ದುಬೈ: ವಸತಿ ಸಂಕೀರ್ಣದಲ್ಲಿ ಭೀಕರ ಅಗ್ನಿ ಅವಘಡ; 4 ಮಂದಿ ಭಾರತೀಯರು ಸೇರಿ 16 ಮಂದಿ ಸಾವುದುಬೈನ ವಸತಿ ಸಂಕೀರ್ಣ ಕಟ್ಟಡವೊಂದರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ 4 ಮಂದಿ ಭಾರತೀಯರು ಸೇರಿದಂತೆ 16 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 10 ರೂ. ಹೆಚ್ಚಳತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಕರೆನ್ಸಿ ಅಪಮೌಲ್ಯದ ನಡುವೆ ನಗದು ಕೊರತೆ ಎದುರಿಸುತ್ತಿರುವ ಪಾಕಿಸ್ತಾನ, ಪೆಟ್ರೋಲ್ ಬೆಲೆಯನ್ನು ಲೀಟರ್ಗೆ 10 ರೂಪಾಯಿ ಹೆಚ್ಚಿಸಿದೆ. ಈ ಮೂಲಕ ಈಗಾಗಲೇ ಗಗನಕ್ಕೇರುತ್ತಿರುವ ಹಣದುಬ್ಬರದಿಂದ...
ಸುಡಾನ್ ಸೇನಾ ಸಂಘರ್ಷ: ಭಾರತದ ಪ್ರಜೆ ಸೇರಿ ಕನಿಷ್ಠ 65 ಮಂದಿ ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯಸುಡಾನ್ ನಡೆಯುತ್ತಿರುವ ಸೇನಾ ಸಂಘರ್ಷದಲ್ಲಿ ಓರ್ವ ಭಾರತೀಯ ಸೇರಿದಂತೆ ಕನಿಷ್ಠ 65 ಮಂದಿ ಸಾವಿಗೀಡಾಗಿದ್ದು, 500 ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗರ್ಲ್ ಫ್ರೆಂಡ್ ಪಡೆಯಲು, 5 ಇಂಚು ಎತ್ತರ ಬೆಳೆಯಲು 1.35 ಕೋಟಿ ಖರ್ಚು ಮಾಡಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಭೂಪಗರ್ಲ್ ಫ್ರೆಂಡ್ ಪಡೆಯಲು ಅಮೆರಿಕದ ಮಿನ್ನೇಸೋಟದ ವ್ಯಕ್ತಿಯೊಬ್ಬ ತನ್ನ ಎತ್ತರವನ್ನು ಐದು ಇಂಚುಗಳಷ್ಟು ಹೆಚ್ಚಿಸಿಕೊಳ್ಳಲು ಎರಡು ಕಾಲುಗಳನ್ನು ಉದ್ದಗೊಳಿಸುವ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ಇದಕ್ಕಾಗಿ ಆತ ಬರೊಬ್ಬರಿ $1,70,000 (ರೂ. 1.35 ಕೋಟಿ) ವೆಚ್ಚ ಮಾಡಿದ್ದಾನೆ.
ಜಪಾನ್ ಪ್ರಧಾನಿ ಭಾಷಣದ ವೇಳೆ ಸ್ಫೋಟ; ತಪ್ಪಿದ ದುರಂತ, ಸುರಕ್ಷಿತ ಪ್ರದೇಶಕ್ಕೆ ಫುಮಿಯೊ ಕಿಶಿಡಾ ಸ್ಥಳಾಂತರಜಪಾನ್ ರಾಷ್ಟ್ರದ ಪ್ರಧಾನಮಂತ್ರಿ ಫ್ಯೂಮಿಯೋ ಕಿಶಿಡಾ ಅವರು ಭಾಷಣ ಮಾಡುತ್ತಿದ್ದ ವೇಳೆ ಸ್ಫೋಟ ಸಂಭವಿಸಿರುವುದಾಗಿ ವರದಿಗಳಿಂದ ತಿಳಿದುಬಂದಿದೆ.
27,000 ಸಿಬ್ಬಂದಿ ತೆಗೆಯಲು ಕಷ್ಟವಾಗುತ್ತಿದೆ.. ಆದರೆ ಉತ್ತಮವಾಗಿ ಪಾವತಿಸುತ್ತೇವೆ: ಅಮೆಜಾನ್ ಸಿಇಒ27,000 ಸಿಬ್ಬಂದಿಗಳ ತೆಗೆಯಲು ಕಷ್ಟವಾಗುತ್ತಿದೆ.. ಆದರೆ ಅವರೆಲ್ಲರಿಗೂ ಉತ್ತಮವಾಗಿ ಪಾವತಿಸುತ್ತೇವೆ ಎಂದು ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಹೇಳಿದ್ದಾರೆ.
