ಭಾರತದ ವೀಸಾ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ: ವಿದೇಶಿ ಪ್ರಯಾಣಿಕರ ಪ್ರವೇಶ ಸುಲಭ; ವರ್ಗಗಳು 13ರಿಂದ 9ಕ್ಕೆ ಇಳಿಕೆ!
ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರಜೆಗಳಿಗೆ ವೀಸಾ ಪ್ರಕ್ರಿಯೆಯನ್ನು ಸುಗಮಗೊಳಿಸುವ ಕಡೆಗೆ ಕೇಂದ್ರ ಸರ್ಕಾರವು ಪ್ರಮುಖ ಹೆಜ್ಜೆ ಇಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರವು ಭಾರತೀಯ ವೀಸಾ ವ್ಯವಸ್ಥೆಯನ್ನು ತರ್ಕಬದ್ಧಗೊಳಿಸಿದ್ದು ಸರಳಗೊಳಿಸಿದೆ.


