

ನ್ಯೂಯಾರ್ಕ್: ಹೆಚ್ಚೆಚ್ಚು ಭಾರತೀಯರು ಕೈಯಲ್ಲಿ ಸ್ಮಾರ್ಟ್ ಫೋನ್ ಹಿಡಿದು ಮಲಗುತ್ತಾರೆ ಎನ್ನುತ್ತದೆ ನೂತನ ಸಮೀಕ್ಷೆಯೊಂದು ಹಾಗೂ ತಮ್ಮ ಈ ರಾತ್ರಿ ಸಂಗಾತಿಯನ್ನು ಬಿಡುವ ಬದಲು ಲೈಂಗಿಕ ಕ್ರಿಯೆಯನ್ನೇ ಬಲಿ ಕೊಡಲು ಕೆಲವರು ಮುಂದಾಗಿದ್ದಾರೆ ಎಂದು ಕೂಡ ಈ ಸಮೀಕ್ಷೆ ತಿಳಿಸಿದೆ.
ಚೀನಾದ ಲೆನೋವಾ ಒಡೆತನದ ಮೊಟೊರೊಲಾ ಸಂಸ್ಥೆ ಏಳು ರಾಷ್ಟ್ರಗಳಲ್ಲಿನ ಸುಮಾರು ೭೦೦೦ ಜನರನ್ನು ಸಮೀಕ್ಷೆ ನಡೆಸಿ ಸ್ಮಾರ್ಟ್ ಫೋನ್ ಚಟದ ಬಗ್ಗೆ ಈ ಅಧ್ಯಯನ ನಡೆಸಿದೆ ಎಂದು ಫಿಸ್.ಆರ್ಗ್ ವರದಿ ಮಾಡಿದೆ.
ಸಮೀಕ್ಷೆಗೆ ಒಳಪಟ್ಟವರಲ್ಲಿ ೬೦% ಮಂದಿ ತಮ್ಮ ಸ್ಮಾರ್ಟ್ ಫೋನುಗಳನ್ನು ಹಿಡಿದು ಮಲಗುತ್ತಾರೆ ಎಂದು ತಿಳಿದುಬಂದಿದ್ದು ಈ ಅನುಪಾತ ಭಾರತ (೭೪%) ಮತ್ತು ಚೈನಾ (೭೦%) ಗಳಲ್ಲಿ ಅತಿ ಹೆಚ್ಚು ಎನ್ನಲಾಗಿದೆ.
ಸಮೀಕ್ಷೆಗೆ ಒಳಪಟ್ಟವರಲ್ಲಿ ಕೇವಲ ಆರು ಜನ ಮಾತ್ರ ಸ್ನಾನ ಮಾಡುವಾಗ ಸ್ಮಾರ್ಟ್ ಫೋನ್ ಬಳಸುವುದಾಗಿ ಹೇಳಿಕೊಂಡಿದ್ದು, ೪೦% ಜನ ತಮ್ಮ ನೆಚ್ಚಿನ ಗೆಳೆಯನಿಗೂ ಹೇಳದ ಗುಟ್ಟುಗಳನ್ನು ಫೋನಿಗೆ ಹೇಳುವುದಾಗಿ ತಿಳಿಸಿದ್ದಾರೆ.
ಆದರೆ ಫೋನಿನ ಜೊತಿಗಿನ ಸಂಬಧ ಅದ್ಭುತವಾದದ್ದೇನಲ್ಲ ಏಕೆಂದರೆ ಕೆಲವ ೩೯% ಜನ ತಮ್ಮ ಸ್ಮಾರ್ಟ್ ಫೋನಿನ ಬಗ್ಗೆ ಸಂತಸದಿಂದಿದ್ದರೆ, ೭೯% ಜನ ಅತಿ ಮುಖ್ಯವಾದ ಕ್ಷಣಗಳಲ್ಲಿ ಈ ಫೋನುಗಳು ತೊಂದರೆ ನೀಡುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೆ ಆರ್ ಸಿ ಸಂಶೋಧನೆ ನಡೆಸಿದ ಈ ಸಮೀಕ್ಷೆಯಲ್ಲಿ ಅಮೇರಿಕಾ, ಬ್ರಿಟನ್, ಬ್ರೆಜಿಲ್, ಚೈನಾ, ಸ್ಪೇನ್, ಮೆಕ್ಸಿಕೋ ಮತ್ತು ಭಾರತದ ೭೧೧೨ ಸ್ಮಾರ್ಟ್ ಫೋನ್ ಬಳಕೆದಾರರು ಪಾಲ್ಗೊಂಡಿದ್ದಾರೆ.