ಆದರೆ ಕೊಹ್ಲಿ ತಮ್ಮ “ಕಿರೀಟ”ವನ್ನು ಬಹಳ ಹಿಂದೆಯೇ, 2016ರಲ್ಲೇ ಗೆದ್ದಿದ್ದರು. ಅಂದಿನ ಟೂರ್ನಿಯಲ್ಲಿ ಕೊಹ್ಲಿ ಬರೊಬ್ಬರಿ 973 ರನ್‌ಗಳನ್ನು ಸಿಡಿಸಿ ಟೂರ್ನಿ ಗರಿಷ್ಠ ರನ್ ಸಿಡಿಸಿದ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದರು.

ಕೊಹ್ಲಿ ದಾಖಲೆಗೂ ಕುತ್ತು

ಆದರೆ ಇಂತಹ ಅಪರೂಪದ ದಾಖಲೆಗೂ ವೈಭವ್ ಸೂರ್ಯವಂಶಿ ಕುತ್ತು ತಂದಿದ್ದಾರೆ. IPL 2026ರ ಅಂತಿಮ ಹಂತಕ್ಕೆ ಸಾಗುತ್ತಿರುವ ಈ ಸಂದರ್ಭದಲ್ಲಿ, ಕೊಹ್ಲಿಯ ಆ ಐತಿಹಾಸಿಕ ದಾಖಲೆ ಇದೀಗ ಅಪಾಯದಲ್ಲಿರುವಂತೆ ಕಾಣುತ್ತಿದೆ. ಅದೂ ಅವರ ಕಣ್ಣೆದುರೇ. ರಾಜಸ್ತಾನ ಪರ ಪ್ರತೀ ಪಂದ್ಯದಲ್ಲೂ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿರುವ 15 ವರ್ಷದ ವೈಭವ್ ಸೂರ್ಯವಂಶಿ ಈ ದಾಖಲೆಗೆ ಸನಿಹವಾಗುತ್ತಿದ್ದಾನೆ.

ಬುಧವಾರ ನಡೆದ Indian Premier League 2026 ಎಲಿಮಿನೇಟರ್ ಪಂದ್ಯದಲ್ಲಿ, Rajasthan Royals ಪರ ಆಡಿದ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 97 ರನ್ ಸಿಡಿಸಿ ತಂಡವನ್ನು Sunrisers Hyderabad ವಿರುದ್ಧ ಗೆಲುವಿನ ದಡಕ್ಕೆ ಕೊಂಡೊಯ್ದಿದ್ದರು.

ಈ ಸಿಡಿಲಬ್ಬರದ ಇನ್ನಿಂಗ್ಸ್‌ನೊಂದಿಗೆ ಸೂರ್ಯವಂಶಿ ತಮ್ಮ ಎರಡನೇ IPL ಸೀಸನ್‌ನಲ್ಲೇ ತಮ್ಮ ಒಟ್ಟು ರನ್ ಗಳಿಕೆಯನ್ನು 680 ರನ್‌ಗಳಿಗೆ ಏರಿದ್ದಾರೆ. ಇದರಿಂದ IPL ಇತಿಹಾಸದ ಶ್ರೇಷ್ಠ ವೈಯಕ್ತಿಕ ಸೀಸನ್‌ಗಳ ಪಟ್ಟಿಯಲ್ಲಿ ಅವರ ಹೆಸರು ಗಟ್ಟಿಯಾಗಿ ಸೇರಿದೆ.

ಕೊಹ್ಲಿ ದಾಖಲೆ ಮುರಿಯುತ್ತಾರಾ ವೈಭವ್ ಸೂರ್ಯವಂಶಿ?

ರಾಜಸ್ಥಾನ್ ರಾಯಲ್ಸ್‌ಗೆ ಗರಿಷ್ಠ ಇನ್ನೂ ಎರಡು ಪಂದ್ಯಗಳು ಮಾತ್ರ ಉಳಿದಿವೆ. ಹೀಗಾಗಿ ಕೊಹ್ಲಿಯ 973 ರನ್‌ಗಳ ದಾಖಲೆಯನ್ನು ಸೂರ್ಯವಂಶಿ ಮುರಿಯುವುದು ಬಹುಶಃ ಕಷ್ಟ. ಆದರೆ ಪ್ರಭಾವದ ದೃಷ್ಟಿಯಿಂದ ನೋಡಿದರೆ, ವೈಭವ್ ಸೂರ್ಯವಂಶಿ ಆಕ್ರಮಣ ಶೀಲ ಆಟ ನೋಡಿದರೆ, ಅದು ಅಸಾಧ್ಯವೆಂದೂ ಹೇಳಲು ಸಾಧ್ಯವಿಲ್ಲ.

IPL 2026ರಲ್ಲಿ ಸೂರ್ಯವಂಶಿಯ ಸ್ಟ್ರೈಕ್‌ರೇಟ್ 242.85 ಎಂಬ ಅಚ್ಚರಿಯ ಅಂಕಿ ತಲುಪಿದೆ. IPL ಇತಿಹಾಸದಲ್ಲೇ 240ಕ್ಕಿಂತ ಹೆಚ್ಚು ಸ್ಟ್ರೈಕ್‌ರೇಟ್‌ನೊಂದಿಗೆ 100 ರನ್‌ಗ ಗಳಿಸಿದ ಆಟಗಾರರೇ ಇಲ್ಲ. ಆದರೆ ಸೂರ್ಯವಂಶಿ ಈಗಾಗಲೇ 680 ರನ್ ಕಲೆಹಾಕಿದ್ದಾರೆ.

ಅದೂ ಕೇವಲ 15ನೇ ವಯಸ್ಸಿನಲ್ಲಿ! ವಿಶ್ವದ ಅತ್ಯಂತ ದೊಡ್ಡ ಟಿ20 ಲೀಗ್‌ನಲ್ಲಿ ತಮ್ಮ ಎರಡನೇ ಸೀಸನ್‌ನಲ್ಲೇ, ವಿಶ್ವದ ಶ್ರೇಷ್ಠ ವೇಗಿಗಳನ್ನೇ ಅವರು ಅಸಹಾಯಕರನ್ನಾಗಿ ಮಾಡಿದ್ದಾರೆ. ಜಸ್ ಪ್ರೀತ್ ಬುಮ್ರಾ, ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ರಂತಹ ದಿಗ್ಗಜ ಬೌಲರ್ ಗಳ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ತಮ್ಮ ತೋಳ್ಬಲ ತೋರಿಸಿದ್ದಾರೆ.

ಅಂತೆಯೇ ಹಾಲಿ ಟೂರ್ನಿಯಲ್ಲಿ ಅವರು ಈಗ ‘Most Valuable Player’ (MVP) ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿದ್ದಾರೆ ಮತ್ತು ಪ್ರಶಸ್ತಿ ಗೆಲ್ಲುವ ಬಲವಾದ ಸ್ಪರ್ಧಿಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com