ಮೊಜಾಂಬಿಕಾ ದೇಶಕ್ಕೆ ಭಾರತದ ವಿದೇಶಾಂಗ ಸಚಿವ ಮೊದಲ ಭೇಟಿ! ‘ಮೇಡ್ ಇನ್ ಇಂಡಿಯಾ’ ರೈಲಿನಲ್ಲಿ ಎಸ್ ಜೈಶಂಕರ್ ಸವಾರಿವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು (External Affairs Minister S Jaishankar) ಮೊಜಾಂಬಿಕಾ (Mozambique) ಪ್ರವಾಸದಲ್ಲಿದ್ದು, ನಿನ್ನೆ ಗುರುವಾರ ‘ಮೇಡ್ ಇನ್ ಇಂಡಿಯಾ’ (Made in India) ರೈಲಿನಲ್ಲಿ ಸವಾರಿ ಮಾಡಿದರು.
ನಿಜವಾದ ಯುದ್ಧಕ್ಕೆ ಸಿದ್ಧರಾಗಿ: ಪಿಎಲ್ಎ ಗೆ ಕ್ಸಿ ಜಿನ್ಪಿಂಗ್ ಆದೇಶಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಇತ್ತೀಚೆಗೆ ಸಶಸ್ತ್ರ ಪಡೆಗಳ ಸದರ್ನ್ ಥಿಯೇಟರ್ ಕಮಾಂಡ್ ನೇವಿಯನ್ನು ಪರಿಶೀಲಿಸಿದರು. ಇದರೊಂದಿಗೆ, ದಕ್ಷಿಣ ಚೀನಾ ಸಮುದ್ರದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಸೈನಿಕರ ತರಬೇತಿ ಮತ್ತು ಯುದ್ಧದ ಸಿದ್ಧತೆಯ ಅಗತ್ಯವನ್ನು ಕ್ಸಿ ಜಿನ್ಪಿಂಗ್ ಒತ್ತಿ ಹೇಳಿದರು.
ರಷ್ಯಾ-ಉಕ್ರೇನ್ ಯುದ್ಧ: ಮತ್ತಷ್ಟು ಮಾನವೀಯ ನೆರವು ಕೋರಿ ಪ್ರಧಾನಿ ಮೋದಿಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಪತ್ರರಷ್ಯಾ- ಉಕ್ರೇನ್ ಕದನದಲ್ಲಿ ಮಧ್ಯಪ್ರವೇಶ ಮಾಡುವಂತೆ ಹಾಗೂ ಯುದ್ಧದಿಂದ ತತ್ತರಿಸಿರುವ ಉಕ್ರೇನ್ಗೆ ಹೆಚ್ಚುವರಿ ಮಾನವೀಯ ನೆರವು ನೀಡುವಂತೆ ಕೋರಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಮ್ಯಾನ್ಮಾರ್: ಪ್ರತಿಭಟನಾಕಾರರ ಮೇಲೆ ವೈಮಾನಿಕ ದಾಳಿ; ಮಕ್ಕಳು ಸೇರಿ 100 ಮಂದಿ ದಾರುಣ ಸಾವುಮ್ಯಾನ್ಮಾರ್ ಮಿಲಿಟರಿ ಆಡಳಿತ ವಿರೋಧಿಸಿ ದಂಗೆ ಎದ್ದಿದ್ದ ಜನರ ಮೇಲೆ ನಡೆಸಿದ ವೈಮಾನಿಕ ದಾಳಿಯಿಂದ ಮಂಗಳವಾರ ಮ್ಯಾನ್ಮಾರ್ನಲ್ಲಿ ಮಕ್ಕಳು ಸೇರಿದಂತೆ 100ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಾಳಿಯನ್ನು ಅಮೆರಿಕ ಹಾಗೂ ಹಲವಾರು ದೇಶಗಳು ಬಲವಾಗಿ ಖಂಡಿಸಿವೆ.
