

ಬೆಂಗಳೂರು: ವೃದ್ಧೆಯೊಬ್ಬರಿಗೆ ಖಾರದ ಪುಡಿ ಎರಚಿ ಸರ ಕದ್ದು ಪರಾರಿಯಾಗುತ್ತಿದ್ದ ಮಹಿಳೆಯನ್ನು ಬಂಧಿಸಿದ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಈಶ್ವರಿ (27) ಬಂಧಿತ ಮಹಿಳೆ. ರಾಘವೇಂದ್ರ ಕಾಲೋನಿ ವಾಸಿ ಅನ್ನಪೂರ್ಣಮ್ಮ ಅವರು ಕೆಂಪೇಗೌಡ ನಗರದಲ್ಲಿ ವಾಯುವಿಹಾರ ಮಾಡುವಾಗ ವಿಳಾಸ ಕೇಳುವ ನೆಪದಲ್ಲಿ ಬಂದ ಈಶ್ವರಿ, ಅನ್ನಪೂರ್ಣಮ್ಮ ಅವರ ಮುಖಕ್ಕೆ ಖಾರದ ಪುಡಿ ಎರಚಿದಲ್ಲದೇ ಕುತ್ತಿಗೆಗೆ ಚಾಕು ಇಟ್ಟು 20 ಸಾವಿರ ಬೆಲೆಬಾಳುವ 9 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಓಡುತ್ತಿದ್ದಳು. ಕೂಡಲೇ ಆಕೆಯನ್ನು ಹಿಂಬಾಲಿಸಿದ ಸಾರ್ವ ಜನಿಕರು ರಾಘ ವೇಂದ್ರ ಕಾಲೋನಿಯ ರಸ್ತೆ ಕೊನೆಯಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.