ಆಶಾ ಕಾರ್ಯಕರ್ತೆಯರ ಪ್ರತಿಭಟನೆ 5ನೇ ದಿನಕ್ಕೆ ; ಅಹೋರಾತ್ರಿ ಧರಣಿ: ಮುಖ್ಯಮಂತ್ರಿಗಳ ಮನವೊಲಿಕೆ ಪ್ರಯತ್ನ ವಿಫಲಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿಭಟನೆ ಹಿಂಪಡೆಯುವಂತೆ ಕಾರ್ಯಕರ್ತೆಯರ ಮನವೊಲಿಸಲು ಪ್ರಯತ್ನಿಸಿದರೂ, ಫಲ ಕೊಟ್ಟಿಲ್ಲ. ಪ್ರತಿಭಟನೆ ಇಂದು 5ನೇ ದಿನಕ್ಕೆ ಕಾಲಿಟ್ಟಿದೆ.
ಸಣ್ಣ ಈರುಳ್ಳಿ, ದೊಡ್ಡ ಬೆಲೆ: ಮಳೆಯ ಹೊಡೆತಕ್ಕೆ ಸಾಂಬಾರ್ ಈರುಳ್ಳಿ ದರ ಕೆ.ಜಿ ಗೆ ₹200; 18 ವರ್ಷಗಳಲ್ಲೇ ಅತಿ ಹೆಚ್ಚು!ಉತ್ಪಾದನಾ ಪ್ರದೇಶಗಳಿಂದ ಪೂರೈಕೆ ಕಡಿಮೆಯಾಗಿರುವುದರಿಂದ ಸಾಂಬಾರ್ ಈರುಳ್ಳಿಯ ಬೆಲೆ ನಿರಂತರವಾಗಿ ಹೆಚ್ಚಾಗಿದೆ. ನೆರೆಯ ತಮಿಳುನಾಡಿನಲ್ಲಿ ಸುರಿದ ಭಾರಿ ಮಳೆಯಿಂದ ಬೆಳೆ ಸಂಪೂರ್ಣ ಹಾನಿಯಾಗಿರುವುದು ಈರುಳ್ಳಿ ಕೊರತೆಗೆ ಪ್ರಮುಖ ಕಾರಣ.
ಡಿಸೆಂಬರ್ 1ರೊಳಗೆ ರೈತರ ಬ್ಯಾಂಕ್ ಖಾತೆಗಳಿಗೆ ₹5,000 ಬರ ಪರಿಹಾರ ಜಮೆ: ಡಿಸಿಎಂ ಪರಮೇಶ್ವರ್; Videoಹಸಿರು ಪಟ್ಟಿಯಲ್ಲಿ (ಗ್ರೀನ್ ಲಿಸ್ಟ್) ಸೇರ್ಪಡೆಯಾಗಿರುವ ಎಲ್ಲ ರೈತರಿಗೆ ಡಿಸೆಂಬರ್ 1ರೊಳಗೆ ಎರಡೂ ಕಂತುಗಳ ಪರಿಹಾರ ತಲುಪಲಿದೆ ಎಂದು ಪರಮೇಶ್ವರ್ ಹೇಳಿದರು. ನಿನ್ನೆ ಬೆಂಗಳೂರಿನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಎತ್ತಿನಹೊಳೆ ನೀರಿಗೆ ಕೇಂದ್ರದ ಅನುಮತಿ ಕೋರಿದ ರಾಜ್ಯ; ಒಪ್ಪಿಗೆ ಸಿಕ್ಕರೆ ವಾರದಲ್ಲೇ ತುಮಕೂರಿಗೆ ನೀರು..!ರಾಜ್ಯ ಸರ್ಕಾರದ ಭರವಸೆಯಂತೆ ಯೋಜನೆಯ ಮೊದಲ ಹಂತದಲ್ಲಿ ನವೆಂಬರ್ ಅಂತ್ಯದೊಳಗೆ ಪ್ರಾಯೋಗಿಕವಾಗಿ ತುಮಕೂರಿಗೆ ನೀರು ಹರಿಸಬೇಕಿದೆ.
₹16,000 ಕೋಟಿ ಗ್ರಾಮೀಣ ಪ್ಯಾಕೇಜ್: 'ಗುತ್ತಿಗೆದಾರರ ಜೇಬು ತುಂಬಿಸಲು ಹಣ ಬಿಡುಗಡೆ ಮಾಡಿಲ್ಲ, ದುರುಪಯೋಗ ಮಾಡಿದರೆ ಹುಷಾರ್!'ಗ್ರಾಮೀಣ ಪ್ರದೇಶಗಳ ಸ್ವರೂಪ ಬದಲಿಸುವ ಹಾಗೂ ಜನರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ₹16,000 ಕೋಟಿ ಮೀಸಲಿಡಲಾಗಿದೆ.
