ಡ್ರೋನ್ ದಾಳಿ ಮೂಲಕ ಇರಾಕ್ ಪ್ರಧಾನಿ ಹತ್ಯೆ ಯತ್ನ: ಮೈನವಿರೇಳಿಸುವ ರೀತಿಯಲ್ಲಿ ಪಾರು

ಬಾಗ್ದಾದ್ ನ ಭದ್ರಕೋಟೆ ಎಂದೇ ಕರೆಯಲ್ಪಡುವ, ಸೇನೆಯ ಸರ್ಪಗಾವಲಿನಲ್ಲಿರುವ ಗ್ರೀನ್ ಜೋನ್ ಎಂಬಲ್ಲಿ ಈ ಘಟನೆ ನಡೆದಿದೆ ಎನ್ನುವುದು ತೀವ್ರ ಅಚ್ಚರಿಯ ಸಂಗತಿ.
ಇರಾಕ್ ಪ್ರಧಾನಮಂತ್ರಿ ಮುಸ್ತಾಫಾ ಅಲ್ ಕದಿಮಿ
ಇರಾಕ್ ಪ್ರಧಾನಮಂತ್ರಿ ಮುಸ್ತಾಫಾ ಅಲ್ ಕದಿಮಿ
Updated on

ಬಾಗ್ದಾದ್: ಇರಾಕ್ ಪ್ರಧಾನಿ ಮುಸ್ತಾಫಾ ಅಲ್ ಕದಿಮಿ ಅವರ ಹತ್ಯೆ ಸಂಚು ವಿಫಲಗೊಂಡು ಪ್ರಧಾನಿ ಸ್ವಲ್ಪದರಲ್ಲೇ ಪಾರಾದ ಆಘಾತಕಾರಿ ಘಟನೆ ಭಾನುವಾರ ನಡೆದಿದೆ. ಬಾಗ್ದಾದ್ ನ ಭದ್ರಕೋಟೆ ಎಂದೇ ಕರೆಯಲ್ಪಡುವ, ಸೇನೆಯ ಸರ್ಪಗಾವಲಿನಲ್ಲಿರುವ ಗ್ರೀನ್ ಜೋನ್ ಎಂಬಲ್ಲಿ ನೆಲೆಗೊಂಡ ಪ್ರಧಾನಿ ನಿವಾಸ ಬಳಿಯೇ ಈ ಘಟನೆ ನಡೆದಿದೆ ಎನ್ನುವುದು ತೀವ್ರ ಅಚ್ಚರಿಯ ಸಂಗತಿ.

ಶಸ್ತ್ರಸಜ್ಜಿತ ಡ್ರೋನ್ ಮೂಲಕ ಪ್ರಧಾನಿ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಪ್ರಧಾನಿಯ ಅಂಗರಕ್ಷಕರು ಸೇರಿದಂತೆ ಒಟ್ಟು 7 ಮಂದಿ ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.

ದಾಳಿ ಘಟನೆ ನಡೆದ ಸ್ವಲ್ಪ ಹೊತ್ತಿನಲ್ಲೇ ಇರಾಕ್ ಪ್ರಧಾನಿ ಮುಸ್ತಾಫಾ ಅಲ್ ಕದಿಮಿ ಟ್ವೀಟ್ ಮಾಡಿದ್ದು, ದೇವರ ದಯದಿಂದ ತಾವು ಸುರಕ್ಷಿತವಾಗಿದ್ದು, ಜನರೊಂದಿಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. 

ಅಲ್ಲದೆ ದಾಳಿ ಘಟನೆ ನಡೆದ ನಂತರ ಹಿಂದಿನ ದಿನವೇ ನಿಗದಿಯಾಗಿದ್ದ ಟಿವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ಶಾಂತಚಿತ್ತರಾಗಿ ಕಂಡುಬಂಡಿದ್ದು ಅಚ್ಚರಿಗೆ ಕಾರಣವಾಗಿದೆ. ಇದುವರೆಗೂ ಯಾರೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಶಿಯಾ ಬಂಡುಕೋರ ಸಂಘಟನೆ ಮತ್ತು ಭದ್ರತಾ ಪಡೆಗಳ ನಡುವೆ ಸಂಘರ್ಷದ ವಾತಾವರಣ ದೇಶದಲ್ಲಿ ನಿರ್ಮಾಣಗೊಂಡಿತ್ತು. ಇರಾಕ್ ಸಂಸತ್ ಚುನಾವಣಾ ಫಲಿತಾಂಶವನ್ನು ಶಿಯಾ ಬಂಡುಕೋರ ಪರ ಸಂಘಟನೆಗಳು ವಿರೋಧಿಸಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com