ಮೂವರಲ್ಲಿ ಇಬ್ಬರು ಬಂಧನ

ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ 6 ತಿಂಗಳ ಹಿಂದೆ ವ್ಯಕ್ತಿಯೊಬ್ಬನನ್ನು ಹತ್ಯೆಗೈದು ಪರಾರಿಯಾಗಿದ್ದ ಮೂವರು ಆರೋಪಿಗಳಲ್ಲಿ ಇಬ್ಬರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ 6 ತಿಂಗಳ ಹಿಂದೆ ವ್ಯಕ್ತಿಯೊಬ್ಬನನ್ನು ಹತ್ಯೆಗೈದು ಪರಾರಿಯಾಗಿದ್ದ ಮೂವರು ಆರೋಪಿಗಳಲ್ಲಿ ಇಬ್ಬರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ  ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಸುರೇಶ್ (23) ಮತ್ತು ದೇವನಹಳ್ಳಿ ನಿವಾಸಿ ಕೃಷ್ಣಪ್ಪನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಮುನಿರಾಜು ತಲೆಮರೆಸಿಕೊಂಡಿದ್ದಾನೆ. ಮೃತ  ವ್ಯಕ್ತಿಯನ್ನು ಚಿಂತಾಮಣಿ ತಾಲೂಕಿನ ಪಾಲೇನಹಳ್ಳಿ ನಿವಾಸಿ ಕೃಷ್ಣಪ್ಪ ಎಂದು ಗುರುತಿಸಲಾಗಿದೆ.

ಆರು ತಿಂಗಳ ಹಿಂದೆ ಕರ್ನಾಟಕ ಕೈಗಾರಿಕಾಭಿವೃದ್ದಿ ಪ್ರದೇಶದಲ್ಲಿ ಶವವೊಂದು ಬಿದ್ದಿರುವುದಾಗಿ ಪೊಲೀಸರಿಗೆ ಮಾಹಿತಿ ಬಂದಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು ಸ್ಥಳ ಪರಿಶೀಲನೆ  ನಡೆಸಿದಾಗ, ಆತ ದೇವನಹಳ್ಳಿ ನಿವಾಸಿ ಕೃಷ್ಣಪ್ಪ (35) ಎಂದು ಗುರುತಿಸಿದ್ದರು. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ವ್ಯಕ್ತಿಯನ್ನು ಹತ್ಯೆ ಮಾಡಿರುವ ವಿಚಾರ ತಿಳಿದುಬಂದಿತ್ತು. ಈ  ಸಂಬಂಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧಕಾರ್ಯ ನಡೆಸಿದ್ದರು. ನಂತರ ಅನುಮಾನದ ಮೇಲೆ ಸುರೇಶ್ ಮತ್ತು ಕೃಷ್ಣಪ್ಪರನ್ನು ವಶಕ್ಕೆ ಪಡೆದು  ವಿಚಾರಣೆಗೊಳಪಡಿಸಿದಾಗ ಹತ್ಯೆ ಪ್ರಕರಣ ಬಹಿರಂಗಗೊಂಡಿದೆ.

ಆರೋಪಿ ಸುರೇಶ್ ಪತ್ನಿಯೊಂದಿಗೆ ಮೃತ ಕೃಷ್ಣಪ್ಪ ಸಂಬಂಧ ಹೊಂದಿದ್ದರು. ಈ ವಿಚಾರವಾಗಿ ಸುರೇಶ್ ಮತ್ತು ಕೃಷ್ಣಪ್ಪ ನಡುವೆ ಗಲಾಟೆ ನಡೆದಿತ್ತು. ಅಲ್ಲದೇ, ಎರಡನೇ ಆರೋಪಿ ಕೃಷ್ಣಪ್ಪ ಹಾಗೂ  ಮೂರನೇ ಆರೋಪಿ ಮುನಿರಾಜು ಮೃತ ಕೃಷ್ಣಪ್ಪ ಜೊತೆ ಮದ್ಯ ಸೇವಿಸಿದ್ದಾರೆ. ನಂತರ ಕೆಐಎಡಿಬಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಜಗಳ ತೆಗೆದು ಕೃಷ್ಣಪ್ಪನ ಮರ್ಮಾಗಕ್ಕೆ ಬಲವಾಗಿ  ಹೊಡೆದಿದ್ದಾರೆ. ನಂತರ ಆತನ ಶವವನ್ನು ಅಲ್ಲೇ ಪೊದೆಯೊಳಗೆ ಎಸೆದು ಹೋಗಿದ್ದಾರೆ.

ಅಲ್ಲದೇ ಮೃತ ಕೃಷ್ಣಪ್ಪನ ಫೋನ್ ಬುಕ್ ಹಾಗೂ ಮೊಬೈಲ್‍ನನ್ನು ರೈಲ್ವೆ ಹಳಿ ಬಳಿ ಸುಟ್ಟು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಬ್ಬರು ನ್ಯಾಯಾಂಗ ಬಂಧನದಲ್ಲಿ ದ್ದು,  ತಲೆಮರೆಸಿಕೊಂಡಿರುವ ಮೂರನೇ ಆರೋಪಿ ಮುನಿರಾಜು ಪತ್ತೆಗಾಗಿ ಶೋಧಕಾರ್ಯ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com