Praja Seva ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ: ದೂರು ಪರಿಹಾರದಲ್ಲಿ ವಿಳಂಬ ಮಾಡುವಂತಿಲ್ಲ; ಅಧಿಕಾರಿಗಳಿಗೆ 21 ದಿನಗಳ ಗಡುವು, ತಪ್ಪಿದರೆ ದಂಡ..!ನವೆಂಬರ್ 19ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 1902 ಸಹಾಯವಾಣಿ, ವಾಟ್ಸ್ಆ್ಯಪ್, ಸಾಮಾಜಿಕ ಜಾಲತಾಣಗಳು, ಸರ್ಕಾರಿ ಕಚೇರಿಗಳು, ನಾಗರಿಕ ಸೇವಾ ಕೇಂದ್ರಗಳು ಹಾಗೂ ಸಾರ್ವಜನಿಕ ಕುಂದುಕೊರತೆ ಸಭೆಗಳ ಮೂಲಕ ಸಲ್ಲಿಸುವ ದೂರುಗಳೂ ಇನ್ಮುಂದೆ ಸಕಾಲ ವ್ಯವಸ್ಥೆಯ ವ್ಯಾಪ್ತಿಗೆ ಬರಲಿವೆ.
ಮಹತ್ವದ ಕ್ಷಣ: ಬೈಕ್ ಟ್ಯಾಕ್ಸಿಗಳಿಗೆ ಸುಪ್ರೀಂ ಕೋರ್ಟ್ ಅನುಮತಿ; ರ್ಯಾಪಿಡೋ, ಊಬರ್ ಸ್ವಾಗತ!ಜನವರಿ 23 ರಂದು ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ರಾಜ್ಯ ಸಲ್ಲಿಸಿದ್ದ ಮೇಲ್ಮನವಿಯನ್ನುನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠವು ವಜಾಗೊಳಿಸಿದೆ.
ಸರಿಯಾಗಿ ಕೆಲಸ ಮಾಡಿಲ್ಲ ಅಂದ್ರೆ ಒಂದೇ ಗಂಟೆಯಲ್ಲಿ ಎತ್ತಂಗಡಿ: ನೂತನ ಕಮಿಷನರೇಟ್ಗಳಿಗೆ ಸಿಎಂ ವಾರ್ನಿಂಗ್!ಸರಿಯಾಗಿ ಕೆಲಸ ಮಾಡಲಿಲ್ಲ ಅಂದ್ರೆ ಒಂದೇ ಗಂಟೆಯೊಳಗೆ ಎತ್ತಂಗಡಿ ಮಾಡುತ್ತೇವೆ ಎಂದು ನೂತನವಾಗಿ ಆಯ್ಕೆಯಾಗಿರುವ ಐವರು ಕಮಿಷನರೇಟ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್ಚರಿಕೆ ನೀಡಿದರು.
ಸರ್ಕಾರದ ಯೋಜನೆ, ಅಭಿವೃದ್ಧಿ ಕಾಮಗಾರಿಗಳ ವಿವರ ಜನರಿಗೆ ಮುಕ್ತವಾಗಿ ಲಭ್ಯ: 'ಸಿಎಂ ಡ್ಯಾಶ್ಬೋರ್ಡ್' ಲೋಕಾರ್ಪಣೆ!ಈ ಡ್ಯಾಶ್ಬೋರ್ಡ್ (cmdashboard.karnataka.gov.in) ಮುಖ್ಯಮಂತ್ರಿ ವಿವಿಧ ಇಲಾಖೆಗಳ ಕಾರ್ಯವೈಖರಿಯನ್ನು ಪರಿಶೀಲಿಸಲು ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಮಂಡ್ಯ: ರಸ್ತೆ ಮಧ್ಯೆ ಬೈಕ್ ನಿಲ್ಲಿಸಿ 'ಅಲ್ಲಾಹು ಅಕ್ಬರ್' ಘೋಷಣೆ ಕೂಗಿದ ಮುಸ್ಲಿಂ ಯುವಕ; Videoಇಂದು ಬೆಳಿಗ್ಗೆ ಮಂಡ್ಯದ ಮಹಾವೀರ ವೃತ್ತದಲ್ಲಿ ಮುಸ್ಲಿಂ ಯುವಕನೊಬ್ಬ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್ಸ್ ಮುಂದೆ 'ಅಲ್ಲಾಹು ಅಕ್ಬರ್' ಘೋಷಣೆಗಳನ್ನು ಕೂಗಿ ಸ್ಥಳದಿಂದ ಪರಾರಿಯಾದ ಘಟನೆ ನಡೆದಿದೆ.
