

ಬೆಂಗಳೂರು: ಮಧ್ಯವಯಸ್ಕರಾಗಿದ್ದರೂ ಕೂಡ ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಕುಟುಂಬದವರ ಕಣ್ಣು ತಪ್ಪಿಸಿ ಆಗಾಗ ಸೇರುತ್ತಿದ್ದರು. ಆದರೆ, ಆತನಿಂದ ನಿರಂತರ ಸೆಕ್ಸ್ ಗಾಗಿ ಒತ್ತಾಯಿಸುತ್ತಿದ್ದ ಅವಳು ಆತನನ್ನು ಮನೆಗೆ ಹೋಗದಂತೆ ತಡೆಯುತ್ತಿದ್ದಳು. ಅವಳ ಒತ್ತಾಯದಿಂದ ರೋಸಿ ಹೋಗಿದ್ದ ಆತ ಕೊನೆಗೊಂದು ದಿನ ಆಕೆಯನ್ನು ಕೊಂದು ಈಗ ಕಂಬಿ ಎಣಿಸುತ್ತಿದ್ದಾನೆ!
ಕುಮಾರಸ್ವಾಮಿ (49) ಪ್ರೇಯಸಿ ಕೊಂದು ಜೈಲು ಸೇರಿದಾತ. ಈತ ಪದ್ಮಾ ಎಂಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಈತನಿಗಾಗಿ ತನ್ನ ಗಂಡ ನಾಗರಾಡ್ ನನ್ನು ಬಿಟ್ಟು ಕುಮಾರಸ್ವಾಮಿ ಜೊತೆ ಪದ್ಮಾ 15 ದಿನಗಳ ಹಿಂದೆ ಪರಾರಿಯಾಗಿದ್ದಳು. ಈ ನಡುವೆ ಜ.10 ರಂದು ಪದ್ಮಾ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬಸವೇಶ್ವರನಗರ ಪೊಲೀಸರು ಪದ್ಮಾಳ ಗಂಡ ನಾಗರಾಜ್ ನನ್ನು ವಿಚಾರಣೆಗೊಳಪಡಿಸಿದ್ದರು.
ನನ್ನ ಪತ್ನಿ ಪದ್ಮಾ ಕುಮಾರಸ್ವಾಮಿ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಆತನೊಂದಿಗೆ 15 ದಿಗಳ ಹಿಂದೆ ಓಡಿಹೋಗಿದ್ದಾಳೆ. ಆತನೇ ಕೊಲೆ ಮಾಡಿದ್ದಾನೆ ಎಂದು ವಿಚಾರಣೆ ವೇಳೆ ಪತಿ ಅನುಮಾನ ವ್ಯಕ್ತಪಡಿಸಿದ್ದ. ಮಾಹಿತಿ ಆಧರಿಸಿ ಕುಮಾರಸ್ವಾಮಿ ಮೊಬೈಲ್ ನಂಬರ್ ಕಂಡು ಹಿಡಿದು ಬಂಧಿಸಿದ್ದಾರೆ. ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ, ಪದ್ಮಾ ನನ್ನಿಂದ ಹೆಚ್ಚು ಸೆಕ್ಸ್ ಆಪೇಕ್ಷಿಸುತ್ತಿದ್ದಳು. ನನ್ನ ಪತ್ನಿ, ಮಕ್ಕಳನ್ನು ಭೇಟಿ ಮಾಡಲು ಅಡ್ಡಿಪಡಿಸುತ್ತಿದ್ದಳು. ಹೀಗಾಗಿ ನಾನೇ ಆಕೆಯನ್ನು ತಲೆದಿಂಬಿನಿಂದ ಹತ್ಯೆಗೈದೆ ಎಂದು ಬಾಯಿಬಿಟ್ಟಿದ್ದಾನೆ.