ಪಿಒಕೆ ಪ್ರಧಾನಿ ಸ್ಥಾನದಿಂದ ಸರ್ದಾರ್ ತನ್ವೀರ್ ಇಲ್ಯಾಸ್ ರನ್ನು ಅನರ್ಹಗೊಳಿಸಿದ ಕೋರ್ಟ್!ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ಸರ್ದಾರ್ ತನ್ವೀರ್ ಇಲ್ಯಾಸ್ ಭಾರೀ ಮುಖಭಂಗ ಅನುಭವಿಸಿದ್ದಾರೆ. ನ್ಯಾಯಾಲಯದ ನಿಂದನೆಗಾಗಿ ಪ್ರಧಾನಿ ಇಲ್ಯಾಸ್ ಅವರನ್ನು ಅನರ್ಹಗೊಳಿಸಲಾಗಿದೆ.
ಪಾಕಿಸ್ತಾನಕ್ಕಿಂತ ಭಾರತದಲ್ಲಿ ಮುಸ್ಲಿಮರು ಚೆನ್ನಾಗಿ ಜೀವನ ನಡೆಸುತ್ತಾರೆ, ಅವರ ಸಂಖ್ಯೆ ಭಾರತದಲ್ಲಿ ಬೆಳೆಯುತ್ತಲೇ ಇದೆ: ನಿರ್ಮಲಾ ಸೀತಾರಾಮನ್ಭಾರತ ದೇಶವು ವಿಶ್ವದಲ್ಲಿ ಎರಡನೇ ಅತಿದೊಡ್ಡ ಮುಸ್ಲಿಂ ಜನಸಂಖ್ಯೆಯ ನೆಲೆಯಾಗಿದೆ. ಅಲ್ಪಸಂಖ್ಯಾತರ ವಿಷಯಗಳಲ್ಲಿ ದೇಶವನ್ನು ದೂಷಿಸುವವರಿಗೆ ಇಲ್ಲಿನ ವಾಸ್ತವ ಸಂಗತಿಗಳ ಬಗ್ಗೆ ಯಾವುದೇ ಅರಿವು ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪರಾಗ್ ಅಗರ್ವಾಲ್ ಸೇರಿ ಟ್ವಿಟರ್ 3 ಮಾಜಿ ಅಧಿಕಾರಿಗಳಿಂದ ಎಲಾನ್ ಮಸ್ಕ್ ವಿರುದ್ಧ ಪ್ರಕರಣ ದಾಖಲು!ಟ್ವಿಟರ್ ಮಾಲೀಕ ಉದ್ಯಮಿ ಎಲಾನ್ ಮಸ್ಕ್ ವಿರುದ್ಧ ಪರಾಗ್ ಅಗರ್ವಾಲ್ ಸೇರಿದಂತೆ ಸಂಸ್ಥೆಯ 3 ಮಾಜಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಇರಾನ್: ಶಾಲಾ ಬಾಲಕಿಯರಿಗೆ ವಿಷ ಪ್ರಾಷನ ಮುಂದುವರಿಕೆ; ನವೆಂಬರ್ ನಿಂದ ಸುಮಾರು 5,000 ಪ್ರಕರಣ ವರದಿಕೆಲವು ತಿಂಗಳುಗಳಿಂದ ಇರಾನ್ ದೇಶವನ್ನು ಬೆಚ್ಚಿ ಬೀಳಿಸಿರುವ ನಿಗೂಢ ವಿದ್ಯಮಾನ ಮುಂದುವರೆದಿದ್ದು, ಶನಿವಾರ ಹಲವಾರು ಶಾಲೆಗಳಲ್ಲಿ ಡಜನ್ ಶಾಲಾ ಬಾಲಕಿಯರಿಗೆ ವಿಷ ಪ್ರಾಷನ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಜೀವಂತ ಮದ್ದು-ಗುಂಡುಗಳ ಸಹಿತ ತೈವಾನ್ ಮೇಲೆ ಚೀನಾ ಅಣಕುದಾಳಿ ಕಾರ್ಯಾಚರಣೆಜೀವಂತ ಮದ್ದು-ಗುಂಡುಗಳ ಸಹಿತ ಯುದ್ದ ವಿಮಾನಗಳ ಮೂಲಕ ತೈವಾನ್ ಮೇಲೆ ಚೀನಾ ಅಣಕುದಾಳಿ ಕಾರ್ಯಾಚರಣೆ ನಡೆಸಿದೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ವಾಣಿಜ್ಯಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?