ಬೆಂಗಳೂರು: ಲಿವ್-ಇನ್ ಸಂಗಾತಿಯ ಮಗನ ಕೊಂದು ರೂಮ್ ಲಾಕ್ ಮಾಡಿದ ಪಾಪಿ; ಶವದ ಮುಂದೆ 3 ದಿನ ತಾಯಿ ನರಳಾಟ!ಈ ಅಮಾನವೀಯ ಘಟನೆಯು ನವೆಂಬರ್ 16 ರ ರಾತ್ರಿ ಪದ್ಮನಾಭನಗರದ ರಾಘವೇಂದ್ರ ಲೇಔಟ್ನಲ್ಲಿರುವ 'ಎಸ್ಆರ್ಆರ್ಕೆ ತುಳಸಿ ಅಪಾರ್ಟ್ಮೆಂಟ್ಸ್' (SRRK Tulasi Apartments) ನಲ್ಲಿ ನಡೆದಿದೆ.
ಬಡವರಿಗೆ ಸ್ವಂತ ನಿವೇಶನ: ಜನವರಿಗೆ ಮೊದಲ ಹಂತದಲ್ಲಿ 5 ಲಕ್ಷ ಸೈಟು ಹಂಚಿಕೆ- ಡಿಸಿಎಂ ಡಾ. ಜಿ. ಪರಮೇಶ್ವರ್ಬಡವರಿಗೆ ಸ್ವಂತ ನಿವೇಶನ ಒದಗಿಸುವ ಉದ್ದೇಶದಿಂದ ರೂಪಿಸಿರುವ 15 ಲಕ್ಷ ನಿವೇಶನಗಳ ಯೋಜನೆಯನ್ನು ಆದ್ಯತೆಯ ಮೇರೆಗೆ ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ಪರಮೇಶ್ವರ್ ತಿಳಿಸಿದರು.
ಬಸವ ಮಂಟಪ ಕೃತಿ ವಿವಾದ: ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಸ್ಥಾನದಿಂದ ಶಂಕರ್ ಬಿದರಿ ವಜಾಕ್ಕೆ ಆಗ್ರಹ!ಬಸವ ಮಂಟಪ ಕೃತಿಯಲ್ಲಿ ಬಸವಣ್ಣ ಬಗ್ಗೆ ಅಪಮಾನ ಮಾಡಲಾಗಿದೆ ಎಂದು ಲಿಂಗಾಯಿತರ ಕಿಡಿಕಾರಿದ್ದಾರೆ. ಈ ಮಧ್ಯೆ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಲೇಖಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ನಿನ್ನೆ ಸಂಪುಟ ಸಮ್ಮತಿ ನೀಡಿತ್ತು.
ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್: ಕೃಪಾ ಆಳ್ವಾ, ರಾಕೇಶ್ ಶೆಟ್ಟಿಗೆ ಬಿಗ್ ಶಾಕ್; ಜಾಮೀನು ಅರ್ಜಿ ವಜಾ; ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ!ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆ ಎದುರಿಸುತ್ತಿರುವ ಕೃಪಾ ಆಳ್ವಾ, ಖಾಸಗಿ ಸುದ್ದಿ ವಾಹಿನಿಯ ಮುಖ್ಯಸ್ಥ ಸೇರಿದಂತೆ ಆರು ಆರೋಪಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಇಂದು ವಜಾಗೊಳಿಸಿದೆ.
ಬಾಗಲಕೋಟೆ: ಪತಿ-ಪತ್ನಿ ನೇಣಿಗೆ ಶರಣು; ಅಪ್ಪ-ಅಮ್ಮನ ಜಗಳದ ನಡುವೆ ಇಬ್ಬರು ಮಕ್ಕಳು ಅನಾಥ!ಆತ್ಮಹತ್ಯೆ ಮಾಡಿಕೊಂಡ ದಂಪತಿಯನ್ನು 35 ವರ್ಷದ ಅಪ್ಪಾಶಿ ನಡುವಿನಮನಿ ಮತ್ತು 30 ವರ್ಷದ ರಾಜೇಶ್ವರಿ ನಡುವಿನಮನಿ ಎಂದು ಗುರುತಿಸಲಾಗಿದೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!